ಕಥೆಗಾರ..


ವೀರಪ್ಪನ್   ಕನ್ನಡ ವಾಹಿನಿಗಳ ಹೈಲೈಟ್ .. ಕೆಲವರು ಸತ್ತರೂ ಹೀಗೆ ಬದುಕಿಬಿಡ್ತಾರೆ. ಮುಖ್ಯವಾಗಿ ವೀರಪ್ಪನ್ ಬಗ್ಗೆ ,ಆತನ ಸಹಚರರು ಗಲ್ಲಿಗೇರುವ ಬಗ್ಗೆ ವಾದಗಳು -ಚರ್ಚೆಗಳು ಅನುಭಗಳು ವಾಹಿನಿಗಳಲ್ಲಿ ಪ್ರಸಾರ ಆದರೂ ಅತಿ ಹೆಚ್ಚು ಗಮನ ಸೆಳೆದದ್ದು ಅಂದ್ರೆ ಜನಶ್ರೀ ವಾಹಿನಿಯಲ್ಲಿ ಬಿದರಿ ಸಾಹೇಬರ ಜೊತೆಗಿನ ಅನುಭವ ಕಥನ ಮತ್ತು ಟೀವಿ ನೈನ್ ನಲ್ಲಿ ಆಗ ವೀರಪ್ಪನ್-ಆತನ ಸಹಚರರಿಂದ ಮರಣ ಹೊಂದಿದ ಪೊಲೀಸ್ -ಪೇದೆಗಳ ಕುಟುಂಬವನ್ನು ಸಂದರ್ಶಿಸಿದ ಕಾರ್ಯಕ್ರಮ ಮನಸ್ಪರ್ಶಿ ಆಗಿತ್ತು.

ಏನೇ ಹೇಳಿ ದೊಡ್ದವರಿಗಿಂತ ಸಣ್ಣ ಕೆಲಸದಲ್ಲಿ ಇರುವವರ ಪರಿಸ್ಥಿತಿ ಕೆಟ್ಟದಾಗಿರುತ್ತದೆ... ಆ ಹೆಣ್ಣುಮಕ್ಕಳು ತಮ್ಮ  ಬಗ್ಗೆ ಹೇಳುತ್ತಾ.. ಅತಂತ್ರ ಬದುಕಿನ ಬಗ್ಗೆ ತಿಳಿಸುವಾಗ ಬದಲಾಗದ ಈ ಜಗತ್ತನ್ನು ಕುರಿತು ದುಃಖ ಅನ್ನಿಸುತ್ತೆ.
ಮತ್ತೊಮ್ಮೆ ವೀರಪ್ಪನ್ ಚಾನೆಲ್ಗಳ ಸರದಾರ...! ಮುತ್ತುಲಕ್ಷ್ಮಿ ಸಹ ...! 

 ಜನಶ್ರೀ ವಾಹಿನಿಯಲ್ಲಿ ಕಥೆಗಾರ ಅನ್ನುವ ಕಥಾ ಮಾಲಿಕೆ ಪ್ರತಿದಿನ ಪ್ರಸಾರ ಆಗುತ್ತಿದೆ.. ಇದು ಕನ್ನಡ ಮೊದಲ ಮೆಗಾ ಸೀರಿಯಲ್..ಕನ್ನಡದ ಎಲ್ಲ (ಸಾಧ್ಯವಾದಷ್ಟು ) ಕಥೆಗಾರರ ದೃಶ್ಯ ರೂಪ ಇಲ್ಲಿದೆ. ಟಿ.ಎನ್ . ಸೀತಾರಾಮ್ ಅವರ ಜೊತೆ,ಪಿ.ಶೇಷಾದ್ರಿ ,ನಾಗೇಂದ್ರ ಶಾ ಯಂತಹ ದೈತ್ಯ ಪ್ರತಿಭೆಗಳು ಈ ಮಾಲಿಕೆಯ ತಮ್ಮ ನಿರ್ದೇಶನ, ನಟನೆಯ ರುಚಿ ವೀಕ್ಷಕರಿಗೆ ನೀಡಿದ್ದಾರೆ .ಅನಂತ್ ಚಿನಿವಾರ್ ಮತ್ತು ಅವರ  ಸಹೋದ್ಯೋಗಿ ಪುನೀತ್ ಬಾರ್ಕೂರ್ ಅವರ ಮತ್ತೊಂದು ಸಾಧನೆ ಈ ಮಾಲಿಕೆಯ ಪ್ರಸಾರ.ಯಾರು ಈ ಮಾಲಿಕೆ ಮಿಸ್ ಮಾಡಿಕೊಂಡಿದ್ದಾರೋ ಅವರಿಗೆ ಸದವಕಾಶ ವೀಕ್ಷಿಸುವುದಕ್ಕೆ.
ಟಿ .ಎನ್ . ಸೀತಾರಾಮ್ ಮತ್ತು ಅವರ ಗ್ರೂಪ್ ಅಂದ್ರೆ ಸ್ವಲ್ಪ ಜಾಸ್ತಿನೆ ವಿಶೇಷ.. ಕಥೆಗಾರ್ ಸಹ ಅಂತಹ ಪಟ್ಟಿಗೆ ಸೇರುತ್ತದೆ.. ಪ್ರತಿದಿನ ರಾತ್ರಿ ಹತ್ತಕ್ಕೆ ....ತುಂಬಾ ಖುಷಿಕೊಡುವ ಕಥೆಗಾರ!

No comments: