
ನಮ್ಮನ್ನು ಅಗಲಿದ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ ಆತ್ಮಕ್ಕೆ ಶಾಂತಿ ದೊರಕಲಿ
ಸಾಮಾನ್ಯವಾಗಿ ನಾನು ತುಂಬಾ ಆಸ್ಥೆಯಿಂದ ಪುಸ್ತಕಗಳ ಬಿಡುಗಡೆಗೆ ಹೋಗುತ್ತಿದ್ದೆ ಮೊದಲು. ಆದರೇ ಅಲ್ಲಿನ ವಾತಾವರಣ ಮನಸ್ಸಿಗೆ ಹೆಚ್ಚು ಘಾಸಿ, ಕಿರಿಕಿರಿ ಮಾಡಿದ್ದರಿಂದ ಎಷ್ಟೇ ಆಪ್ತರಾಗಿದ್ದರೂ ತುಂಬಾ ತಡವಾಗಿ ಪುಸ್ತಕದ ಬಿಡುಗಡೆಗೆ ಹೋಗ್ತೀನಿ ಆದಷ್ಟೂ ಜನರಿಂದ ದೂರ ಇರುವಂತಹ ವಿಮುಖತೆ ಬೆಳೆದು ಬಿಟ್ಟಿದೆ. ಇನ್ನೂ ನಿಜ ಹೇಳ ಬೇಕು ಎಂದು ಅಂದರೇ ತುಂಬಾ ವಿಶ್ವಾಸವಾಗಿ, ವೈಯುಕ್ತಿಕವಾಗಿ ಕರೆದರೆ ಮಾತ್ರ ನಾನೀಗ ಬುಕ್ ರಿಲೀಸ್ ಗೆ ಹೋಗುವುದು. ಯಾವುದೇ ರೀತಿಯಲ್ಲೂ ಸ್ವಯಂ ಪ್ರೇರಿತವಾಗಿ ಹೋಗಲ್ಲ . ಮೊದಲೇ ಹೇಳಿದಂತೆ ಅನೇಕ ಘಟನೆಗಳು- ಕಾರಣಗಳು ಮನಕ್ಕೆ ಬೇಸರ ತಂದಿದೆ. ಅದು ಆತ್ಮೀಯರನ್ನು ಮತ್ತು ಅಲ್ಲದವರನ್ನು ಗುರುತಿಸುವ ಕೆಲಸದಲ್ಲಿ ಹೆಚ್ಚು ಮುಂದುವರೆಯುತ್ತಿಲ್ಲ :-) ಏನು ಮಾಡುವುದು ?
ರಘು ಅಪಾರ ಭೇಟಿ ಆಗಿದ್ದು ಭಾರತಿ ಕಾರ್ಯಕ್ರಮದಲ್ಲೇ! ಟೀವಿ ನೋಡಿ ಹತ್ತು ವರ್ಷವಾಯಿತು ಎಂದು ಹೇಳಿದ್ದು ಬರಹಗಾರ ಛಂದ ವಸುಧೇಂದ್ರ. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಕ್ಕ ವಸುಧೇಂದ್ರ ಅವರನ್ನು ಕೀಟಲೆ ಮಾಡಿದ್ದೆ ನನ್ನ ಬರಹ ಒಂದರಲ್ಲಿ.ಗೊತ್ತಲ್ಲ ನನ್ನ ಕೀಟಲೆ ಆರೋಗ್ಯಕರ. ಅದರ ಬಗ್ಗೆ ತಪ್ಪು ತಿಳಿಯುವವರ ಬಗ್ಗೆ ಏನೂ ಹೇಳೊಕೆ ಆಗಲ್ಲ. ವಸುಧೇಂದ್ರ ನಗುತ್ತಾ ಟೀವಿ ನೋಡಲ್ಲ ಅಂದಾಗ ಏನೂ ಹೇಳೋಕೆ ಆಗಲಿಲ್ಲ ಬಿಡಿ!
ನಾನು ಟೀವಿ ನೋಡೇ ನೋಡ್ತೀನಿ. ಅದು ನನ್ನ ಅಭ್ಯಾಸ. ಆದರೆ ಬರೆಯುವುದೇ ವೃತ್ತಿ ಆಗಿರುವುದರಿಂದ ಕನಿಷ್ಟ ಕೆಲವು ಸಂಗತಿಗಳನ್ನು ಓದೆ ಓದುತ್ತೇನೆ.. ಈ ವಿಷಯದಲ್ಲಿ ನಾನು ಹೆಲ್ಪ್ ಲೆಸ್ ;-)
ನ್ಯೂಸ್ ಚಾನೆಲ್ ವೀಕ್ಷಿಸುತ್ತಾ ಇರುವಾಗ ಚಂದನ್ ಶರ್ಮ ಸುವರ್ಣ ನ್ಯೂಸ್ ನಲ್ಲಿ ಕಾಣಿಸಿದರು. ಅರ್ರೇ ಅವರು ಅಲ್ಲೇ ಕೆಲಸ ಮಾಡುವುದು. ಆದರೇ ಇತ್ತೀಚೆಗೆ ಚಂದನ್ ಟಿ ಎನ್ ಸೀತಾರಾಂ ಅವರ ಮಹಾ ಪರ್ವ ಧಾರವಾಹಿಯಲ್ಲಿ ಕಾಣಿಸಿಕೊಂಡಿದ್ದರು ಸೀತಾರಂ ಆಸ್ಥಾನಕ್ಕೆ ಎಂಟ್ರಿಯಾದ ಹೊಸ ಪ್ರತಿಭೆ ಚಂದನ್ ನಟನೆ ಓಕೆ ಅನ್ನಿಸಿತು. ಆದರೇ ನ್ಯೂಸ್ ಓದುವಾಗ ಇರುಷ್ಟು ಚಂದ ಕಾಣ್ತಾ ಇರಲಿಲ್ಲ ಬಿಡಿ. ಆ ಧಾರವಾಹಿಯ ಸುಷ್ಮಾ ಭಾರದ್ವಾಜ್ ಒಳ್ಳೆಯ ಬರಹಗಾರ್ತಿ ಮತ್ತು ನಟಿ. ಆಕೆಯ ಪಾತ್ರ ಅತ್ಯಂತ ಆಸಕ್ತಿದಾಯಕ.ಈಕೆ ಸಹನನ್ನ ಎಫ್ಬಿ ಗೆಳತಿ. ಹೆಣ್ಣುಮಕ್ಕಳು ಬೇಗ ತಾಯಿತನದ ಮನಸ್ಥಿತಿ ಪಡೆದು ಬಿಡ್ತಾರೆ. ಈಕೆಯ ಅಸಿಸ್ಟೆಂಟ್ ಒಬ್ಬರು ಕೆಲಸ ಬಿಟ್ಟು (ಓದಲೆಂದು ಕಾಣುತ್ತೆ) ಹೋದಾಗ ತನ್ನ ಮಗನನ್ನು ದೂರ ಕಳುಹಿಸುವ ತಾಯಿಯಂತೆ ಭಾವನೆ ವ್ಯಕ್ತ ಪಡಿಸಿದ್ದರು. ಆಗ ಇಡೀ ಆಕೆಯ ಎಫ್ಬಿ ಫ್ರೆಂಡ್ಸ್ ಯಾರು, ಏನು, ಯಾವಾಗ ಮದುವೆ ಆದಿ ಅಂತೆಲ್ಲ ಕೇಳಿದ್ರು ಅಂತ ಈ ಹೆಣ್ಣು ಮಗಳು ಮತ್ತೊಂದು ಗೋಡೆ ಬರಹದಲ್ಲಿ ತಿಳಿಸಿದ್ದರು. ಇನ್ನು ಅನ್ ಮ್ಯಾರಿಡ್ ಈ ಚೆಲುವೆ :-) ಹೋಗ್ಲಿ ಟೀವಿಲಾದರೂ ಮ್ಯಾರೇಜ್ ಆಗ್ತಾರಾ ಅಂದ್ರೆ ನಮ್ಮ ಚಂದನ್ ಸ್ವಾಮಿ ಮದುವೆ ಆದಂಗೆ ಆಗಿ ಬಿಟ್ಟು ನ್ಯೂಸ್ ಓದೋಕೆ ಬಂದಿದ್ದಾರೆ. ಪಾಪದ ಹೆಣ್ಣುಮಗಳ ಬೇಸರ ಕೇಳೋರುಯಾರು ?!
No comments:
Post a Comment