ಮಧುವನ... ಮನುವನ ???



ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ಅವರ ಅಂತಿಮ ಪಯಣದ ನೇರ ಪ್ರಸಾರ ಕನ್ನಡ ವಾಹಿನಿಗಳು  ಮಾಡುತ್ತಿತ್ತು. ಈ ಕಾರ್ಯಕ್ರಮದ ವೀಕ್ಷಣೆ ಬಹುತೇಕ ಗ್ರಾಮೀಣ ಪ್ರದೇಶದವರಿಗೆ ಸಾಧ್ಯವಾಗಲಿಲ್ಲ. ಯಾವ ಅರಸ ಬಂದರೇನು  ಗ್ರಾಮೀಣ ಪ್ರದೇಶಗಳಲ್ಲಿ ಸದಾ ಕರೆಂಟ್ ಕೊರತೆ!ಮಹಾರಾಜರ ಅಕಾಲಿಕ ಮರಣ ಸಿಕ್ಕಾಪಟ್ಟೆ ನೋವು ಉಂಟು ಮಾಡಿದೆ ನನಗೆ. ಕೇವಲ 60 ರ ಹರೆಯದ ಮಹಾರಾಜರು ಇನ್ನೂ ಕನಿಷ್ಠ 20 ವರ್ಷಗಳಾದರೂ ಬದುಕಬೇಕಿತ್ತು. .. ವಿಧಿ ಆಟವೇನು ಬಲ್ಲವರು ಯಾರು?


ಈ ಕಾರ್ಯಕ್ರಮದ ನೇರ ಪ್ರಸಾರದ ಬಗ್ಗೆ ನಾನು ಮೊದಲು ಹೇಳಿದೆನಲ್ಲ. ನನ್ನ ಮನೆಯಲ್ಲಿ ಕೇವಲ ಮೂರು ಕನ್ನಡ ವಾರ್ತಾ ಚಾನೆಲ್ ಗಳು ಪ್ರಸಾರ ಆಗುವುದು. ಸುವರ್ಣ ನ್ಯೂಸ್, ಉದಯ ನ್ಯೂಸ್ ಹಾಗೂ ಟಿವಿ ನೈನ್. ಅಂತ್ಯಕ್ರಿಯೆ ನಡೆಯುತ್ತಿದ್ದ ಸ್ಥಳದ ಹೆಸರನ್ನು  ಟೀವಿ ಪರದೆಯ ಮೇಲೆ ಮೂರು ವಾಹಿನಿಗಳು ತೋರಿಸುತ್ತಿತ್ತು. ಎರಡು ವಾಹಿನಿಗಳು ಒಂದು ಹೆಸರನ್ನು ತೋರಿಸುತ್ತಿದ್ದರೆ, ಒಂದು ವಾಹಿನಿ ಬೇರೆ ಹೆಸರನ್ನು ತೋರಿಸುತ್ತಿತ್ತು. ಉದಯ ಮತ್ತು ಟೀವಿ ನೈನ್ ಮನುವನ ಎಂದು  ತೋರಿಸುತ್ತಿದ್ದು ಅದೇ ಹೆಸರನ್ನು ನಿರೂಪಕರು ಹೇಳುತ್ತಿದ್ದರು. ಆದರೇ ಸುವರ್ಣ ನ್ಯೂಸ್ ನಲ್ಲಿ ಮಧುವನ ಎಂದು ತೋರಿಸುತ್ತಾ ಅದೇ ಹೆಸರನ್ನು ಹೇಳುತ್ತಿದ್ದರು ನಿರೂಪಕರು. ನನಗೆ ಗೊತ್ತಿರುವ ಪ್ರಕಾರ ಮನುವನ ಮಹಾರಾಜರ ರುದ್ರ ಭೂಮಿಯೆ ಹೊರೆತು ಮಧುವನವಲ್ಲ! ಸುವರ್ಣ ನ್ಯೂಸ್ ಪ್ರಕಾರ ಮಧು ಮತ್ತು ಮನುವನ ಬೇರೆ ಬೇರೆನಾ ಅಥವ ಒಂದೇನಾ?

‘ಮನುವನ’ದಲ್ಲಿ ಸಮಾಧಿ
ಮೈಸೂರು: ಮಧುವನದ ಹಿಂಬದಿಯಲ್ಲಿ ಪಶ್ಚಿಮಕ್ಕಿರುವ ವೀಳ್ಯದೆಲೆ, ತೆಂಗು, ಅಡಿಕೆ ತೋಟದ ಮರಗಿಡಗಳ ಸಂದಿನಲ್ಲಿ ನುಸುಳಿ ನಡೆದರೆ ಆನೆ ಕರೋಟಿ ಸಿಗುತ್ತದೆ. ಹಾಗೆಯೇ ಮಧುವನದ ಬಲಕ್ಕೆ ಮಧುವನದ ವಿಸ್ತರಣೆಯೇನೋ ಅನ್ನುವಂತೆ ಇರುವ ವಿಶಾಲ ಆವರಣದಲ್ಲಿ ಪುಟ್ಟಪುಟ್ಟ ಸಮಾಧಿ, ಬೃಂದಾವನಗಳ ಸಮುಚ್ಛಯವೇ ಇದೆ. ಇದು ಮೈಸೂರು ಅರಸರ ಹಾಗೂ ಅವರ ವಂಶದವರ ರುದ್ರಭೂಮಿ ಮನುವನ.( ಕೃಪೆ : ವಾರ್ತಾ ಭಾರತಿ) 

ಲಿಂಕ್ ಕ್ಲಿಕ್ಕಿಸಿ:
http://www.vknews.in/2013/12/11/maysooru-king/

No comments: