ಆ ... ಜನ್ಮದ ಮಗಳು


ಕೆಲವು ಸಂಗತಿಗಳು ಸಕತ್ ಮಜಾ ಕೊಡುತ್ತೆ. ಆ ಸಂಗತಿ ಟೀವಿಯಲ್ಲಿ ಕಂಡಾಗ ನಗಬೇಕು ಅಥವಾ ಸುಮ್ಮನೆ ಇರ ಬೇಕೋ ಗೊತ್ತಿಲ್ಲ ಗೊತ್ತಾಗಲ್ಲ . ಅದರೂ ಅಂತಹ ಸಂಗತಿಗಳನ್ನು ನಾನು ಹೆಚ್ಚು ಮಜವಾಗಿ ಕಾಣ್ತೀನಿ. ನಾನು ಅನೇಕ ರೀತಿಯ ಕಾರ್ಯಕ್ರಮಗಳನ್ನು ವೀಕ್ಷಿಸುವಂತೆ   ಅಡುಗೆ ಕಾರ್ಯಕ್ರಮದತ್ತಲು ಸಹಿತ ಹೆಚ್ಚು ಗಮನ ಕೊಡ್ತೀನಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಒಗ್ಗರಣೆ ಡಬ್ಬಿಯಲ್ಲಿ ಪುನರ್ಜನ್ಮದ ಬಗ್ಗೆ ಕೆಲಸ ಮಾಡಿರುವ ಸ್ವಾಮಿಜಿ ಅಥವಾ ಗುರೂಜಿ ಅವರು ಸಹ ಆಗಾಗ ಬಂದು ವಿಶೇಷವಾದ ಅಡುಗೆಯನ್ನು  ಮಾಡುತ್ತಾರೆ  . ಪುನರ್ ಜನ್ಮದ ಬಗ್ಗೆ ಎಂತಹ ಸತ್ಯಗಳು ಇವರು ಹೇಳುತ್ತಾರೋ ಗೊತ್ತಿಲ್ಲ  ,ಆದರೆ ಬದುಕಿಗೆ ಬೇಕಾದ ಕೆಲವು ಸಂಗತಿಗಳನ್ನು ಕೇಳಿ ಅದರಂತೆ ನಡೆದು ಪ್ರಯೋಜನ ಹೊಂದಿರುವವರು ಇದ್ದಾರೆ. ಇವರು ಅಡುಗೆ ಮಾಡ್ತಾರಲ್ಲ ಆ ಸಂಗತಿಗೆ ಬರೋದಾದರೆ ಇತ್ತೀಚೆಗೆ ಒಂದು ಅಡುಗೆ ಹೇಳಿಕೊಟ್ರು. ನೀವು ನಂಬ್ತೀರೋ   ಇಲ್ವೋ ಅದನ್ನು ಅವರ ಐದನೇ ಜನ್ಮದ ಅಂದ್ರೆ ಈಗಾಗಲೇ ಪೂರೈಸಿರೋ ಜನ್ಮ ಒಂದರ ಮಗಳು ಈಗ ಅವರ ಆಫೀಸಲ್ಲಿ   ಕೆಲಸ ಮಾಡ್ತಾ ಇದ್ದಾರಂತೆ. ಇದು  ಆಕೆ ಹೇಳಿಕೊಟ್ಟ ಅಡುಗೆ ! ಆ  ಅಡುಗೆಗಿಂತ ಅವರ ಐದನೇ ಜನ್ಮದ  ಮಗಳ ಬಗ್ಗೆ ಹೆಚ್ಚು ಕುತೂಹಲ ಆಯ್ತು. ಮುಖ್ಯವಾಗಿ ಅಷ್ಟು  ಜನ್ಮಗಳು ಕಳೆದರೂ ಸಹ ಅಪ್ಪನನ್ನು ಹಿಂಬಾಲಿಸಿಕೊಂಡು ಬಂದಿರುವ ಆ ಹೆಣ್ಣುಮಗಳ ಸಂಗತಿ ಎಷ್ಟು ರೋಚಕ ಅಲ್ವ ? 


@@ ಇದೇ ವಾಹಿನಿಯಲ್ಲಿ ಪ್ರಸಾರ ಆಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಅದ್ಭುತವಾಗಿದೆ. ಪುನೀತ್ ರಾಜ್ ಕುಮಾರ್ ಮತ್ತು ರವಿ ಚಂದ್ರನ್ ಅವರ ತುಂಬಾ ಚಂದ ಇತ್ತು. ಕನ್ನಡ ಚಿತ್ರರಂಗದಲ್ಲಿ ಹೊಸತನಗಳನ್ನು ನೀಡಿರುವ ರವಿ ಮಾಮ ಅವರು ಸಿಲ್ಕ್ ಸ್ಮಿತಾ ಅವರ  ಸಾವಿನ ಬಗ್ಗೆ ಹೇಳುವಾಗ ಹೆಚ್ಚು ಬೇಜಾರು ಅನ್ನಿಸಿತು. ಎಷ್ಟೋ ಸಂಗತಿಗಳು ಹಾಗೆ ಆಗ ಬೇಕು ಅಂತ ಬರೆದಿದ್ದರೆ ಯಾರೇನು ಮಾಡೋಕೆ ಆಗಲ್ಲ..ಒಟ್ಟಾರೆ ಎರಡು ಎಪಿಸೋಡ್ ಗಳು ತುಂಬಾ ಆಸಕ್ತಿ ಹೆಚ್ಚಿಸಿತು. 
ರಮೇಶ್ ಕನ್ನಡದ ಫೈನೆಸ್ಟ್  ನಿರೂಪಕ.. ಆದರೆ ಈ ಕಾರ್ಯಕ್ರಮದಲ್ಲಿ ಮತ್ತಷ್ಟು ಇಷ್ಟ ಆಯ್ತು. ಈ ಕಾರ್ಯಕ್ರಮ ಸಾಕಷ್ಟು ಹಿಂದೆ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗಿದ್ದ ಜೀನ ಇಸಿ ಕ  ನಾಮ್ ಹೈ ನಂತೆ ನನಗೆ ಅನ್ನಿಸಿತು. ಅದರಲ್ಲಿ ಫಾರೂಕ್ ಶೇಖ್ ಒಂದಷ್ಟು ಎಪಿಸೋಡ್ ಮತ್ತು ಸುರೇಶ ಒಬೇರಾಯ್ ಒಂದಷ್ಟು ಎಪಿಸೋಡ್ ನಲ್ಲಿ ಕಾನ್ಸಿಕೊಂಡಿದ್ದರು. ಅತ್ಯಂತ ಸುಂದರ ಕಾರ್ಯಕ್ರಮಗಳಲ್ಲಿ ಒಂದಾಗಿತ್ತು ಅದು. ಈಗ ಅದೇ ಧಾಟಿಯ ಈ ಕಾರ್ಯಕ್ರಮವು ಸಹ ಸೂಪರ್ ಆಗಿದೆ.  

1 comment:

Badarinath Palavalli said...

ಪುನರ್ಜನ್ಮ ಕಾರ್ಯಕ್ರಮಗಳನ್ನು ನಾನೂ ಚಿತ್ರೀಕರಿಸಿದ್ದೇನೆ.
ಅಡುಗೆ ಕಾರ್ಯಕ್ರಮಗಳಲ್ಲಿ ನನ್ನ ಮೆಚ್ಚಿನ ಕಾರ್ಯಕ್ರಮ 'ಭಾನುವಾರದ ಬಾಡೂಟ'.

ರಮೇಶ್ ಅವರು ಸೂಕ್ಷ್ಮ ಸಂವೇದನಾಶೀಲ ವ್ಯಕ್ತಿತ್ವದ ಕಲಾವಿದ. ಅವರ ಪ್ರೀತಿಯಿಂದ ರಮೇಶ್ ಕಾರ್ಯಕ್ರಮವನ್ನು ನಾನೂ ಚಿತ್ರೀಕರಣ ಮಾಡಿದ್ದೇನೆ.