ಬ್ಯಾನ್ ??




ಸುದೀಪ್ ಮತ್ತು ರಮೇಶ್ ಅವರು ರಿಯಾಲಿಟಿ ಷೋನಲ್ಲಿ ಮಾಡುತ್ತಿರುವ  ನಿರೂಪಣೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಪ್ರೇಕ್ಷಕರು ಚಲನಚಿತ್ರಗಳಿಗೆ ಬರುವುದು ಕಡಿಮೆಯಾಗಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕಿರುತೆರೆಯಲ್ಲಿ ನಿರೂಪಣೆ ಮಾಡದಂತೆ ನಿರ್ಬಂಧ ಹೇರುವುದಕ್ಕೆ ಫಿಲ್ಮ್ ಚೇಂಬರ್‌ನಲ್ಲಿ ಚಿಂತನೆ ನಡೆಸಲಾಗುತ್ತಿದೆ.... 

ಇದನ್ನು ಓದಿ ನನಗೆ ............!!!
ಸಕತ್ ಆಶ್ಚರ್ಯ ಹಾಗೂ ನಗು ಬಂತು ನನಗೆ ಈ ಸುದ್ದಿ ಓದಿ.. ಕಾರಣ ಇಷ್ಟೇ ಈ ಪ್ರತಿಭಾವಂತ ಕಲಾವಿದರು ನಡೆಸಿಕೊಡುತ್ತಿರುವ ಕಾರ್ಯಕ್ರಮಗಳಿಂದ ಕನ್ನಡ ಚಿತ್ರರಂಗಕ್ಕೆ ಲಾಸ್ ಆಗ್ತಾ ಇದ್ದೀಯ? ವಾವ್ !ಪ್ರಾಯಶಃ ಫಿಲಂ ಚೇಂಬರ್ ನವರು ಮರೆತು ಹೋಗಿರ ಬೇಕು ಹಳೆಯ ದಿನಗಳನ್ನು. ಆಗ ತಪ್ಪದೆ ಮನೆ ಮಂದಿ ಎಲ್ಲ ಸಿನಿಮಾ ರಂಗಕ್ಕೆ ಹೋಗ್ತಾ ಇದ್ರೂ. ಈ ಕ್ಷಣವೂ ಆ ಸವಿ ಸುಂದರ ನೆನಪು ಮಾಡಿ ಕೊಳ್ತಾರೆ ಮಧ್ಯಮ ವರ್ಗದ ಹಿರಿಯ ಹೆಣ್ಣುಮಕ್ಕಳು. ಮುಖ್ಯವಾಗಿ ಆಗ ಥಿಯೇಟರ್  ಹತ್ರ ಹೋಗೋಕೆ ಸಭ್ಯ ಮಹಿಳೆಗೆ ಅಸಹ್ಯ ಅನ್ನಿಸ್ತಾ ಇರಲಿಲ್ಲ, ಸ್ವಚ್ಛ ಸುಂದರ ಕಥೆಗಳನ್ನು ಹೊಂದಿರುವಂತೆ  ಚಿತ್ರ ಮಂದಿರಗಳು ಇರ್ತಾ ಇತ್ತು. ಆದರೆ ಈಗ ಅದರಲ್ಲೂ ಬಡ ಹೆಣ್ಣುಮಕ್ಕಳು ಥಿಯೇಟರ್ ಆಸೆ ಬಿಡುವಂತೆ ಇದೆ ಗಬ್ಬು ಥಿಯೇಟರ್ ಗಳು ಅಲ್ಲದೆ, ಮುಖ್ಯವಾಗಿ ಹಣ ಇದ್ದವರಿಗೆ ಮಾಲ್ ಗಳು   ಸದಾ ಬಾಗಿಲು  ತೆರೆದಿರುತ್ತದೆ . ಆದರೆ ಹಣ ಇದ್ದವರು  ಹೆಚ್ಚಾಗಿ  ಆಯ್ಕೆ  ಮಾಡಿಕೊಳ್ಳುವ  ಭಾಷೆಯ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಸೊ ಮಧ್ಯಮ ವರ್ಗದವರಿಗೆ ?? ಈ ಸಮಸ್ಯೆ ಹೇಗೆ ದೂರ ಮಾಡ ಬೇಕು ಎನ್ನುವುದರ ಅರಿವೇ ಇಲ್ಲ ಸಿನಿಮಾದವರಿಗೆ..ಆದರೂ ಸಹ ಕನ್ನಡ ಚಿತ್ರ ಪ್ರೇಕ್ಷಕರನ್ನು ಸೆಳೆಯೋದು ಹೇಗೆ ಅಂತ ಪಾರ್ಟಿಗಳಲ್ಲಿ ಕುಳಿತು    ಚಿಂತೆ ಮಾಡ್ತಾ ಇರ್ತಾರೆ,ಸಿನಿಮಾ ಸಹ ಅತ್ಯುತ್ತಮ ಬೃಹತ್ ಉದ್ಯಮ , ಇದರಲ್ಲಿ ಹಣ ಹೂಡಿಕೆ ಮತ್ತು ಗಳಿಕೆ  ಆದರೆ ಹೂಡಿದ ಹಣವನ್ನು ಮತ್ತೆ ಪಡೆಯಲು ಮುಖ್ಯವಾಗಿ  ಅದರತ್ತ ಜನರನ್ನು ಮುಖ್ಯವಾಗಿ ಹೆಂಗಳೆಯರನ್ನು ಆಕರ್ಷಿಸುವ  ವಾತಾವರಣ ಕಲ್ಪಿತ ಆಗ ಬೇಕು.. ಕಿಚ್ಚ ಸುದೀಪ್ ಮತ್ತು ರಮೇಶ್ ಅವರು ರಿಯಾಲಿಟಿ ಷೋ ನಡೆಸುವುದರಿಂದ ಸಿನಿ ರಂಗಕ್ಕೆ ಲಾಸ್ ಆಗುತ್ತಾ? ವೆರಿ ಸಿಲ್ಲಿ.. ಈ ಇಬ್ಬರೇ ಚಿತ್ರರಂಗ ಆಳ್ತಾ ಇದ್ದಿದ್ದರೆ.. ಶರಣ್ ರಂತಹ ಕಲಾವಿದರ ಚಿತ್ರಗಳು ಸೂಪರ್ ಡೂಪರ್ ಹಿಟ್ ಫಲಿತಾಂಶ ಸುಳ್ಳು ಎಂದಾಗುತ್ತೆ.. ಅಧ್ಯಕ್ಷ  ದಂತಹ ಚಿತ್ರ ಜನರ ಕೈಗೆ ನೀಡಿರುವ ಶರಣ್,  ಸದಾ ಇಷ್ಟ ಆಗೋ ದರ್ಶನ್,ಪವರ್ ಸ್ಟಾರ್ ಪುನೀತ್ ಇವರ ಸಾಧನೆ ಬಗ್ಗೆ ಪ್ರಶ್ನೆ ಮೂಡುತ್ತೆ...! 
ಸುದೀಪ್ ಮತ್ತು ರಮೇಶ ನಿರೂಪಣೆ ಮಾಡದೆ   ಇದ್ರೂ ಜನರು ಸಲ್ಮಾನ್ ಖಾನ್ ಕಡೆಗೆ ಹೋಗ್ತಾರೆ ವಿನಃ  ಗಲೀಜಾಗಿರೋ ಥಿಯೇಟರ್ಗಳ ಕಡೆಗೆ ಬರಲ್ಲ.. ಬೇಸಿಕ್ ನೀಡ್ಸ್ ಸರಿ ಇಲ್ಲದ ಕಡೆ  ಜನರ ಆಯ್ಕೆ ಬೇರೆಯದ್ದೇ ಆಗಿರುತ್ತೆ.. ಇಂತಹ ನಿರ್ಧಾರಗಳು ನನ್ನಂತಹ ಸಾಮಾನ್ಯ ಪ್ರೇಕ್ಷಕರಿಗೆ ಸಕತ್ ನಗು ಮತ್ತು ಆಶ್ಚರ್ಯ ಉಂಟು ಮಾಡುತ್ತೆ! 

@@ ಅತ್ಯಂತ ಮನ ಸೆಳೆಯುತ್ತಿರುವ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್. ಪಬ್ಲಿಕ್ ಟೀವಿ ರಂಗಣ್ಣ ಅವರ ಮಾತುಕತೆ ಮತ್ತು ಬದುಕಿನ ಅನೇಕ ಸಂಗತಿಗಳು ಇಷ್ಟಪಟ್ಟು ನೋಡುವಂತೆ ಮಾಡಿತು. ಪಬ್ಲಿಕ್ ಟೀವಿಯ ಸಾರಥ್ಯದಲ್ಲಿ ಅನೇಕ ಹೊಸತನಗಳನ್ನು ಅದರಲ್ಲೂ ಹೆಣ್ಣುಮಕ್ಕಳಿಗೆ ಜಾಸ್ತಿ ಇಷ್ಟ ಆಗೋ ಹಾಗೆ ನಡೆಸಿಕೊಡುವ ರಂಗಣ್ಣ ತಮ್ಮ ಬದುಕಿನ ಬಗ್ಗೆ ಹೇಳಿದ ಅನೇಕ ಸಂಗತಿಗಳು  , ಮುಖ್ಯವಾಗಿ ದನದ ಬಗ್ಗೆ, ಹಾಡಿನ ಬಗ್ಗೆ ಎಲ್ಲವು ಆಸಕ್ತಿಯಿಂದ ಕೂಡಿತ್ತು..ಭದ್ರ ರಂಗಣ್ಣ ಆಮೇಲೆ ನಿಮ್ಮನ್ನು ಬ್ಯಾನ್ ಮಾಡೋ ಪ್ಲಾನ್ ಮಾಡಿ ಬಿಟ್ಟಾರು ;-)
ಸಂಡೆ ದಕ್ಷಿಣ ಭಾರತದ ಹೆಮ್ಮೆಯ ನಟ - ಕನ್ನಡಿಗ ಅರ್ಜುನ್ ಸರ್ಜಾ ಕಾರ್ಯಕ್ರಮ ವಾವ್  ಸೂಪರ್ ಫೈನ್. ಹಿರಿಯ ನಟ ರಾಜೇಶ್ ಅವರ ಹತ್ರ ಹೆಚ್ಚು ಮಾತಾಡೋಕೆ ಬಿಡ ಬೇಕಿತ್ತು.. ಹಿರಿಯ  ಕಲಾವಿದರಲ್ವ ಹಮ್ಮುಬಿಮ್ಮು ಇರಲ್ಲ.

1 comment:

Badarinath Palavalli said...

ಈ ವಾದವನ್ನು ಎರಡೂ ಮಗ್ಗುಲುಗಳ ಮೂಲಕ ಗಮನಿಸಿದರೆ,
ಸ್ಟಾರ್ v/s ನಿರ್ಮಾಪಕ
ಮತ್ತು
ಕಿರಿ ತೆರೆ v/s ಹಿರಿ ತೆರೆ

ಅಸಮಧಾನದ ಹೊಗೆಯ ಮೂಲ ಬಹುಶಃ ಅಸಹಾಯಕತೆಯೇ?