ಚೌಕಟ್ಟು

Image result for dasara images
ಇಂದು ಮಹಾಲಯ ಅಮಾವಾಸ್ಯೆ. ದಸರಾ ಸಂಭ್ರಮ ಆರಂಭವಾಗುವ ಖುಷಿ. ನಾಡ ಹಬ್ಬ ಅಂದ್ರೆ ಅತಿ ಹೆಚ್ಚಿನ ಸಂಭ್ರಮ ಉಂಟು ಮಾಡುವಂತಹದ್ದು.  ಬೊಂಬೆ ಇಡುವುದು ದಸರಾ ಖುಷಿಯ ಒಂದು ಬಹು ಮುಖ್ಯ ಭಾಗ. ಪ್ರತಿವರ್ಷ ಈ ಸಂಭ್ರಮ ಹೆಚ್ಚಾಗುವಂತೆ ಆಸಕ್ತರು ಬೊಂಬೆಗಳನ್ನು ವಿನೂತನವಾಗಿ ಜೋಡಿಸಿ ಕಣ್ಮನ ಸೆಳೆಯುತ್ತಾರೆ. ಸಾಂಪ್ರದಾಯಿಕ ಅಂಶಗಳ ಜೊತೆ ರಾಜಕೀಯ, ಸಾಮಾಜಿಕ, ಪ್ರತಿಯೊಂದು ಸಂಗತಿಗಳ ಬಗ್ಗೆ ಆದ್ಯತೆ ನೀಡುತ್ತಾರೆ. ಮಧ್ಯಮ ವರ್ಗದ ಹೆಣ್ಣುಮಕ್ಕಳು ಬಿಡಿ ಅವರ ವಿಷಯ ಹೇಳುವಷ್ಟೇ ಇಲ್ಲ. ನನ್ನ ಪತ್ರಿಕೆಗೆ ಒಬ್ಬ ಹೆಣ್ಣುಮಗಳನ್ನು ಸಂದರ್ಶನ ಮಾಡಿದ್ದೆ. ಆಕೆಯ ಇಷ್ಟದ ಕೆಲಸಗಳಲ್ಲಿ ಬೊಂಬೆ ಇಡೋದು ಸಹ ಸೇರಿತ್ತು. ವಿಶೇಷ ಅಂದ್ರೆ ಆಕೆ ಬೊಂಬೆಗೆಂದು ಒಂದು ಎರಡು ಮೂರು ಕೋಣೆಯನ್ನು ಮೀಸಲಿಡುತ್ತಾರೆ. ಅಲ್ಲಿ ಜೋಡಿಸುವ ಕೆಲಸ  ಸರಿಸುಮಾರು ಒಂದು ವಾರದ  ಮೊದಲಿನಿಂದಲೇ   ಆರಂಭವಾಗುತ್ತದೆ. ಪ್ರತಿಬಾರಿ ಹೊಸ ವಿಷಯಗಳನ್ನು ಬೊಂಬೆ ಜೋಡಣೆಯ ಮೂಲಕ  ತೋರಿಸುತ್ತಾರೆ. ಆದರೆ ಪ್ರತಿ ಸರ್ತಿ  ಅವರು ಮಾಡುವ ಒಂದು ಕೆಲಸ ಅಂದ್ರೆ,  ಬಂದವರಿಗೆ ತಾಂಬೂಲದ ಜೊತೆ ವಿಶೇಷ ಕಾಣಿಕೆ , ರವಿಕೆ ಬಟ್ಟೆ  ನೀಡಲು ಹಬ್ಬದ ಆರೇಳು ತಿಂಗಳಿನಿಂದಲೇ  ವಸ್ತುಗಳನ್ನು ಕೊಳ್ಳಲು ಆರಂಭ ಮಾಡುತ್ತಾರೆ. ಸಾಮಾನ್ಯ ಆರ್ಥಿಕ ಸ್ಥಿತಿ ಹೊಂದಿರುವ ಆಕೆಯ ಈ ಗುಣ ಮಾತ್ರ ಅತಿಸಾಮಾನ್ಯ. ಇಂತಹ ಮನಸ್ಥಿತಿ ಬಹಳಷ್ಟು ಹೆಣ್ಣುಮಕ್ಕಳಲ್ಲಿ ಇದೆ. ಬಂದವರ ಮೆಚ್ಚುಗೆಗಾಗಿ  ಕಾಯುವ ಬೊಂಬೆಗಳು, ಅದನ್ನು ಜೋಡಿಸಿಟ್ಟವರ ಪರಿಶ್ರಮ ಅನನ್ಯ. ಸಾಕಷ್ಟು ಕಡೆ ಬೊಂಬೆ ಇಟ್ಟಿರುತ್ತಾರೆ. ಸಾಧ್ಯವಾದೆ ಒಮ್ಮೆ ಹೋಗಿ ಮೆಚ್ಚಿಗೆ ಸೂಚಿಸಿ ಡಿಯರ್ ರೀಡರ್ಸ್.
Image result for dasara images
ಆರಂಭವಾಗಿ ಹೆಚ್ಚು ದಿನಗಳ ಬಳಿಕ ಈಟೀವಿ ನ್ಯೂಸ್  ನಮ್ಮ ಮನೆಯಲ್ಲಿ ಪ್ರಸಾರವಾಗಲು ಆರಂಭವಾಗಿದೆ.ಯಾವ ಕಾರ್ಯಕ್ರಮದ ಬಗ್ಗೆಯೂ ಹೆಚ್ಚು ಗೊತ್ತಾಗಿಲ್ಲ. ಏಕೆಂದರೆ ನಿನ್ನೆ ನಾನು ಅದನ್ನು ನೋಡಿದ್ದು. ಕನ್ನಡದಲ್ಲಿ ಅನೇಕ ನ್ಯೂಸ್ ಚಾನೆಲ್ ಗಳು ಆರಂಭವಾಗಿದ್ದರೂ, ಪ್ರಸಾರದ ಸಂಖ್ಯೆ ಬಹಳ ಕಡಿಮೆ. ಏಕೆಂದರೆ ಸಾಮಾನ್ಯವಾಗಿ ಕೇಬಲ್ ಹಾಕಿಸಿ ಕೊಂಡವರಿಗೆ ಪ್ರಸಾರವಾಗುವ ಅನೇಕ ಚಾನೆಲ್ಗಳು ಕೊಡೆ ಹಾಕ್ಸಿ ಕೊಂಡವರಿಗೆ  ಬರಲ್ಲ. ಬರದೆ ಇರುವ, ಉಳಿಯದೆ ಇರುವ ಸಂಬಂಧ ಬಾಂಧವ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿ ಕೊಳ್ಳ  ಬಾರದು.. ಯಾಕೇಂದ್ರೆ ನಾವು ಪದೇಪದೇ ಬಾಂಧವ್ಯ ಬೆಳೆಸುವ ಪ್ರಯತ್ನಾ ಮಾಡ್ತಾನೆ ಇರ್ತೀವಿ, ಒಂದು ಕಡೆಯಿಂದ ಅದು ಮುರಿತಾನೆ ಇರುತ್ತೆ.
ಬಿಡಿ ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ.
Image result for dasara bombe  images
@ ಕಲರ್ ವಾಹಿನಿಯಲ್ಲಿ  ಈಗ ಹಿಂದಿ  ಬಿಗ್ ಬಾಸ್ ಆರಂಭವಾಗಿದೆ.  ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಬಹಳಷ್ಟು ಜನರಿಗೆ ಒಂದು ರೀತಿ ಬೇಜಾರು, ಆದರೆ ನನಗೆ ಆ ಕಾರ್ಯಕ್ರಮ ಇಷ್ಟ. ಅದಕ್ಕೆ ಮುಖ್ಯ ಕಾರಣ ಬೇರೆ ಬೇರ ನೆಲೆಗಟ್ಟು, ಆರ್ಥಿಕವಾಗಿ ಭಿನ್ನತೆ, ಮಾನಸಿಕವಾಗಿ ಇನ್ನು ವಿಶೇಷ ಹಾಗೂ ವಿಚಿತ್ರ ಅಂಶಗಳನು ಒಳಗೊಂಡ ಮನಸ್ಥಿತಿಯವರು. ಅಂತಹವರೆಲ್ಲರೂ ಒಂದೇ ಮನೆಯಲ್ಲಿ.. ಏಕೆಂದರೆ ನಮ್ಮ ಬಗ್ಗೆ ಚೆನ್ನಾಗಿ ಗೊತ್ತಿರುವವರೇ, ನಮ್ಮ ಆಪ್ತರೇ ನಮ್ಮ ಮುಂದೆ ಇಗೋ ತೋರಿಸಿ ಹರ್ಟ್ ಮಾಡಿರುತ್ತಾರೆ, ಅಂತಹುದರಲ್ಲಿ ಈ ರೀತಿ ಬೇರೆ ಬೇರೆಯವರು , ಬೇರೆಬೇರೆ ...!  ಜಗಳ ಆದಷ್ಟು ಇಲ್ಲಿ ಟಿಆರ್ಪಿ  ಸಂಭ್ರಮ ಹೆಚ್ಚಾಗುತ್ತದೆ ಅದು ಸತ್ಯ. ಆದರೆ ಅದರೊಂದಿಗೆ ಜಗಳ ಆಡಿದವರು ಇಷ್ಟು ದಿನದ ಇದ್ದ ವಾತಾವರಣಕ್ಕಿಂತ ಭಿನ್ನವಾದ ಮನಸ್ಥಿತಿ, ಅವ್ಯಕ್ತವಾಗಿರುವ ಸ್ಥಿತಿ ಹೊರಹಾಕುತ್ತಾರೆ. ನಮ್ಮನ್ನು  ನಾವು  ಹೆಚ್ಚು ಶಕ್ತಿಯುತ ಮಾಡಿಕೊಳ್ಳಲು ಅಂತಹ ಒಂದು ಚೌಕಟ್ಟು ಬಹಳ ಮುಖ್ಯ ಅಲ್ವೇ !
ಮತ್ತೊಂದು ಸಂಗತಿ ಈ ಬಾರಿ ಬಿಗ್ ಬಾಸ್ ಮನೆ ಮನೆ ರೀತಿ ಇದೆ. ಭಿನ್ನತೆ ಮಾಡಲು ಹೋಗಿ ಎರಡು ಬಾರಿ ಬೋರ್ ಹೊಡೆಸಿದ್ದರು ಚಾನೆಲ್ ಮಂದಿ.
  ಇದರ ಮುಖ್ಯ ಆಕರ್ಷಣೆ ಸಲ್ಮಾನ್ boy  ಈಗ ಗಜ್ನಿ ಬಾಯ್ ಆಗಿರೋದು ಕಂಡ್ರೆ ಕ್ಯಾ ಯಾರ್ ನಿಮ್ದುಕೆ ಯಾರ್ದುಕೆ ಜೊತೆ ಪಂಥ ಕಟ್ಟಿದ್ರಾ ? ಅದರಲ್ಲಿ ಸೋತು ಹಿಂಗಾಯಿತೆ ಹೇರ್ ಸ್ಟೈಲ್ ? ;-)

No comments: