ಚಿಂಟು


courtesy : Dr. Krishnaveni Ghattu
ದಸರಾ ಬೇಡ ಅಂತ ಒಬ್ಬರು, ಬೇಕು ಎಂದು ಒಂದಷ್ಟು ಜನ. ರಾಜತ್ವದ ಸಂಕೇತ ಅಂದ್ರೆ, ಇದು ನಮ್ಮ ಹೆಮ್ಮೆಯ ಪ್ರತೀಕ ಎಂದು ಹೇಳುವವರು ಒಂದಷ್ಟು ಜನ. ಏನೇ ಹೇಳಿ ನನಗೆ ನವರಾತ್ರಿ ಬಗ್ಗೆ ವಿಶೇಷ ಒಲವು. ನಾಡ  ಹಬ್ಬ ದಸರಾ, ಮೈಸೂರು, ಬೊಂಬೆಗಳು, ಅದರ ಜೋಡಣೆ, ಎಲ್ಲವೂ ಇಷ್ಟ. ಅದರ ಬಗ್ಗೆ ಸಾಕಷ್ಟು ಆಸಕ್ತಿ.
ದಸರಾದಲ್ಲಿ ಹಿರಿಯ ಮಹಾರಾಜರಿಲ್ಲ. ಅದು ನೋವಿನ ಸಂಗತಿ. ಆದರೆ ಈಗ ಮತ್ತೋರ್ವ ಮಹಾರಾಜರು. ಅವರೇನು ರಾಜ್ಯ ನಡೆಸ ಬೇಕಿಲ್ಲ, ಆದರೆ ನಮ್ಮ ಸಂಸ್ಕೃತಿಯ ಪ್ರತೀಕ , ಕುರುಹು ಅದರ ಬಗ್ಗೆ ಗೌರವಿಸುವುದು ಬಹಳ ಮುಖ್ಯ.  ನಾನು ಕೆಲವೊಂದು ಸಂಗತಿಗಳು, ವಿಷಯಗಳ ಬಗ್ಗೆ ಹೆಚ್ಚು ಹೇಳೋಕೆ ಇಷ್ಟಪಡಲ್ಲ. ಯಾಕೆಂದ್ರೆ ಬೇಡಾ ಬೇಡಾ ಅನ್ನುವವರೇ ಅನೇಕ ವಿಷಯಗಳಲ್ಲಿ ಮುಂದೆ ಹೋಗಿ ಮೊದಲೇ ಆ ಸೌಲಭ್ಯ, ಗೌರವ ಪಡೆದಿರುತ್ತಾರೆ. ಅಂತಹ ದ್ವಂದ್ವಕ್ಕಿಂತ ನಮಗೆ ಏನು ಇಷ್ಟವೋ ಅದನ್ನು ಮಾಡುವುದೊಳಿತು. ಯಾಕೆ ಈ ಮಾತು ಹೇಳ್ತಾ ಇದ್ದೀನಿ, ನಾನು ಕೆಲಸ ಮಾಡುವ ಕಡೆ ಒಬ್ಬರು ಕೆಲಸದಿಂದ ತೆಗೆಸಿ ಹಾಕ್ತೀನಿ ಅಂತ ತಮ್ಮ ಮೂಗಿನ ನೇರಕ್ಕೆ ನಡೆಯದೆ ಇರುವವರ ಬಗ್ಗೆ ಹೇಳ್ತಾ ಇರ್ತಾರೆ ಬೆನ್ನ ಹಿಂದೆ. ನನ್ನ ಕಡೆಗೂ ಆ ಮಾತು ಎಸೆದಿದ್ದಾರಂತೆ. ಹಾಗಂತ ಸುದ್ದಿ :). ಈ ಪೀಟ್ಪೀಚೆ  ಜನಗಳು ಎಲ್ಲಾ ಕಡೆ ಇದ್ದಾರೆ , ಅವರಿಗೆ ಕಷ್ಟಪಟ್ಟು ಕೆಲಸ ಮಾಡಿ ಗೊತ್ತಿಲ್ಲ, ನಮಗೆ ಗೊತ್ತು.. ದುಡಿಯೋನಿಗೆ ಯಾವ ಕಲ್ಲಾದರೇನು ಕಣ್ರೀ ಮೂರ್ತಿ ಕೆತ್ತೋಕೆ ?


courtesy : satish acharya


@ಉದಯ ವಾಹಿನಿಯಲ್ಲಿ ಬೇರೆ ಬೇರೆ ವಿಭಾಗಗಳು ಇವೆ. ಅದರಲ್ಲಿ ಮನೋರಂಜನೆ, ವಾರ್ತೆ, ಹಾಡುಗಳು, ಅದಲ್ಲದೆ ಹೆಚ್ಚು ಇಷ್ಟ ಆಗುವ ಮತ್ತೊಂದು ಚಾನೆಲ್ ಚಿಂಟು ಟೀವಿ. ಕನ್ನಡದ ಏಕೈಕ ಮಕ್ಕಳ ಚಾನೆಲ್. ಕನ್ನಡದಲ್ಲಿಯೇ   ಮಾತಾಡ್ತಾವೆ ಬೊಂಬೆಗಳು :). ಅತ್ಯಂತ ಉಲ್ಲಾಸ ಉಂಟು ಮಾಡುವ ವಾಹಿನಿ ಅದು. ಸಾಮಾನ್ಯವಾಗಿ ಎಲ್ಲರಂತೆ ಮಾಡುವುದಕ್ಕಿಂತ ಕನ್ನಡದ ಅನೇಕಾನೇಕ ಕಾರ್ಟೂನಿಸ್ಟ್ ಗಳು ಬರೆದ ಚಿತ್ರಕತೆಯನ್ನು ಪ್ರಸಾರ ಮಾಡಿದರೆ ಚಂದ. ನಾನಂತೂ ಸಾಮಾನ್ಯವಾಗಿ ಸತೀಶ್ ಆಚಾರ್ಯ, ಪಿ ಮಹಮದ್, ಜೀವನ್ ಶೆಟ್ಟಿ .. ಹೀಗೆ ಹಲವಾರು ಕಾರ್ಟೂನಿಸ್ಟ್ ಗಳ ಫ್ಯಾನ್. ಚಿಂಟು ಟೀವಿಯಲ್ಲಿ ಅವರುಗಳ ಗೆರೆ ಬಂದ್ರೆ ಆಹಾ !

ಒಬ್ಬ ಟೀವಿ ಜಾಕಿ. ಆತ ಸಾಹಸದ ಕಾರ್ಯಕ್ರಮಗಳಿಗೆ ಫೇಮಸ್. ಆತ ಒಮ್ಮೆ ಕಾಡಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ. ಆಗ ಆಗುವ ತೊಂದರೆ ಅಷ್ಟಿಷ್ಟಲ್ಲ . ಕಾಡ ಸಮೀಪದಲ್ಲೇ  ಇದ್ದ ಬಾಲಕನೊಬ್ಬ, ಅವನ ಜೊತೆಗೊಂದು ಹುಲಿ. ಈ ಜಾಕಿಕ್ಗೆ ಕಾಡಿನ ಸ್ವಲ್ಪ ತೊಂದರೆ ಸಹ ಎದುರಿಸೋಕೆ ಆಗಲ್ಲ.ಆ ಬಾಲಕನಿಗೆ ಆ ಸಾಹಸ ಜಾಕಿ ನಡೆಸಿಕೊಡುವ  ಕಾರ್ಯಕ್ರಮ ಇಷ್ಟ ಆಗಿರುತ್ತದೆ. ಆದರೆ ಆತ ಕಾರ್ಯಕ್ರಮದಲ್ಲಿ ತಿಳಿಸಿದಂತೆ ಸಾಹಸಿ ಅಲ್ಲ ಅನ್ನುವ ಸಂಗತಿ ಬೇಸರ ಉಂಟು ಮಾಡುತ್ತದೆ. ಮೀಡಿಯಾದಲ್ಲಿ ಷೋ ಆಫ್ ಮಂದಿಯನ್ನು ಸರಿಯಾಗಿ ತೋರಿಸಲಾಗಿದೆ ಆ ಕಾರ್ಟೂನ್ ನಲ್ಲಿ . ಏನೇ ಹೇಳಿ ಕಾರ್ಟೂನ್ ಗಳು ಚಂದ. ಅದರ ಬಗ್ಗೇನೂ ವಿಪರೀತ ವಿಮರ್ಶೆ ಬರೀತಾರೆ ಮಂದಿ. ಅವರ ಕಥೆ ನಮಗ್ಯಾಕೆ  !

No comments: