ಕಾಪಿಕ್ಯಾಟ್ ?


ಕನ್ನಡ ಬಿಗ್ ಬಾಸ್ ಕಲರ್ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇದೆ.. ಸಾಮಾನ್ಯವಾಗಿ ನಾವು  ಯಾವುದೇ ಲೇಖನ ಬರೆಯುವಾಗ ಇಂತಹ ಸಾರ ಇಲ್ಲದ ವಾಕ್ಯಗಳ ಮೂಲಕ ಆರಂಭ ಮಾಡ್ತೀವಿ. ಈಗ ಅದು ಅಂತಿಮ ಘಟ್ಟ ತಲುಪುತ್ತಿದೆ, ಇಂತಹ ಸಮಯದಲ್ಲಿ ಸಹ ಈ ರೀತಿಯ ವಾಕ್ಯ ಬರೆದರೆ ಛೇ ;-)
ಸಾಮಾನ್ಯವಾಗಿ ಬದುಕಲ್ಲಿ ಹೀಗೆ ಆಗೋದು....
ನಾವು ಏನನ್ನೋ   ಹೇಳಬೇಕು ಅಂತ ಅಂದುಕೊಂಡಿರ್ತೀವೋ ಅದನ್ನು ಆ ಸಮಯದಲ್ಲಿ  ಹೇಳುವುದಿಲ್ಲ.. ಆದರೆ ಯಾವುದು ಬೇಡವಾಗಿರುತ್ತದೆಯೋ ಅದನ್ನು ಬೇಡದ ಸಮಯದಲ್ಲಿ ವ್ಯಕ್ತ ಮಾಡಿರುತ್ತೇವೆ.. ಬಿಗ್ ಬಾಸ್ ಮನೆಗೆ ಬಂದ ನೇಹಾ ಅವರನ್ನು ಕಂಡಾಗ ಅನ್ನಿಸಿದ್ದು ಈ ಅಂಶ. ಹೊರಗಿನ ಪ್ರಪಂಚದಲ್ಲಿ ನೋಡುವ ದೃಷ್ಟಿಕೋನ ಭಿನ್ನವಾಗಿರುತ್ತೆ ಅನ್ನುವ ಅಂಶ ಆಕೆಗೆ ಹೊರ ಬಂದ ಬಳಿಕ   ಹೆಚ್ಚಾಗಿ ಅರ್ಥ ಆಗಿರುತ್ತದೆ.. ಒಂದೊಳ್ಳೆ ಸ್ನೇಹಕ್ಕೆ, ಒಂದೊಳ್ಳೆ ಬಾಂಧವ್ಯ ಆಕೆ ಬೆಲೆ  ಕೊಟ್ಟಿದ್ದರೂ ಕೆಲವು ಬಾರಿ ಅದನ್ನು ವ್ಯಕ್ತ ಪಡಿಸುವ ರೀತಿ ಇದೆಯಲ್ಲ ಅದು ತುಂಬಾ ಜನರಿಗೆ ಅರ್ಥ ಆಗಿರಲ್ಲ.. ಅದು ಅವರ ತಪ್ಪಲ್ಲ..
ಎರಡನೆಯದಕ್ಕಿಂತ ಮೊದಲನೇ ಹಾಗೂ ಮೂರನೇ ಅವತರಣಿಕೆ ಬಿಗ್ ಬಾಸ್  ಮನೆಯನ್ನು ಹೆಚ್ಚು ಮಂದಿ ನೋಡುವಂತೆ ಮಾಡಿದ್ದು ಸತ್ಯ. ಮುಖ್ಯವಾಗಿ ಬಿಗ್ ಬಾಸ್ ನಂತಹ ರಿಯಾಲಿಟಿ ಷೋ ನಿಂದ ಪ್ರಚಾರ, ಹಣ ಏನೇ ಇರಲಿ ಅವೆಲ್ಲ  ಸಿಗುವುದು ವೀಕ್ಷಕರಿಗೆ ಅಲ್ಲದೆ ಇದ್ದರು ಅದರಿಂದ ಸಿಗುವ ಮನೋರಂಜನೆ, ಜಗತ್ತಿನಲ್ಲಿ ಒಂದಷ್ಟು ಜನ ಒಟ್ಟಿಗೆ ಒಂದಷ್ಟು ಕಾಲ ಇದ್ದರೆ ಎಂತಹ ಪರಿಸ್ಥಿತಿ ಎದುರಿಸಬಹುದು ಈ ಎಲ್ಲಾ ಸಂಗತಿಗಳು ಅರ್ಥ ಆಗುತ್ತಾ ಸಾಗುತ್ತದೆ.
Image result for blue color flowers
ಒಂದಂತೂ ಸತ್ಯ ಈ ಮೂರು ಸೀಜನ್ ನಿಂದ ಕನ್ನಡದ ಜನತೆ ಒಂದಷ್ಟು ಅತ್ಯುತ್ತಮ ಕಲಾವಿದರನ್ನು , ಅವರ ಪ್ರತಿಭೆಯನ್ನು ಹೆಚ್ಚು ಹತ್ತಿರದಿಂದ ಕಾಣುವಂತೆ ಮಾಡಿತು. ಮೊದಲ ಸೀಸನ್ ನಲ್ಲಿ ಅರುಣ್ ಸಾಗರ್, ಎರಡನೆಯದರಲ್ಲಿ ಸೃಜನ್ ಲೋಕೇಶ್ , ಮೂರನೆಯ ಅವತರಣಿಕೆಯಲ್ಲಿ ಆನಂದ್.
ಆದರೆ ಮೊದಲು ಮತ್ತು ಎರಡನೆಯ ಸೀಸನ್ ನಲ್ಲಿ ದೊರೆತ ಅವಕಾಶಗಳನ್ನು ಅದ್ಭುತವಾಗಿ ಅರುಣ್ ಮತ್ತು ಆನಂದ್ ಬಳಸಿಕೊಂಡರು.
ಮೊದಲ ಸೀಸನ್ ನಲ್ಲಿ ಅಪರ್ಣ, ಎರಡನೆಯದರಲ್ಲಿ ಶ್ವೇತ ಮೂರನೆಯದರಲ್ಲಿ ಶ್ರುತಿ ಈ ಮೂರು ಹೆಣ್ಣುಮಕ್ಕಳು ನನಗೆ ಹೆಚ್ಚು ಇಷ್ಟವಾದವರು.  ಕನ್ನಡದ ಭರವಸೆಯ ನಟ ಚಂದನ್.. ಹುಡುಗು ಬುದ್ಧಿಯ ಈ ಕಲಾವಿದ ಕೋಪವನ್ನು ಬಿಡಲು, ವೃತ್ತಿಗೆ ಬೇಕಾದ ತಾಲೀಮು ಮಾಡಲು ಒಂದಷ್ಟು ಗಮನ ಕೊಟ್ರೆ ಕನ್ನಡ ಚಿತ್ರರಂಗ ಉತ್ತಮ ಕಲಾವಿದನನ್ನು ಪಡೆಯುತ್ತದೆ.
ಕಿಚ್ಚ ಸುದೀಪ್ ಅವರ ನಿರೂಪಣೆ ಕನ್ನಡದಲ್ಲಿ ಇಷ್ಟವಾದ ಸಂಗತಿ.. ನಾನು ಹಿಂದಿ ಬಿಗ್ ಬಾಸ್ ಸಹ ತಪ್ಪದೆ ನೋಡುವ ವೀಕ್ಷಕಿ ಆದರೆ ಈ ಬಾರಿ ಅದನ್ನು ಹೆಚ್ಚು ನೋಡಲು ಸಾಧ್ಯವಾಗಲಿಲ್ಲ. ಆದರೆ ಕನ್ನಡದಲ್ಲಿ ಸುದೀಪ್ ತಮ್ಮ ವಿಶೇಷ ಶೈಲಿ, ಡ್ರೆಸ್ ಅದೂ ಇದೂ ಎಲ್ಲಾ ಅಂಶಗಳ ಮೂಲಕ ಜನಮನ ಗೆದ್ದರು, ಇದು ಒಂದು ಅಂಶ, ಆದರೆ ಒಂದಷ್ಟು ಜನ ಅವರನ್ನು ಹಿಂದಿ ಕಾರ್ಯಕ್ರಮದ ಕಾಪಿಕ್ಯಾಟ್ ಅಂದಿದ್ದಾರೆ . ದೀಪ್ ಅದು ನಿಮಗೆ ಗೊತ್ತಿರಲಿ :)
ಕಳೆದವಾರ  ನವರಸ ನಾಯಕ ಜಗ್ಗೇಶ್  ಅವರ ಜೊತೆಯ ಮಾತುಕತೆ ಸಕತ್ತಾಗಿತ್ತು. ನನಗೆ ಜಗ್ಗೇಶ್ ಎನಿಟೈಮ್  ಫೇವರಿಟ್. ತುಂಬಾ ಉಲ್ಲಸವಾಗಿ  ವೀಕೆಂಡ್ ಕಳೆಯುವಂತೆ ಇತ್ತು ಅವರ ಮಾತಿನ ಶೈಲಿ.. ಇಷ್ಟ ಆಯ್ತು.
ಪ್ರತಿದಿನ ಸ್ವಲ್ಪ ಸಮಯ ಬಿಗ್ ಬಾಸ್ ಗೆ ಮೀಸಲಿಡುವ ಸಂಭ್ರಮ ಇತ್ತು.. ಮುಂದಿನವಾರದಿಂದ ಅಷ್ಟೊಂದು ಟೆನ್ಶನ್ ಇಲ್ಲ ಬಿಡಿ ;-)

No comments: