ತಣಿಸುತ್ತಿದ್ದಾರೆ

Image result for orange color flowers
ಮಾಧ್ಯಮಲೋಕದಲ್ಲಿ ಬೇಕಾಗಿರುವ ಸಂಗತಿಗಳಿಗಿಂತ ಬೇಡದ ಸಂಗತಿಗಳೇ ಹೆಚ್ಚು ಕಿವಿಗೆ ರಾಚುವುದು. ಅಂತಹ ವಿಷಯಗಳು ಜನರಿಗೆ ಬೇಕು.. ಆ ರೀತಿಯ ವಿಷಯಗಳನ್ನು ಬರೆದರೆ ಓದುಗರ ಸಂಖ್ಯೆ ಹೆಚ್ಚಾಗುತ್ತದೆ.. ಆದರೆ ನಾನು ಬ್ಲಾಗ್ ಬರೆಯೋದು ಅದರ ಜನಸಂಖ್ಯೆ ಹೆಚ್ಚಿಸಿಕೊಳ್ಳಲು ಅಲ್ಲ.. ಏಳುವರ್ಷಗಳ  ಹಿಂದೆ ಆರಂಭ ಮಾಡಿದಾಗ ಇದ್ದಂತಹ ಉತ್ಸಾಹ ಈಗಲೂ ಇದೆ. ಆರೀತಿ ಇರೋದಕ್ಕೆ ಮುಖ್ಯ ಕಾರಣ ನಾನು ಹೆಚ್ಚು  ಸೆನ್ಸೇಷನಲ್  ಸಂಗತಿಗಳನ್ನು ಬರೆಯೋಲ್ಲ.. ಯಾಕೇಂದ್ರೆ ಅಂತಹ ಸಂಗತಿಗಳ ಬಗ್ಗೆ ಬರೆದಾಗ ನಾವು ನಾವಾಗಿ ಉಳಿಯೋಲ್ಲ.. ಅಂತಹ ಸೆನ್ಸೇಷನಲ್ ಹುಡುಕಾಟದಲ್ಲಿ ಬೇಡದ್ದು ಬರಿಯ ಬೇಕಾಗುವ ಸಾಧ್ಯತೆ ಹೆಚ್ಚು.
 ಮುಖ್ಯವಾಗಿ ನಾನು ಬರೆಯುವ ಪೋಸ್ಟ್ ಗಳನ್ನು ಒಂದಷ್ಟು ಮಿತ್ರರು ತಪ್ಪದೆ ಓದುತ್ತಾರೆ. ಸ್ವಲ್ಪ ತಡ ಮಾಡಿದರೂ ತಕ್ಷಣ ತಮ್ಮ ಮನದ ಭಾವ ವ್ಯಕ್ತಪಡಿಸುತ್ತಾರೆ. ನೀವ್ ಯಾಕೆ ಬ್ಲಾಗ್ ಬರೀತಾ ಇಲ್ಲ. ಆ ಕಾರ್ಯಕ್ರಮ ಚನ್ನಾಗಿತ್ತು, ಅಥವಾ ನೀವು ಈ ಮೊದಲು ತಿಳಿಸಿದ ಕಾರ್ಯಕ್ರಮ ನಾನು ನೋಡಿರಲಿಲ್ಲ ಆದರೆ ಬ್ಲಾಗ್ ಓದಿದ ಬಳಿಕ ಅದನ್ನು ವೀಕ್ಷಿಸಲು ಆರಂಭ ಮಾಡಿದೆ ಹೀಗೆ.. ಅಂತಹ ಕಳಕಳಿಗೆ ತಲೆ ಬಾಗುವೆ.
 ಜಾಸ್ತಿ ಹೊಗಳಿ ಕೊಳ್ತಾ  ಇದ್ದೀನಿ ಅಂತ ತಿಳಿಯ ಬೇಡಿ ಪ್ಲೀಸ್..
Image result for orange color flowers

 ಜೀಕನ್ನಡ ವಾಹಿನಿ ರಿಯಾಲಿಟಿ ಶೋಗಳಿಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಅದರಲ್ಲಿ ನಾನು ಧಾರಾವಾಹಿಗಳನ್ನು ವೀಕ್ಷಿಸದೆ ಹೋದರು ಸಹ ರಿಯಾಲಿಟಿ ಶೂಗಳನ್ನು ವೀಕ್ಷಿಸಲು ಇಷ್ಟ ಪಡ್ತೀನಿ.. ಸ ರೆ ಗ ಮ ಪ   ಅದರಲ್ಲಿ ಒಂದಾಗಿದೆ.ಈಗ ಈ  ಕಾರ್ಯಕ್ರಮದಲ್ಲಿ ಹಿರಿ ಕಿರಿಯರ ಸಮ್ಮಿಲನ ಆಗಿದೆ. ಅತ್ಯದ್ಭುತವಾದ ಈ ಕಾರ್ಯಕ್ರಮ ವೀಕೆಂಡ್ ನಲ್ಲಿ  ಅತಿ ಮೋದ ಕೊಡುತ್ತದೆ . ಒಂದೊಮ್ಮೆ  ಎಸ್ಪಿ ಬಿ ಅವರ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದ ಮುಂದೆ ಮತ್ತಿನ್ಯಾವ ಹಾಡಿನ ಸ್ಪರ್ಧೆ ಇರಲಿಲ್ಲ. ಆದರೆ ರಾಜೇಶ್ ಕೃಷ್ಣನ್ , ವಿಜಯ್ ಪ್ರಕಾಶ್, ಸ್ವಲ್ಪದಿನ, ಹಂಸಲೇಖ, ಬಿ ಆರ್ ಛಾಯ, ಈಗ ಅರ್ಜುನ್ ಜನ್ಯ ಅವರ  ಸನ್ನಿಧಿಯಲ್ಲಿ  ಅಂತ ಹೇಳಿದ್ರೆ ಸೂಕ್ತ.  ಅಪಾರ ಸಂಖ್ಯೆಯ  ಪ್ರತಿಭೆಗಳು  ಕಲಾಸಕ್ತರ ಮನಸ್ಸು ತಣಿಸುತ್ತಿದ್ದಾರೆ .
 ಅದರಲ್ಲೂ ಈಗ ಪ್ರಸಾರ ಆಗುತ್ತಿರುವ ಎಪಿಸೋಡ್ಗಳು, ಅದರಲ್ಲಿ ಭಾಗವಹಿಸುತ್ತಿರುವ ಸ್ಪರ್ಧಿಗಳು ಆಸಂ ...
ಜೊತೆಗೆ ಅನುಶ್ರೀ ಸಹ ಅತ್ಯುತ್ತಮ ನಿರೂಪಕಿ.. ಉಲ್ಲಾಸದ ಚಿಲುಮೆಯ ಪ್ರತಿರೂಪ..ಕನ್ನಡದಲ್ಲಿ ಒಟ್ಟೊಟ್ಟಿಗೆ ಅಧಿಕ ಪ್ರಮಾಣದಲ್ಲಿ ನಿರೂಪಣೆಯ ಅವಕಾಶಗಳು ಪಡೆದ ಕೆಲವೇ ಕೆಲವು ನಿರೂಪಕಿಯರಲ್ಲಿ ಅನುಶ್ರೀ ಸಹ ಒಬ್ಬರು.
@ ವೀಕೆಂಡ್ ವಿತ್ ರಮೇಶ್  ಕಾರ್ಯಕ್ರಮದ ಮೊದಲ ಅವತರಣಿಕೆ ಸಹಿತ ತುಂಬಾ ಇಷ್ಟ ಆಗಿತ್ತು.. ಈ ಬಾರಿಯೂ ಸಹ ಅದೇ ತಾಜಾತನ ಉಳಿಸಿಕೊಂಡಿದೆ. ರಮೇಶ್ ಯಾವುದೇ ಕಾರ್ಯಕ್ರಮದ ರೂವಾರಿಯಾಗಲಿ ತುಂಬಾ ಖುಷಿ ಕೊಡುತ್ತದೆ. ಕಳೆದ ಬಾರಿ  ದೇವರಾಜ್  ಅವರ ಬಗ್ಗೆ ಆಗಿರಲಿ ಅಂಬಿ ಮಾಮ ಅವರನ್ನು ಕುರಿತ ಕಾರ್ಯಕ್ರಮ ಆಗಿರಲಿ ಸಕತ್ತಾಗಿತ್ತು. ಜೀನ ಇಸಿ ಕ ನಾಮ್ ಹೈ ಎಂಬ ಕಾರ್ಯಕ್ರಮ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇತ್ತು. ಫಾರೂಕ್ ಶೇಖ್ ಮತ್ತು ಸುರೇಶ್ ಒಬೆರಾಯ್ ಅವರು ಈ ಕಾರ್ಯಕ್ರಮದಲ್ಲಿ ನಿರೂಪಕರಾಗಿದ್ದರು..(ಕೆಲವು ಎಪಿಸೋಡ್ ಗೆ  ಫಾರೂಕ್ , ಕೆಲವಕ್ಕೆ ಸುರೇಶ್). ಐಶ್ವರ್ಯ ರೈ ಅವರಿಗೂ ಹೀಗೆ ಚೇರ್ ಮೇಲೆ ಕುಳ್ಳರಿಸಿ ಮಾತನಾಡಿಸಿದ್ದರು.ಆಕೆಯು ಉತ್ತಮ ಗಾಯಕಿ ಎನ್ನುವುದು ಆ ಕಾರ್ಯಕ್ರಮದ ಮೂಲಕ ಜನರಿಗೆ ಗೊತ್ತಾಗಿತ್ತು.ಅದರ ಕನ್ನಡ ರೂಪಾಂತರ  ಅಂತಲೇ ಹೇಳಬಹುದು.ಇಂತಹ ಕಾನ್ಸೆಪ್ಟ್ ಇರುವ ಪ್ರೋಗ್ರಾಮ್ ಆನೇಕ ವಾಹಿನಿಯಲ್ಲಿ ಪ್ರಸಾರ ಆಗಿದೆ.   ಒಟ್ಟಾರೆ ಅತ್ಯುತ್ತಮ ಕಾರ್ಯಕ್ರಮ ಇದು. ಅಂಬಿಮಾಮ ಅವರ ಬಗ್ಗೆ ಪ್ರಸಾರವಾದ ಕಾರ್ಯಕ್ರಮ ಜಾಸ್ತಿ ಗಮನ ಸೆಳೆದದ್ದಕ್ಕೆ   ಮುಖ್ಯ ಕಾರಣ ಅವರ ಜೀವನ ಚರಿತ್ರೆಗೆ ಸಂಬಂಧಪಟ್ಟ ಪುಸ್ತಕ ಕಳೆದ ವರ್ಷ ಬಿಡುಗಡೆ ಆಯ್ತು ನಾನು ಕೆಲಸ ಮಾಡುವ ಸಂಸ್ಥೆಯಿಂದ . ಆ ಪುಸ್ತಕದಲ್ಲಿ ನನ್ನದು ಅಳಿಲು ಸೇವೆ ಇದೆ.. ಅದಾದ ಬಳಿಕ ಸುಮಲತಾ ಅವರು ಆಂಧ್ರದ ಪ್ರಸಿದ್ಧ ದಿನಪತ್ರಿಕೆ ಸಾಕ್ಷಿಗೆ ನೀಡಿದ ಸಂದರ್ಶನವನ್ನು ಕನ್ನಡಕ್ಕೆ ಅನುವಾದ ಮಾಡಿದ್ದೆ.. ನಮ್ಮ ಪತ್ರಿಕೆಯಲ್ಲೂ ಪ್ರಕಟ ಆಗಿತ್ತು.ಅವೆಲ್ಲ ನೆನಪಿಗೆ ಬಂತು . ಅಂಬಿ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ನಾನು ಆನ್ಲೈನ್ ಪತ್ರಿಕೆಯಲ್ಲಿ ಫ್ರೀ ಲ್ಯಾನ್ಸರ್ ಆಗಿದ್ದೆ. ಅಲ್ಲಿ ಕೇವಲ  ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೆ.. ನಾನು ಅಂಬಿಯವರು ಬೇಗ ಹುಶಾರಾಗಲಿ ಎನ್ನುವ ಸುದ್ದಿಗೆ ಹೆಚ್ಚು ಆದ್ಯತೆ ಕೊಡ್ತಾ ಇದ್ದೆ..ಆ ಸಮಯದಲ್ಲಿ ಸಕತ್ ಟೆನ್ಶನ್ ಆಗಿತ್ತು ನನಗೆ..

ಥ್ಯಾಂಕ್ಸ್ ರಮೇಶ್ ಉತ್ತಮ ಕಾರ್ಯಕ್ರಮ ನೀಡಿದ್ದಕ್ಕೆ :-)

1 comment:

Badarinath Palavalli said...

ಹೈಪ್ ಮತ್ತು ರೋಚಕ ಪತ್ರಕೋದ್ಯಮಕಿಂತಲೂ ನಾಲ್ಕು ಕಾಲ ಉಳಿಯುವುದು ಸಕಾರಾತ್ಮಕ ಬರವಣಿಗೆಯೇ ಸರಿ.

ಸರೆಗಮಪಮ ವೇದಿಕೆ.

ವೀ.ವಿ. ರಮೇಶ್ ಮೂಲಕ ಜೀನ ಇಸಿ ಕ ನಾಮ್ ಹೈ ನೆನಪಿಸಿದ್ದಕ್ಕಾಗಿ ವಂದನೆಗಳು.