ಮಿಸ್ಟೇಕು ಯಾಕೆ ??

Image result for orange  and green flowers
ಬಹಳ ದಿನಗಳಾದ ಬಳಿಕ ಮತ್ತೆ ಬ್ಲಾಗ್ ಬರೆಯುತ್ತಿದ್ದೇನೆ . ಅದಕ್ಕೆ ಕಾರಣ ಇಷ್ಟೇ ಕೆಲವು ಬಾರಿ ಯಾವ ಕಾರ್ಯಕ್ರಮವೂ ಮನ ಸೆಳೆಯುತ್ತಿಲ್ಲ ಎಂದು ಅನ್ನಿಸುತ್ತದೆ. ಪ್ರಾಯಶಃ  ಯಾವುದೇ ಕಾರ್ಯಕ್ರಮವನ್ನು ಗಮನ ಕೊಟ್ಟು ನೋಡಿದರೆ ಅದರ ಆನಂದವೇ ಭಿನ್ನ..
ಅಂತಹ ರುಚಿಯನ್ನು ನೀಡಿದ ಕಾರ್ಯಕ್ರಮ ಸುವರ್ಣವಾಹಿನಿಯ ಬೆರಗು. ಮೊನ್ನೆ ಹಾಗೂ ನಿನ್ನೆ ನೋಡಿದ ಬೆರಗು ಇಷ್ಟ ಆಯ್ತು. ಅದರಲ್ಲೂ ಮೊನ್ನೆ ಅಂದ್ರೆ ಬುಧವಾರ ಯಾವರೀತಿ ಕಾಡುಪ್ರಾಣಿಗಳಿಗೆ- ಪ್ರಾಣಿಗಳಿಗೆ  ಮನುಷ್ಯ ಬಲಿಯಾಗುತ್ತಾನೆ, ಇನ್ನು ವಿವರವಾಗಿ ಹೇಳುವುದಾದರೆ ಹೇಗೆ ಮನುಷ್ಯನನು ಪ್ರಾಣಿಗಳು ಬೇಟೆ ಆಡುತ್ತವೆ ಎನ್ನುವ ಸಂಗತಿಯನ್ನು ವಿವರಿಸುತ್ತಾ ಯಾವ್ಯಾವ ಪ್ರಾಣಿಗಳಿಂದ ಮನುಷ್ಯ ಹತನಾಗಿದ್ದಾನೆ ಮತ್ತು ಎಷ್ಟು ಪ್ರಮಾಣದಲ್ಲಿ ಮರಣವನ್ನು ಅಪ್ಪಿದ್ದಾನೆ(ಳೆ) ಎಂಬಂತಹ ವಿವರ ಪ್ರಸಾರವಾಗ್ತಾ ಇತ್ತು. ಹುಲಿಗೆ ಒಂದು ವರ್ಷದಲ್ಲಿ 8 ನೂರು ಮನುಷ್ಯರು, ಮೊಸಳೆಗೆ 2 ಸಾವಿರ, ಶಾರ್ಕ್ ಗೆ ವರ್ಷಕ್ಕೆ 5  ಜನ... ಹೀಗೆ ವಿವರಣೆ ಸಾಗುತ್ತದೆ. ಬೇರೆ ಪ್ರಾಣಿಗಳಿಗಿಂತ ಮನುಷ್ಯನನ್ನು ಬೇಟೆ ಆಡುವ ಖಯಾಲಿ ಹುಲಿಗೆ ಆರಂಭಾವಾಗುತ್ತಂತೆ. ಯಾಕೇಂದ್ರೆ ತಾನು ಅತಿ ಬುದ್ಧಿವಂತ ಎಂಬಂತಹ   ಹೆಮ್ಮೆ ಹೊಂದಿರುವ ಮಾನವ ಪ್ರಾಣಿ ಸುಲಭವಾಗಿ ಶರಣಾಗತನಾಗಿ ಬಿಡುವುದು ಇದಕ್ಕೆ ಕಾರಣವಂತೆ. ತುಂಬಾ ವಿಸ್ಮಯ ಸಂಗತಿಗಳನ್ನು ತಿಳಿಸುತ್ತಿದ್ದರು. ಪ್ರಾಯಶಃ ಆ ಕಾರ್ಯಕ್ರಮ ಈಗಾಗಲೇ ಮರುಪ್ರಸಾರ ಆಗಿರುತ್ತದೆ. ಆದ್ದರಿಂದ ಅದು ಪ್ರಸಾರ ಆದರೆ ನೋಡಿ ಎಂದು ನಾನು ಹೇಳೋಕೆ ಆಗಲ್ಲ.ಚಾನೆಲ್ ನವರು ಪ್ರಸಾರಿಸಿದರೆ ನೋಡಿ ತಪ್ಪದೆ !
 ಮತ್ತೊಂದು ಸಂಗತಿ ಅದರ ವಾಯ್ಸ್ ಒವರ್ ಮಾಡಿದವರಿಗೆ  ಒಂದು ಮೆಚ್ಚುಗೆ. ಕಾರಣ ಇಷ್ಟೇ ತುಂಬಾ ಸುಂದರ ಹಾಗೆನ್ನುವುದಕ್ಕಿಂತ ಕಿವಿಗೆ ಹಿತವಾಗುವಂತೆ ನಿರೂಪಿಸುತ್ತಿದ್ದರು.
Image result for orange  and green flowers
@ಇತ್ತೀಚೆಗೆ ಉದಯ ನ್ಯೂಸ್ ವೀಕ್ಷಿಸಿದೆ ಅದರಲ್ಲಿ ದೆಹಲಿಯ ವಿಮಾನ ನಿಲ್ದಾಣಗಳ ಬಗ್ಗೆ ಪ್ರಸಾರವಾಗ್ತಾ ಇತ್ತು. ತುಂಬಾ ಚೆನ್ನಾಗಿತ್ತು . ಅಲ್ಲಿನ ವಿಶೇಷಗಳು ಸೇರಿದಂತೆ ಎಲ್ಲ ಬಗೆಯ ಮಾಹಿತಿಗಳನ್ನು  ನೀಡಿದ್ದರು ಕಾರ್ಯಕ್ರಮವನ್ನು ಸಿದ್ಧಪಡಿಸಿದವರು. ಆದರೆ ಒಂದು ಕೊರತೆ ಎದ್ದು ಕಾಣ್ತಾ ಇತ್ತು, ಕಾಪಿ ಹಾಗು ಪೇಸ್ಟ್ ದ್ದು.. ಪ್ರತಿಯೊಂದು ಟರ್ಮಿನಲ್ ಬಗ್ಗೆ ಹೇಳುವಾಗಲು ಒಂದೇ ರೀತಿಯ  ಚಿತ್ರಗಳನ್ನು ಪ್ರಸಾರ ಮಾಡ್ತಾ ಇದ್ರು.. :-)
ಕೆಲವು ಅಂಶಗಳು ಕಾರ್ಯಕ್ರಮದ ಅಂದವನ್ನು ಹಾಳು ಮಾಡುತ್ತದೆ. ಉದಯ ನ್ಯೂಸ್ ನಲ್ಲಿ ವಾರ್ತೆ ಓದುವವರು,ಹಿನ್ನೆಲೆ ಧ್ವನಿ ನೀಡುವವರು ಕಿವಿಗಾನಂದ ಆಗುವಂತೆ ಧ್ವನಿಯ ಏರಿಳಿತ , ಉಚ್ಚಾರಣೆ, ಭಾಷೆಯ ಬಳಕೆಗೆ ಗಮನ ನೀಡುತ್ತಾರೆ. ಎಲ್ಲ ಓಕೆ ಆಗಿದ್ದಾಗ ಈ ಸಣ್ಣ ಮಿಸ್ಟೇಕು ಯಾಕೆ ??

No comments: