ಚಾತುರ್ಮಾಸ

Image result for orange color  flower images

ಹಿಂದೂ ಮತ್ತು  ಆ ಧರ್ಮದಿಂದ ಪಕ್ಕಕ್ಕೆ ಸರಿದು ಮತ್ತೊಂದು ಧರ್ಮ ಹುಟ್ಟು ಹಾಕಿದವರ ಅನುಯಾಯಿಗಳು ಬಹಳ ಮುತುವರ್ಜಿಯಿಂದ  ಆಚರಿಸುವ ಚಾತುರ್ಮಾಸ  ಆಚರಣೆ ಬಗ್ಗೆ ಇರುವಂತಹ ಅನೇಕ ಸಂಶಯಗಳನ್ನು ಕಣ್ವ ಮಠದ  ಪೀಠಾಧಿಪತಿಗಳು ವೀಕ್ಷಕರಿಗೆ -ಭಕ್ತರಿಗೆ ನಿವಾರಿಸಿದರು. ಶ್ರೀಶ್ರೀಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥ ಸ್ವಾಮೀಜಿಗಳು ನಡೆಸಿಕೊಟ್ಟಈ ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾವಾಯಿತು. ಮೂಲಮಠ ಹುಣಸಿಹೊಳೆಯಲ್ಲಿದೆ. ಅಪಾರ ಸಂಖ್ಯೆಯಲ್ಲಿ  ಶಿಷ್ಯರನ್ನು ಹೊಂದಿರುವ ಈ ಮಠದ ಈಗಿನ  ಗುರೂಜೀಯವರು ಸಮಾಜಮುಖಿ ಹಾಗೂ ಜೀವನ್ಮುಖಿ. ಸರಳ ರೀತಿಯಲ್ಲಿ  ವೀಕ್ಷಕರಿಗೆ ಅರ್ಥವಾಗುವಂತೆ ಚಾತಯರ್ಮಾಸದ ಬಗ್ಗೆ ವಿವರಿಸಿದ ಗುರುಗಳ ಕಾರ್ಯಕ್ರಮ ತುಂಬಾ ಚಂದ ಇತ್ತು. ಜೀವನ ದರ್ಶನವೆನ್ನುವ ಹೆಸರಿನ ಈ  ಕಾರ್ಯಕ್ರಮವನ್ನು ನಿರೂಪಿಸಿದವರು ಜಯಪ್ರಕಾಶ್ ನಾಗತಿಹಳ್ಳಿ.ಸೊಗಸಾದ ನಿರೂಪಣೆಯ ಮೂಲಕ, ಸರಳ ಪ್ರಶ್ನೆಗಳ ಮುಖಾಂತರ ವೀಕ್ಷಕರ ಮನಗೆದ್ದಿರುವ ಜಯಪ್ರಕಾಶ್ ಅವರು ಈ ಕಾರ್ಯಕ್ರಮವನ್ನು ಸಹ ಅಚ್ಚುಕಟ್ಟಾಗಿ ನಡೆಸಿಕೊಟ್ಟರು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ ಅಲ್ಲವೇ :-)

1 comment:

Badarinath Palavalli said...

ಸದರಿ ಕಾರ್ಯಕ್ರಮದ youtube link ಹುಡುಕಿದೆ. ಬಹುಶಃ ದೂ.ದ ಹಾಕಿಲ್ಲ ಅನಿಸುತ್ತದೆ. ಒಳ್ಳೆಯ ಮಾಹಿತಿಯು ಗುರುಮುಖೇನ ಕೇಳುವ ಸೌಭಾಗ್ಯ ನಮಗೆ ದೊರೆಯಲಿಲ್ಲ!