ಆಯ್ಕೆ

Image result for red and blue color  flowers
ಕಲರ್ ಕನ್ನಡ ವಾಹಿನಿಯಲ್ಲಿ ವೀಕೆಂಡ್ ನಲ್ಲಿ ಪ್ರಸಾರವಾಗುವ  ಜನ ಇಷ್ಟ ಪಡುವ ಕಾರ್ಯಕ್ರಮಗಳಲ್ಲಿ ಒಂದು ಮಜಾ ಟಾಕೀಸ್..ಸೃಜನ್ ಲೋಕೇಶ್ ಮತ್ತು ತಂಡ ನಡೆಸಿ ಕೊಡುವ ಈ  ಕಾಮಿಡಿ ರಿಯಾಲಿಟಿ ನಲ್ಲಿ  ವಿಷಯ ಕೆಲವು ಬಾರಿ ಬೋರ್ ಅನ್ನಿಸಿದರೂ ಅದರ ಜೀವಾಳವಾಗಿರುವ ಕುರಿ ಪ್ರತಾಪ್, ಮಂಡ್ಯ ರಮೇಶ್, ವಿಶ್ವ, ರೇಮೋ ಇವರು ಸದಾ ಉಲ್ಲಾಸ ಹೆಚ್ಚಿಸುವಂತೆ ಕಾರ್ಯಕ್ರಮವನ್ನು ಮುನ್ನಡೆಸುತ್ತಾರೆ. ಆ ಕಲಾವಿದರ  ಎಂಟ್ರಿ ಸಹ ಮಜಾ ಕೊಡುತ್ತದೆ.
ಈ ಬಾರಿ ಸದ್ಗುರು ಜಗ್ಗಿ ವಾಸುದೇವ್ ಅವರು  ಮುಖ್ಯ ಆಕರ್ಷಣೆಯಾಗಿದ್ದರು. ನಾನು ಹೆಚ್ಚು ಇಷ್ಟ ಪಟ್ಟು ಕೇಳುವ ಪ್ರವಚನಗಳಲ್ಲಿ, ಓದುವ ಆಧ್ಯಾತ್ಮಿಕ ಸಾಹಿತ್ಯದಲ್ಲಿ ಸದ್ಗುರು ಅವರದ್ದು ಹೆಚ್ಚಾಗಿದೆ. ಅವರು ತಿಳಿಸಿ ಅನೇಕ ಸಂಗತಿಗಳನ್ನು ನನ್ನ  ಬದುಕಲ್ಲಿ ಅಳವಡಿಸಿ ಕೊಂಡಿದ್ದೇನೆ ಮತ್ತು ಉತ್ತಮ ಫಲಿತಾಂಶಗಳನ್ನು ಸಹಿತ ಪಡೆದಿದ್ದೇನೆ. ತುಂಬಾ ಖುಷಿ ನೀಡಿತು  ಈ ಬಾರಿಯ ಮಜಾ ಟಾಕೀಸ್ .

Image result for red and blue color  flowers

ಜೀ ಕನ್ನಡ ವಾಹಿಸಿಯಲ್ಲಿ ಪ್ರಸಾರವಾಗುವ ಡ್ರಾಮ  ಜೂನಿಯರ್ಸ್  ಕರ್ನಾಟಕದ ಅಪರೂಪದ  ಬಾಲ ಪ್ರತಿಭೆಗಳ ಸಂಗಮವಾಗಿದೆ. ಮಕ್ಕಳು ಮಾಡುವ  ನಟನೆಯನ್ನು ಪ್ರಾಂಜಲ ಮನದಿಂದ  ನೋಡಬೇಕು. ಕಳೆದ ಸೀಸನ್ ನಲ್ಲಿ ನನಗೆ ಚಿತ್ರಾಲಿ ಮತ್ತು ಅಚಿಂತ್ಯ ಹೆಚ್ಚು ಇಷ್ಟವಾಗಿದ್ದರು. ಈ ಬಾರಿ ಕಾಸರಗೋಡಿನ  ಪುಟಾಣಿ ಶರ್ಮ, ಬಳ್ಳಾರಿಯ ಹರ್ಷ ಇಷ್ಟವಾಗಿದ್ದಾರೆ. ಮುನ್ಮುಂದೆ ಇನ್ನು ಬೇರೆಯವರು ಇಷ್ಟ ವಾಗುತ್ತಾರೆ ಬಿಡಿ :-)
ತೀರ್ಪುಗಾರರಾದ ಟಿ.ಎನ್.ಸೀತಾ ರಾಮ್, ಜ್ಯೂಲಿ ಲಕ್ಷ್ಮಿ, ಚಿನ್ನಾರಿ ಮುತ್ತ  ಅವರಲ್ಲದೆ ನಿರೂಪಕ ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ಮುಖ್ಯ  ಆಕರ್ಷಣೆಯಾಗಿದ್ದಾರೆ. ನಾಟಕದ ರಿಯಾಲಿಟಿ ಶೋಗೆ  ಆನಂದ್ ರಂತಹ ಅದ್ಭುತ  ನಟನನ್ನು ನಿರೂಪಕನನ್ನಾಗಿ ಮಾಡಿದ್ದು ಹೆಚ್ಚು ಸೂಕ್ತ.. ಆದರೇ ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ  ಹಾಡಿನ ರಿಯಾಲಿಟಿ ಶೋಗೆ ಅದ್ಯಾಕೆ ಹಾಡುಗಾರ/ಗಾರ್ತಿಯನ್ನು ನಿರೂಪಕರಾಗಿ ಆಯ್ಕೆ ಮಾಡಿರಲಿಲ್ಲ ? ಹಾಡಿನ ಕಾರ್ಯಕ್ರಮಕ್ಕೆ ಹಾಡಿನಲ್ಲಿ ಪರಿಣಿತಿ ಹೊಂದಿರುವವರು ಇದ್ದರೆ ಹೆಚ್ಚು ಸೂಕ್ತ  ಅಲ್ಲವೇ? 

No comments: