ಆಂಟಿ ...ಆಂಟಿ ...!

 



ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಡ್ರಾಮ ಜೂನಿಯರ್ಸ್  ಈಗ  5ನೇ ಸೀಜನ್ . . ಆರಂಭಿಕ ಸೀಜನ್ ಗಳನ್ನೂ ಹೆಚ್ಚು ನೋಡ್ತಾ ಇದ್ದೆ.. ಕ್ರಮೇಣ ಕಾರಣಗಳು, ಬ್ಯುಸಿಗಳು, ಅದು ಇದು ಅಂತ   ಗಮನ ಕೊಟ್ಟು ವೀಕ್ಷಣೆ ಮಾಡುವುದಕ್ಕೆ ಸಾಧ್ಯ ಆಗಿರಲಿಲ್ಲ. ಸಾಮಾನ್ಯವಾಗಿ ನಾನು ಕಂಡಂತೆ ಯಾವುದೇ ಕಾರ್ಯಕ್ರಮ ಆಗಿರಲಿ ಅದರಲ್ಲಿ ಸ್ಪರ್ಧಿಗಳು ಎಷ್ಟು ಮುಖ್ಯವೋ ಅಷ್ಟೇ ಪ್ರಾಧಾನ್ಯತೆಯನ್ನು ತೀರ್ಪು ಗಾರರು ಸಹ ಪಡೆದಿರುತ್ತಾರೆ. ಈ ರಿಯಾಲಿಟಿ ಷೋ ಮುಖ್ಯ  ಆಕರ್ಷಣೆ   ರವಿ ಮಾಮ , ಲಕ್ಷ್ಮಿ ಆಂಟಿ ಮತ್ತು ಮುದ್ದು ಗೊಂಬೆ  ರಚಿತಾ ರಾಮ್ . ನಾನು ಸಿನಿಮಾ ಪತ್ರಿ ಕೆಯಲ್ಲಿ ಕೆಲಸ ಮಾಡುವಾಗ  ನಂ  ಸೀನಿಯರ್ ಮೇಡಂ ಯಾವುದಾದರೂ ವೈಭವ ಬಗ್ಗೆ ಹೇಳುವಾಗ ಒಳ್ಳೆ ರವಿಚಂದ್ರ ಸಿನಿಮಾ ಸೆಟ್ ಇದ್ದಂಗಿತ್ತು ಕಣೆ ಅನ್ನೋರು. ರವಿ ಮಾಮನ ಬಗ್ಗೆ ಅವರಿಗೆ ಮಾತ್ರವಲ್ಲ ಕನ್ನಡದ ಸಿನಿಪ್ರಿಯರಿಗೂ ಸಹ ಅಂತಹದ್ದೇ ಭಾವವಿದೆ. ಹೊಸತನ , ಹೊಸರೀತಿಯ ಸಾಹಿತ್ಯ ಸಂಗೀತ.....  ಇತ್ತೀಚೆಗೆ ಫೇಸ್  ಬುಕ್ ನಲ್ಲಿ ಬೇರೆ ದೇಶದ ಮಾಡೆಲ್    ದ್ರಾ ಕ್ಷಿಯಿಂದ ಮಾಡಿದ ಉಡುಗೆ ತೊಟ್ಟ ಚಿತ್ರ ಸಿಕ್ಕಾಪಟ್ಟೆ ಸ ದ್ದು  ಮಾಡಿತ್ತು. ಆಗ  ಬಹಳಷ್ಟು ಮಂದಿ ಹೇಳಿದ್ದು ರವಿಚಂದ್ರನ್  ಸಿನಿಮಾ ನೋಡಿದಂಗೆ ಆಯ್ತು !

ಆಂಟಿ  ಅಂತ ಲಕ್ಷ್ಮಿ ಮೇಡಂಗೆ ಯಾಕೆ ಕರೆದೆ ಅಂದ್ರೆ ಇತ್ತೀಚಿಗೆ ಆಂಟಿ ಅನ್ನುವ ಪದವನ್ನು ವಿಕಾರ-ವಿಕೃತಿಗಳಿಗೆ ಬಳಸಿಕೊಳ್ಳುವ ಮಂದಿ ಒಂದಷ್ಟು ಇದ್ದರೂ   ಸಹ!ಆಂಟಿ ಎನ್ನುವ ಪಟ್ಟ ಅತ್ಯಂತ ವಿಶೇಷವಾದದ್ದು ಎಂದು ನಾನು ನಂಬುತ್ತೀನಿ. ಯಾಕೆಂದ್ರೆ ಇಲ್ಲಿ ವಯಸ್ಸಿನ ಹಂಗಿರಲ್ಲ ಮತ್ತು,  ಅರಿಯದ ಆಪ್ತಭಾವದ ತಂತು ಇರುತ್ತದೆ. ಅತ್ತೆ , ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ ಇಂತಹ ಅನೇಕ ಬಂಧಗಳು   ಒಂದು ಆಂಟಿಯಲ್ಲಿ ಸೇರಿ ಬಿಡುತ್ತದೆ. ನಿಜ ತಾನೇ ನಮ್ಮ ಬ್ಯುಟಿಫುಲ್  ಲಕುಮಿ/ ಲಕ್ಷ್ಮಿ ಆಂಟಿ.   ರಚಿತಾ ಬಗ್ಗೆ ಹೇಳುವಷ್ಟಿಲ್ಲ. ಗುಳಿಗಲ್ಲದ ಚೆಲುವೆ.. ಪ್ರತಿಭೆ. 

ಈ ಕಾರ್ಯಕ್ರ ಮದಲ್ಲಿ ಕಳೆದವಾರ  ಮಕ್ಕಳನ್ನು ಭಿಕ್ಷೆಗೆ ಬಿಡುವ ವಿಷಯಕ್ಕೆ ಸಂಬಂಧ ಪಟ್ಟ  ನಾಟಕ ಮನ ಕಲುಕಿತು.ಎಲ್ಲರಿಗೂ ಗೊತ್ತಿರುವಂತೆ ಇದು ನೈಜ ಘಟನೆ.. ಇದಕ್ಕೆ ಸಂಬಂಧಿಸಿದ ಅನೇಕ ವಿಡಿಯೋ ಗಳು ಜಾಲತಾಣದಲ್ಲಿ ಹರಿದಾಡಿತ್ತು. ಅದನ್ನು ನೋಡಿದಾಗ ಸಖತ್  ಭಯ ಮತ್ತು ದುಃಖ ಆಗ್ತಾ ಇತ್ತು .ಯಾರನ್ನು ನಂಬದ ಪರಿಸ್ಥಿತಿ ಈಗ. ಮಕ್ಕಳು ತುಂಬಾ ಸುಂದರವಾಗಿ ವಿಷಯ ತಿಳ್ಸಿದರು ನಾಟಕದ ಮೂಲಕ.. ಇದನ್ನು ನಿರ್ದೇಶಿಸಿ  ವೀಕ್ಷಕರ ಮುಂದೆ ಬಿಟ್ಟವರಿಗೂ   ಬಿಗ್ ಥ್ಯಾಂಕ್ಸ್ 

No comments: