ರಂಗಣ್ಣ ಅಂದ್ರೆ !!


ಕೆಲವು ಸಂಗತಿಗಳು ಮನದಲ್ಲಿ ಒಂಥರಾ ಭಾವನೆಗಳನ್ನು ಹೊರ ಹೊಮ್ಮಿಸ್ತಾ ಇರುತ್ತದೆ. ಅದನ್ನು ಯಾವ ರೀತಿ ವ್ಯಕ್ತ ಮಾಡ ಬೇಕೋ ಗೊತ್ತೇ ಆಗಲ್ಲ. ಆದರು ಎಲ್ಲ ಭಾವನೆಗಳನ್ನು ಹುದುಗಿಸಿಕೊಂಡು ಬದುಕ್ತೀವಿ.. ಲೈಫ್ ಅಂದ್ರೆ ಇಷ್ಟೇ ಅನ್ನಿಸುತ್ತೆ.
ಕಿರುತೆರೆಯಲ್ಲಿ ತಮ್ಮ ಧ್ವನಿ ಮೂಲಕ ಬಾಲಕೃಷ್ಣ ಕಾಕತ್ಕರ್ ಎಲ್ಲರ ಗಮನ ಸೆಳೆದಿದ್ದರು. ವಯಕ್ತಿವಾಗಿ ಏನೇ ಇರಲಿ ಆದರೆ ಬದುಕಲ್ಲಿ ಅವರು ಪಟ್ಟ ಪಾಡು ಕೇಳಿ, ಓದಿ ತುಂಬಾ ಒಂಥರಾ  ಆಯ್ತು. ಹೀಗೆ ಅವರು ಸಾಯುವ ದಿನ ನನ್ನ ಪಾಡಿಗೆ ನಾನು ಆಫೀಸಲ್ಲಿ ಬರೀತಾ ಇದ್ದೆ. ಮೆಸೇಜ್ ಬಂತು ಹಿರಿಯ ಜರ್ನಲಿಸ್ಟ್ ಒಬ್ಬರಿಂದ. ಕಾಕತ್ಕರ್ ಸತ್ತು ಹೋದನಂತೆ...! ಒಂದು ಕ್ಷಣ ಯಾವ ರೀತಿ ರಿಸೀವ್ ಮಾಡಿಕೊಳ್ಳ ಬೇಕೋ ಗೊತ್ತೇ ಆಗಲಿಲ್ಲ. 
ಆಗ ನಾನು ಛೆ ಅಯ್ಯೋ ಪಾಪ ಅಂತ ಮೆಸೇಜ್ ಮಾಡಿದೆ. ತಕ್ಷಣ ನೀ ನೋಬ್ಬಳೆ ಪಾಪ ಅಂತಾ ಇರೋದು ಬೇರೆಯವರೆಲ್ಲ ನಿನ್ನ ರೀತಿ ಅನ್ನಲಿಲ್ಲ, ಬಿಡು ಅದು ನಿನ್ನ ಒಳ್ಳೆ ಗುಣ ಅಂದ್ರು.  ಅದು ಸಹ ಮನದಲ್ಲಿ ಕೊರಿತಾ ಇತ್ತು. ಸತ್ತ ಬಳಿಕವು ಆ ವ್ಯಕ್ತಿಯನ್ನು ದ್ವೇಷಿಸುವುದಾದರೆ ಆ ವ್ಯಕ್ತಿ ನಿಜಕ್ಕೂ ಎಂತಹ ಗುಣ ಅಥವಾ ವರ್ತನೆ ಹೊಂದಿರ ಬಹುದು ಅಂತ ಅನ್ನಿಸಿತ್ತು. ಆದರೆ ಆ ಸತ್ತ ಜೀವದ ಬಗ್ಗೆ ಪತ್ರಕರ್ತ ಮಿತ್ರರು ತುಂಬಾ ಚಂದ ಬರೆದಿದ್ದರು. ಅವರ ಮೆಚ್ಚಿನ ಕಾಕಗೆ ಸರಿಯಾದ ರೀತಿಯಲ್ಲಿ ನಮನ ಸಲ್ಲಿಸಿದ್ದರು. 
ಸಾವಿನ ಮುಂಚೆ ಏನೇ ಇರಲಿ ಸತ್ತ ಬಳಿಕ ಕನಿಷ್ಠ ಒಂದು ಒಳ್ಳೆ ಮಾತು ಹೇಳಿದರೆ ಸಾಕು ಎನ್ನುವ ಮಂದಿ ಬದುಕಿರುವಾಗ ಒಂದಷ್ಟು ಒಳ್ಳೆ ಮಾತು ಹೇಳಿದರೆ  ? ಅದೇ ನಾವು ಮಾಡಲ್ಲ. 
@ ಲೈಫ್ ಸೂಪರ್ ಗುರು ರಿಯಾಲಿಟಿ ಷೋ ಪ್ರಸಾರ ಆಗ್ತಾ ಇದೆ ಜೀ ಕನ್ನಡ ವಾಹಿನಿಯಲ್ಲಿ ಗುರು ಮತ್ತು ಲೂಸ್ ಮಾದ ಜೋಡಿ ಜೊತೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಸಿಟಿಜನ್ ಇಂಡಿಯಾ ಆಟಗಳು ಹೆಚ್ಚು ಗಮನ ಸೆಳೆಯದೆ ಇದ್ರೂ ಕಳೆದ ವಾರದ  ಎಪಿಸೋಡ್ ಸ್ವಲ್ಪ  ಖುಷಿ ಕೊಡ್ತು. ಸ್ಪರ್ಧಿಗಳಾಗಿರುವ ಹಿರಿಯ ನಾಗರೀಕರು ಈಗಿನವರಂತೆ ಡೈನಮಿಕ್ ಆಗಿ ಡ್ರಸ್ ಧರಿಸಿ.. ತುಂಟತನದ ಮಾತುಗಳನ್ನು ಆಡುತ್ತ.. :-) 
ಈ ಕಾರ್ಯಕ್ರಮವನ್ನು ಕೇವಲ ಎಂಜಾಯ್ ಮಾಡುವ ದೃಷ್ಟಿಯಿಂದ ವೀಕ್ಷಿಸಿದರೆ ಒಳಿತು. ಇತ್ತೀಚಿಗೆ ಪ್ರಸಾರವಾದ ಷೋ ನಲ್ಲಿ ಒಂದು ಜೋಕ್ ಸೆಳೆಯಿತು. ಮೇಸ್ಟ್ರು ಕೇಳ್ತಾರೆ ಕೈ ಕೆಸರಾದರೆ  ಬಾಯಿ ಮೊಸರು ಎಂದು ಹೇಳ್ತಾರೆ ಆಗ ತಕ್ಷಣ ಉತ್ತರ ನೀಡಿದ ಹಿರಿಯ ನಾಗರೀಕ ಸ್ಟೂಡೆಂಟ್  ಕೈ ಕೆಸರಾದರೆ ತೊಳೋಕೋ ಬೇಕು  ಕೈ  ಕೊಳೆಯಾಗಿರುತ್ತೆ ಎಂದು ಉತ್ರ ನೀಡಿದರು!
ಇಂತಹ ಬಿಂದಾಸ್ ಉತ್ರಗಳು ಕನ್ನಡದಲ್ಲಿ ಸಾಧು ಕೋಕಿಲ, ತೆಲುಗಲ್ಲಿ ಬ್ರಹ್ಮಾನಂದಂ  ಮತ್ತು ಅಲಿ ನೀಡೋದು.. ಖುಷಿ ಆಯ್ತು.  ಇನ್ನು ನನಗೆ ಆ ಕಾರ್ಯಕ್ರಮ ಅರ್ಥ ಆಗಿಲ್ಲ, ಆದರು ಸಹಿತ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದೇನೆ..
@@ ಥಟ್ ಅಂತ ಹೇಳಿ ಕನ್ನಡದ ಕಿರುತೆರೆಯಲ್ಲಿ ಅತ್ಯದ್ಭುತವಾದ ಕಾರ್ಯಕ್ರಮ. ಪುಸ್ತಕಗಳು, ಮಾಹಿತಿಗಳು ಮತ್ತು ನಾ . ಸೋಮೇಶ್ವರ ಮೇಸ್ಟ್ರು ಎಲ್ಲವು ಚಂದನ ವಾಹಿನಿಯ ಆ ಸಮಯವನ್ನು ಸುಂದರವಾಗಿಡುತ್ತದೆ. ನನಗೆ ಇನ್ನು ವಿಸ್ಮಯ ಆಗಿರುವ ಸಂಗತಿ ಎಂದರೆ ಗೃಹಿಣಿಯರು ಅಂದ್ರೆ ಕೇವಲ ಕೆಲವೇ ಬಗೆಯ ಧಾರಾವಾಹಿಗಳಿಗೆ ಆದ್ಯತೆ ನೀಡುತ್ತಾರೆ ಎನ್ನುವ ಕೆಟ್ಟ ಹೆಸರನ್ನು ಹೊಂದಿದ್ದಾರೆ. ಆದರೆ ಬಹುತೇಕರು ಇಷ್ಟ ಪಡುವ ಕಾರ್ಯಕ್ರಮ ಥಟ್ ಅಂತ ಹೇಳಿ. 
ಮುಖ್ಯವಾಗಿ ಕೆಲವು ಬಾರಿ ಬರುವ ಸ್ಪರ್ಧಿಗಳನ್ನು ಕಂಡಾಗ ಮೇಸ್ಟ್ರ ಸ್ಥಿತಿಗೆ ಅಯ್ಯೋ ಅಂತ ಅನ್ನಿಸಿಬಿಡುತ್ತದೆ. :-)

ಸಾಮಾನ್ಯವಾಗಿ ನಾನು ಮುಖ್ಯವಾಗಿ ನಮ್ಮ ಅಮ್ಮ ಶುಕ್ರವಾರ ಥಟ್ ಅಂತ ಹೇಳಿ ಕಾರ್ಯಕ್ರಮ ವೀಕ್ಷಿಸುತ್ತಾರೆ. ಅಂದು ವಿಶೇಷ ಅತಿಥಿಗಳು   ಯಾರು ಎನ್ನುವ ಕುತೂಹಲ ಅವರಿಗೆ.  ನಿಜವಾಗಿ ಎಷ್ಟೊಂದು ಒಳ್ಳೊಳ್ಳೆ ಪ್ರತಿಭೆಗಳು ಕಂಡು ಬರ್ತಾರೆ. ಈ ವಿಷಯದಲ್ಲಿ ಖಂಡಿತ ಚಂದನ ವಾಹಿನಿಗೆ ಧನ್ಯವಾದ. 
@ ದುನಿಯಾ ವಿಜಯ್ ದಾಂಪತ್ಯ ಮುರಿಯದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆದಾಗ ಹೆಚ್ಚು ಖುಷಿ ಅನ್ನಿಸಿತ್ತು. ಯಾಕೇಂದ್ರೆ ಆ ಹೆಣ್ಣುಮಗಳ ಅತಂತ್ರತೆ, ಆ ಸುದ್ದಿ ಬರೆಯುವಾಗ ಪ್ರತಿಬಾರಿ ನನಗೆ ಬೇಸರ ಆಗ್ತಾ ಇತ್ತು. ವಿಜಯ್ ಸಂಸಾರ ಉಳಿಸುವಲ್ಲಿ ಪಬ್ಲಿಕ್ ಟೀವಿ ರಂಗಣ್ಣ ನ ಪಾತ್ರ ಜಾಸ್ತಿ ಇತ್ತು ಅನ್ನೋ ಸುದ್ದಿ ಕೇಳಿದಾಗ ಸಕತ್ ಖುಷಿ ಆಯ್ತು.. ರಂಗಣ್ಣ  ಅಂದ್ರೆ ಸೂಪರ್ ರಂಗ :-)

ಕಸ ಗುಡಿಸಿ


ಪೂರ್ಣ ವಿರಾಮ ಇಲ್ಲದ  ಒಂದು  ವಾಕ್ಯವನ್ನು  ನಾವು ಹೇಗೆ  ಊಹಿಸಲಾರೆವೋ,  ಅದೇ ರೀತಿ ಸಾವು ಸಹ ಬದುಕಲ್ಲಿ ಅತ್ಯಗತ್ಯ. ಕಮಲ್ ಹಾಸನ್ ಹಾಗಂತ ಕಮಲ್ ಹಾಸನ್ ಹೇಳಿದ್ದಾರೆ. ಅವರ ಪಾಪನಾಸನಂ ಸಿನಿಮಾ ಶೂಟಿಂಗ್ ಸಮಯದಲ್ಲಿ ತುಂಬಾ ನ್ಯಾಚುರಲ್ ಆಗಿ ಬರ ಬೇಕೆಂದು ಮಾಡಿಕೊಂಡ ಅವಾಂತರದಿಂದ ಅವರ ಉಸಿರಾಟಕ್ಕೆ ತೊಂದರೆ ಆಗಿತ್ತಂತೆ. ಹಾಗಂತ ಓದಿದ್ದೆ. ಬಿಡಿ ಆ ವಿಷ್ಯ
ಈ ಸಾವಿನ ಬಗ್ಗೆ ಕುತೂಹಲ ಇದ್ದೆ ಇರುತ್ತದೆ ಎಲ್ಲರಿಗು. ಆದರೆ ಅದು ಬರುವಂತೆ ಬಂದರೆ ಚಂದ ಅಷ್ಟೇ. ಸ್ಟಾರ್ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದಾದ ಸತ್ಯಮೇವ ಜಯತೆಯಲ್ಲಿ ಆತ್ಮಹತ್ಯೆ ಬಗ್ಗೆ ಮಾತನಾಡಿದ ಆಮೀರ್ ಖಾನ್ , ಅದರಿಂದ ನೊಂದ ಕುಟುಂಬಗಳ ಬಗ್ಗೆ ಹೇಳುತ್ತಾ ರಸ್ತೆ ಅಪಘಾತದಲ್ಲಿ ಮರಣಿಸುವವರ ನಂತರದ ಸ್ಥಾನ ಈ ಹರೆಯದ ಆತ್ಮಹತ್ಯೆಯ ಪ್ರಕರಣಗಳು ಇವೆ ಎನ್ನುವ ಮಾತು ಸಕತ್ ಬೇಜಾರು ಅನ್ನಿಸಿತು. ಆಮೀರ್  ಇಂತಹ ಕಾರ್ಯಕ್ರಮಕ್ಕೆ ಸೂಕ್ತ ನಿರೂಪಕ ಸಚ್ಚಿ !

ನಾನು ಕಳೆದ ವರ್ಷ ಒಂದು ಲೇಖನ ಓದಿದ್ದೆ. ಅದರಲ್ಲಿ ಹೀಗೆ ಒಬ್ಬ ಹರೆಯದ ಹುಡುಗ ಆತ್ಮಹತ್ಯೆ  ಮಾಡಿಕೊಳ್ಳಲು ನಿರ್ಧಾರ ಮಾಡಿದನಂತೆ. ಆದರೆ ಆತ ತಾನು ಸಾಯುವ ಸಂಗತಿಯನ್ನು ತನ್ನ ಎಲ್ಲ ಮಿತ್ರರಿಗೆ ಎಸೆಮೆಸ್ ಮೂಲಕ ಹೇಳಿದನಂತೆ. ಯಾರಿಗೂ ಆತನನ್ನು ಉಳಿಸಲು ಸಾಧ್ಯವಾಗದ ಪರಿಸ್ಥಿತಿ. ಆಗ  ಸಾಯುವುದಕ್ಕಿಂತ ಬದುಕು ಸಾಧಿಸು ಎನ್ನುವ ಅರ್ಥ ಹೊಂದಿರುವ   ಒಂದು ಎಸೆಮೆಸ್  ಈತನ ಬದುಕಿನ ಚಿತ್ರ ಬದಲಾಯಿಸುತ್ತದೆ. ಸಾರಿ ಆ    ಲೇಖನ ಅರ್ಧಂಬರ್ಧ ನೆನಪಿದೆ.. ಆದರೆ ಆಮೀರ್ ಈ ಸಂಗತಿ  ಹೇಳುವಾಗ ನನಗೆ ಪದೇಪದೇ ನೆನಪಿಗೆ ಬಂತು.. ತುಂಬಾ ಚಂದದ ಕಾರ್ಯಕ್ರಮ ಪೀಕೆ ಆಮೀರ್ :-) .

@ ಶಾರುಖ್ ಖಾನ್ ಬಗ್ಗೆ ಬರೆಯುವಾಗ ನನಗೆ ಸದಾ ಅವರು ಬೆಳೆದ   ಪರಿ ನೆನಪಿಗೆ ಬರುತ್ತದೆ. ಈಗ ಜೀ ಹಿಂದಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಡ್ಯಾನ್ಸ್ ಕಾರ್ಯಕ್ರಮದ ಶಾರುಖ್, ಫೌಜಿ , ಚಮತ್ಕಾರ್ ....ಅನೇಕ ಸಂಗತಿಗಳು ಶಾರುಖ್ ಬಗ್ಗೆ ಓದುವಾಗ ಆಗೆಲ್ಲ ಸಾಧಕರ  ಬದುಕೆಷ್ಟು ಕಷ್ಟಕರ ಅನ್ನಿಸಿತ್ತು. ಆಗ ಅಷ್ಟೇ ನನ್ನ ಯೋಚನಾ ಮಟ್ಟ  ಇದ್ದುದು..ಇತ್ತೀಚೆಗೆ ಅಂದ್ರೆ ಹ್ಯಾಪಿ ನ್ಯೂ ಇಯರ್ ನಲ್ಲಿ ಶಾರುಖ್ ತಮ್ಮ  ಬದುಕನ್ನು ಹಂಚಿಕೊಂಡಿದ್ದರು ಮಾಧ್ಯಮಗಳ ಮುಂದೆ..ಅದರಲ್ಲಿ ತಮ್ಮ ಮಕ್ಕಳು ಯಾವರೀತಿ ಆರಂಭಿಕ ಹಂತದಲ್ಲಿ ತಮ್ಮ ಫ್ಯಾನ್ಸ್ ಪ್ರೀತಿ ಕಂಡು ಹೆದರುತ್ತಿದ್ದರು. ತಮ್ಮ ವಿರಾಮದ ವೇಳೆಯಲ್ಲಿ ಶಾರುಖ್  ಬುಕ್ ಓದುವ ವಿಷಯ ಎಲ್ಲ ಎಲ್ಲ...! ನಮ್ಮ ಮನೆಯಲ್ಲಿ ಶಾರುಖ್ ಫ್ಯಾನ್ ಕ್ಲಬ್ ಸಹ ಇದೆ :-) ಅದರ ಮೆಂಬರ್ ಗಳು ಒಂದಷ್ಟು ಚಂದದ ಬಾಲಕಿಯರು :-)

 ನನಗೆ ಶಾರುಖ್ ಅವರ ಬದುಕಲ್ಲಿ ಅಬ್ರಾಂ ಹುಟ್ಟಿದಾಗ ಆದ ಗಲಾಟೆ ನೆನಪಿಸಿಕೊಂಡರೆ ಬೇಸರ ಎಂದೆನಿಸುತ್ತದೆ. ಸೂಪರ್ಸ್ಟಾರ್ ಆದ ಮಾತ್ರಕ್ಕೆ ಅವರು ತಂದೆ ಅಲ್ವೇ .. ಅವರಿಗೂ ಭಾವನೆಗಳು ಇರಲ್ವೆ.. !
ಎನಿವೆಸ್ ಮಗು ಮಾತ್ರ ಸಕತ್ ಇದೆ  :-)


@  ಕಲರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್ ಬಾಸ್ ನಲ್ಲಿ ಹಿರಿಯ ಕಲಾವಿದ ಪುನೀತ್ ಇಸ್ಸಾರ್ ದುರ್ಯೋಧನನಂತೆ ಆ ಷೋ ಅರ್ಧದಲ್ಲಿ ಹೋದದ್ದು ಬೇಸರ ಅನ್ನಿಸಿತು. ಸಾಮಾನ್ಯವಾಗಿ ಇಂತಹ ಹಿರಿಯ ಕಲಾವಿದರ ಬಗ್ಗೆ ಹೆಚ್ಚಿನ ಗಮನ ಇರುತ್ತದೆ. ಆದರೆ ಅವರೇ ತಪ್ಪು ಮಾಡಿ ಹೀಗೆ ಹೋಗ್ತಾರೆ. ಅದು ಬಿಡಿ ಕಳೆದವಾರ ಅತಿ ಹೆಚ್ಚು ಜನರು ಪೊರಕೆ ತೆಗೆದುಕೊಂಡಿದ್ದರು. ಸಲ್ಮಾನ್ BOY  ನೀವು ಸಹ ಕಸ ಗುಡಿಸಿ ಬಿಟ್ಟಿರೆ....  ಆಹಾ ಆಹಾ ಮತ್ತು ಆಹಾ.. ಆದರು  ಮೋದಿಜಿ ಅವರು ಸ್ವಚ್ಛ ಭಾರತ ಕನಸು ನನಸು ಮಾಡುವ ಮಂದಿ ಹೀಗೆ ಒಟ್ಟಾಗಿ ಕಸ ಗುಡಿಸುವುದು  ನನಗೆ ಸಕತ್ ಮಜಾ ನೀಡಿದೆ. ನಾನು ಕಂಡಂಗೆ ಯಾರೇ ಆಗಲಿ ಹೀಗೆ ಒಟ್ಟಿಗೆ ಕಸ ಗುಡಿಸಲ್ಲ . ಆ ರಸ್ತೆ, ಅಥವಾ ಒಂದು ಭವನ ಅಥವಾ ಪಾರ್ಕ್ ಅಥವಾ .. ಅಥವಾ ರಾಜಕಾರಣಿಗಳು ಬರ್ತಾರೆ ಅಂದಾಗ ಹೀಗೆ ಒಟ್ಟಿಗೆ ಕಸ ಗುಡಿಸಿ ತಾವು ಕೆಲಸ ಮಾಡಿದ್ದೀವಿ ಅಂತ ತೋರಿಸುತ್ತಾರೆ  ಬೀದಿ ಕಸ ಗುಡಿಸುವ ಮಂದಿ.. ಆದರೂ ಕಸದ ಬಗ್ಗೆ ನಿಮಗೆಲ್ಲರಿಗೂ  ಗಮನ ಬಂದಿದ್ದು ಖುಷಿ ಕೊಡ್ತು. ಅದೇರೀತಿ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಕಿಚ್ಚ ಸುದೀಪ್ ಈ ಕೆಲ್ಸಕ್ಕೆ ಮುಂದಾಗಿದ್ದಾರೆ.ಒಳ್ಳೆಯ  ಕೆಲಸ .. ಆದರೆ  ಮತ್ತೆ ಯಾವಾಗ ಸಲ್ಮಾನ್ Boy  ಕಸ ಗುಡಿಸೋದು ;-)

ಪ್ರಾಪರ್ಟಿ



ಅತ್ಯಂತ ಖೇದ ಅನ್ನಿಸುವ ಸುದ್ದಿ ಮಕ್ಕಳ ಮೇಲೆ ಮಾಡುವ ಅತ್ಯಾಚಾರ. ಅದರಲ್ಲೂ ರೆಪ್ಯು ಟೆಡ್ ಶಾಲೆಗಳಲ್ಲಿ ಆ ರೀತಿಯ ವಾತಾವರಣ ಇದ್ದಾರೆ ಕೆಳಸ್ತರದ ಮಕ್ಕಳು ಯಾವರೀತಿ ಬದುಕಲು ಸಾಧ್ಯ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ  . ಮುಖ್ಯವಾಗಿ ಇಂತಹ ಪ್ರಕರಣಗಳನ್ನು ಆ ಗಳಿಗೆ ತೋರಿ ಸುಮ್ಮನಾಗುವ ಮಾಧ್ಯಮಗಳು ಆನಂತರ ಮತ್ತೊಂದು ಪ್ರಕರಣ ಆಗುವ ತನಕ ಇಂತಹ ಸಮಸ್ಯೆಗಳು ನಮ್ಮ ಸಮಾಜದಲ್ಲಿ ಕಳೆಯಂತೆ  ಬೇರೂರಿದೆ ಕಿತ್ತು ಬಿಸಾಡ ಬೇಕು ಎನ್ನುವ ಅಂಶದ ಕಡೆಗೆ ಗಮನ ನೀಡ ಬೇಕು.ಪೂರಕ ವಾತಾವರಣದ ಸೃಷ್ಟಿ ಆಗ ಬೇಕು. ಆದರೆ ಮಾಧ್ಯಮವನ್ನು ನಡೆಸುವವರು ಮನುಷ್ಯರೆ ಅಲ್ವೆ ? ಅವರು ತಮ್ಮ ಲಿಮಿಟ್ ನಲ್ಲಿ ಏನಾಗುತ್ತದೆಯೋ ಅದನ್ನು ಮಾಡುತ್ತಾರೆ.


@ ಸಾಮಾನ್ಯವಾಗಿ ಟೀವಿ ಟಾಕ್  ಷೋ ಗಳನ್ನೂ ಪ್ರಸಿದ್ಧರು ಮಾಡುತ್ತಾರೆ. ಆಗ ಎಲ್ಲರು ಅವರೆಷ್ಟೇ ತಪ್ಪು ಮಾಡಲಿ ಒಪ್ಪಿಕೊಂಡು ಬಿಡ್ತಾರೆ. ಅದು ಸಾಮಾನ್ಯ ಸಂಗತಿ. ಆದರೆ ಪ್ರಸಿದ್ಧರ ಮಕ್ಕಳು ಇಂತಹ ಸಾಹಸಕ್ಕೆ ಕೈ ಹಾಕಿದಾಗ ಜನರು ಅವರ ಬಗ್ಗೆ ಅಭಿಪ್ರಾಯ ಹೇಳೋಕೆ ಹಿಂದೇಟು ಹಾಕ್ತಾರೆ. ಅದು ಅವರ ಬೆಳವಣಿಗೆಗೆ ಅಡ್ಡಗಾಲು ಅಂತ ನಾನು ನಂಬುತ್ತೀನಿ. ಭಾವನ ಬೆಳಗೆರೆ ವಿಷಯದಲ್ಲೂ ಸಹಿತ ಹಾಗೆ ಆಗಿದೆ. ಆಕೆಯ ಪ್ರತಿಭೆ ಹೊರ ಬರಲು ಇನ್ನು ಪ್ರಯತ್ನ ಮಾಡ ಬೇಕು. ಯಾಕೇಂದ್ರೆ ಸೋಫಾ ಇದ್ದ ಕಡೆ ಹೋಗಿ ಮಾತಾಡಿ ಬರುವ ಪರಿಪಾಠ ಹೊಂದಿದ್ದಾರೆ ಅದೇ ದೊಡ್ಡ ಸಮಸ್ಯೆ. ನಿರೂಪಣೆಗೆ ಪ್ರಾಪರ್ಟಿ ಸಹ ಹೆಚ್ಚು ಪ್ರಾಮುಖ್ಯತೆ ಗಳಿಸುತ್ತದೆ.. ಉತ್ತಮ ನಿರೂಪಕರಿಗೆ  ಕ್ರೇಜಿ ಸ್ಟಾರ್ ರವಿಚಂದ್ರನ್  ಮನಸ್ಥಿತಿ ಇರಬೇಕು. ಹಾಗೆ ಆದಾಗ ಮಾತ್ರ ಎಲ್ಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳ ಬಹುದು. ರವಿಮಾಮ ಅವರ ಹೊಸ ಸಿನಿಮಾದಲ್ಲಿ ಲಿಫ್ಟ್ ಮುಖ್ಯ ಪಾತ್ರಧಾರಿಯಂತೆ.. ನನಗೆ ಆ ಸಂಗತಿ ತಿಳಿದೇ ರೋಮಾಂಚನ ಆಗಿ ಹೋಯ್ತು. ಅವರು ಸಂದರ್ಶನ ಒಂದರಲ್ಲಿ ತನ್ನ ಕಣ್ಣಿಗೆ ಯಾವ ವಸ್ತು ಕಂಡರು ಅದನ್ನು ಹೇಗೆ ಬಳಸಿಕೊಳ್ಳ ಬೇಕು ಎನ್ನುವ ಯೋಚನೆ ಬಂದು ಅದನ್ನು ಕಾರ್ಯರೂಪಕ್ಕೆ ತರುವ ಮನಸ್ಥಿತಿ ಉಂಟಾಗುತ್ತದೆಯಂತೆ. .ಈ ಸಂಗತಿಯನ್ನು ಭಾವನಾಗೆ ಹೇಳ್ತಾ ಇರೋದು ಯಾಕೆ ಅಂದ್ರೆ ಆಕೆಯ ಖಾಸಬಾತ್ ವಿತ್ ಭಾವನ ಬೆಳಗೆರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ..ಅಂದಂಗೆ ಈ ಕಾರ್ಯಕ್ರಮ ಕಸ್ತೂರಿ ವಾಹಿನಿಯಲ್ಲಿ ಪ್ರಸಾರ ಆಗುತ್ತದೆ. ಭಾವನ ಅಕ್ಕ ಚೇತನ ನನ್ನ ಎಫ್ಬಿ ಗೆಳತಿ..ಆಗಾಗ ತನ್ನ ಮನದ ಭಾವನೆಗಳನ್ನು ಬರೀತಾ ಇರ್ತಾರೆ ಸಕತ್ ಇಷ್ಟ ಆಗುತ್ತೆ ಓದೋಕೆ  ನನಗೆ.ಮತ್ತೊಂದು ವಿಷ್ಯ ಭಾವನ ಇದು ನನ್ನ ಅಭಿಪ್ರಾಯ ಮಾತ್ರವಲ್ಲ ಬಹುತೇಕರದ್ದು! ಮತ್ತೊಂದು ಸಂಗತಿ ದೊಡ್ಡಣ್ಣನಂತಹ   ಹಿರಿಯರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಮಾತಾಡೋದು ಕಂಡಾಗ ಯಾರಿಗೂ ಆಪ್ತ ಆಗಲ್ಲ !!   

ಪಾಕ ಕೆಡಿಸ್ತಾರೋ

ದೀಪದ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು .. ಬದುಕಲ್ಲಿ ಕತ್ತಲೆಗೆ ಜಾಗ ಇಲ್ಲದಷ್ಟು ಗೆಲ್ಲುವ ಹುಮ್ಮಸಿನ ಬೆಳಕು ಸದಾ ಪ್ರಕಾಶಮಾನವಾಗಿರಲಿ...ನಿಮ್ಮ ಬಾಳಲ್ಲಿ ಕತ್ತಲು ಕರಗಿ ಬೆಳಕಿನ ಪ್ರಭಾವ ಸದಾ ಇರಲಿ ಎನ್ನುವ ಶುಭ ಹಾರೈಕೆ..



ಹಿಂದಿ   ಜನ ದೀಪಾವಳಿಯನ್ನು ದಿವಾಳಿ ಮಾಡಿ ಒದ್ದಾಡುತ್ತಾರೆ..ನಾವು ದೀಪಾವಳಿ ಅಂತ ಹೇಳ್ತಿವಿ. ನನ್ನ ಎಫ್ಬಿ ಮಿತ್ರ ರೋಹಿತ್ ರಾಮಚಂದ್ರಯ್ಯ ದೀಪಾವಳಿ ಬದಲಾಗಿ  ದಿವಾಳಿ(ಲಿ) ಅಂತ ಬರೆದರೆ ನಾನು ಅನ್ ಫ್ರೆಂಡ್ ಮಾಡ್ತೀನಿ ಅಂತ ಕೋಪ ತೋರಿದ್ದಾರೆ. ಆದರು ನನಗೆ ದಿವಾಳಿ(ಲಿ) ಅನ್ನೋದು ನನಗೆ ಗೂಗಲ್ ನಲ್ಲಿ ಸಿಕ್ಕ ಕಾರಣ ಅದನ್ನೇ ಹಾಕಿದ್ದೇನೆ...ದಿವಾಳಿ ಅನ್ನೋ ಪದ ನಿಮ್ಮ ಬದುಕಲ್ಲಿ ಪ್ರಭಾವ ಬೀರದಿರಲಿ ಎನ್ನುವ ಹಾರೈಕೆ ನನ್ನದು :-)

ಇವತ್ತು ದೀಪಾವಳಿ  ಹಬ್ಬಕ್ಕಿಂತ ಚಿನ್ನದ ಚೀಟಿ ಗೀಟಿ ಇತ್ಯಾದಿ ಬಗ್ಗೆ ಒಂದು ಕಾರ್ಯಕ್ರಮ ಇತ್ತು ಟೀವಿ ನೈನ್ ವಾಹಿನಿಯಲ್ಲಿ. ಹರಿಪ್ರಸಾದ್ ಅವರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಚಿನ್ನದ ಬಗ್ಗೆ ಭಾರತೀಯರಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ದುಡ್ಡು ಮಾಡುವ ಮಂದಿ ಬಹಳಷ್ಟು ಮಂದಿ! ನಾನು ಅನೇಕ ಬಾರಿ ಚಿನ್ನ ಖರೀದಿ ಮಾಡಿದ್ದೇನೆ . ಆದರೇ,  ಒಂದು ಅಂಗಡಿಯಲ್ಲಿ ಕೊಂಡಾಗ ಕೊಟ್ಟ ಭರವಸೆ ಅದನ್ನು ಬದಲಾಯಿಸುವಾಗ  ಬೇರೆ ಆಗಿರುತ್ತದೆ. ಅದರಲ್ಲೂ ಈ ಚಿನ್ನದ ಒಡವೆ ಆರ್ಡರ್ ಮಾಡಿದಾಗ ಇರುವ ಪರಿಸ್ಥಿತಿ , ಅದು ನಮ್ಮ ಕೈಗೆ ಬಂದಾಗ  ??  ಬಿಡಿ ..ಇಂತಹ ವರ್ತನೆ ಸಾಕಷ್ಟು ಬಾರಿ ಆಶ್ಚರ್ಯ ಉಂಟು ಮಾಡಿದೆ ನನಗೆ..  ಚಿನ್ನದ ಮೋಸಕ್ಕೆ ಕಡಿವಾಣ ಇಲ್ಲ. ಅದೇ ಬೇಸರದ ಸಂಗತಿ !


ಅಜೀಬ್ ದಾಸ್ತಾನ್ ಹೈ ಏ ಅನ್ನುವ ಧಾರವಾಹಿ ಲೈಫ್ ಓಕೆ ವಾಹಿನಿಯಲ್ಲಿ  ಪ್ರಸಾರ ಆಗ್ತಾ ಇದೆ.  ಸುಂದರಿ ಸೊನಾಲಿ ಬೇಂದ್ರೆ  ಈ ಧಾರವಾಹಿ ಮುಖ್ಯ ಪಾತ್ರಧಾರಿ. ಬಿಗ್ ಬಾಸ್ 7ರ  ಸ್ಪರ್ಧಿಯಾಗಿದ್ದ ಅಪೂರ್ವ ಅಗ್ನಿಹೋತ್ರಿ  ಸಹ ಮುಖ್ಯ ಪಾತ್ರಧಾರಿ. ಕಥೆ ಸಕತ್ ಆಸಕ್ತಿಕರವಾಗಿದೆ. ವಿಷಯ ಸಾಮಾನ್ಯ ಅಂತ ಅನ್ನಿಸಿದರು ಸೊನಾಲಿ ಮತ್ತು ಅಪೂರ್ವ ಇಬ್ಬರು ತುಂಬಾ ಚಂದ ಅಭಿನಯಿಸಿದ್ದಾರೆ. ಸಧ್ಯಕ್ಕೆ ಅದಾಗ ತಪ್ಪದೆ ನೋಡ್ತಾ ಇರೋ ಧಾರವಾಹಿ ಇದು. ಈ ಧಾರವಾಹಿ ಆರಂಭ ಆಗುವ ಮುನ್ನ ಸೊನಾಲಿ ತನ್ನ ಪತಿ ಈ ಧಾರಾವಾಹಿಯಲ್ಲಿ ಅಭಿನಯಿಸುವಾಗ ತುಂಬಾ ಕೊ ಆಪರೇಟ್ ಮಾಡ್ತಾರೆ ಎಂದು ಹೇಳಿದ್ದರು. ಅದೇ ರೀತಿ ಸೊನಾಲಿ ಬಗ್ಗೆ ಅಪೂರ್ವ ಸಹ ಒಳ್ಳೆ ಮಾತಾಡಿದ್ದರು.ಸಾಕಷ್ಟು ಕುತೂಹಲ ಇತ್ತು ನನಗೆ ಈ ಧಾರವಾಹಿ ಬಗ್ಗೆ.. ಚಂದ ಇದೆ..ಯಾವಾಗ ನಿರ್ದೇಶಕರು ಪಾಕ ಕೆಡಿಸ್ತಾರೋ ಆಗ ನೋಡೋದು ಬಿಟ್ರಾಯ್ತು :-)



ತಪ್ಪದೆ ವೀಕ್ಷಿಸುವ ಕಾರ್ಯಕ್ರಮ ಜೀ ವಾಹಿನಿಯಲ್ಲಿ  ಪ್ರಸಾರ ಆಗುವ  ವೀಕೆಂಡ್ ವಿತ್ ರಮೇಶ್. ನಿಜಕ್ಕೂ ಅತ್ಯಂತ ಸುಂದರ ಕಾರ್ಯಕ್ರಮ. ಉಮಾಶ್ರೀ ಮತ್ತು  ಮುಖ್ಯ ಮಂತ್ರಿ ಚಂದ್ರು ಅವರ ಜೊತೆಗಿನ ಮಾತುಕತೆ ಇಷ್ಟ ಆಯ್ತು. ಚಂದ್ರು ಅವರ ಪತ್ನಿಯ ನೇರ ನುಡಿ .. ಮನದ ಭಾವ ಸಹ ಇಷ್ಟ ಆಯ್ತು.ಒಮ್ಮೆ ಹೀಗೆ ಕಾರ್ಯಕ್ರಮ ಒಂದರಲ್ಲಿ ಚಂದ್ರು ಪತ್ನಿ ಅವರನ್ನು ಭೇಟಿ ಆಗಿದ್ದೆ.. ಅವರ ಜೊತೆ ನಾನು ಜಯನಗರದ ತನಕ ಬಂದಿದ್ದೆ ಅವರ ಕಾರ್ ನಲ್ಲಿ.. ಆಗ ಎಷ್ಟು ಮಾತಾಡಿದ್ವಿ   ಗೊತ್ತೇ. ! ಜಾಣೆ.. ಸಾಮಾನ್ಯವಾಗಿ ಟಿ ಎನ್ ಸೀತಾರಾಮ್ ಅವರ ಧಾರಾವಾಹಿಯಲ್ಲಿ ಮುಖ್ಯಮಂತ್ರಿ ಪಾತ್ರಧಾರಿ ಆಗಿದ್ದರು ಈಕೆ :-) ಒಂದೇ ಮನೆಯಲ್ಲಿ ಗಂಡ-ಹೆಂಡ್ತಿ ಇಬ್ರೂ ಮುಖ್ಯಮಂತ್ರಿಗಳು.

ಮೋಶನ್ ಪೋಸ್ಟರ್



ಕಳೆದ ವಾರ ಅಲ್ಲ ಸುಮಾರು ಹತ್ತು ದಿನಗಳಿಂದ ಜ್ವರ, ಸುಸ್ತು.. ಜೊತೆಗೆ ರಾಶಿ ರಾಶಿ ಆಫೀಸ್ ವರ್ಕ್ .. ಬ್ಯಾಡ ಅಂದ್ರು ಬಿಡದ ಜವಾಬ್ದಾರಿ.. ಅವುಗಳ ನಡುವೆ ಮಾಡಿದ ಕೆಲಸಕ್ಕೆ ಪುರಸ್ಕಾರ ನೀಡೋದು ಬೇಡ ತಮ್ಮ ತಪ್ಪು ಮುಚ್ಚಿಟ್ಟು ಕೊಳ್ಳೋಕೆ ನಮ್ಮನ್ನೇ ಹೊಣೆ ಮಾಡುವ ಮಂದಿ.. ಇಷ್ಟು ಅಂಶಗಳ ನಡುವೆ ದೇಹ ಮತ್ತು ಮನಸ್ಸು ಎರಡು ದಣಿದಿತ್ತು. ಹಾಗಂತ ಈಗ ಚೇತರಿಕೆ ಆಗಿದೆ ಎಂದು ಅಲ್ಲ ಇದರ ಅರ್ಥ. ಆದರೆ ಚೇತರಿಸಿ ಕೊಳ್ಳಲೇ ಬೇಕು.. ಮಾಧ್ಯಮದಲ್ಲಿ ಕೆಲಸ ಮಾಡುವವರು ಕೊಚ್ಚೆಯಲ್ಲಿರುವ ಎಮ್ಮೆ ಥರ ಇದ್ದಾಗ ಮಾತ್ರ ಏನೇ ಆದರೂ ನಿರ್ಲಿಪ್ತವಾಗಿ ಇರ ಬಹುದು..



ಏನೇ ಆದರು ಟೀವಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ತಪ್ಪದೆ ನೋಡೋ ಪದ್ಧತಿ ಹಾಗೆ ಮುಂದುವರೆದಿದೆ. ಬ್ಲಾಗ್ ಬರೆಯೋಷ್ಟು ಮನಸ್ಸು ಇಲ್ಲದೆ ಇದ್ದರು ಸಹಿತ ಟೀವಿ ನೋಡುವಷ್ಟು ಸಹನೆ ಇತ್ತು ಮತ್ತು ಇದೆ. 
ಸಾಮಾನ್ಯವಾಗಿ ನ್ಯೂಸ್ ಚಾನೆಲ್ಗಳು ನೋಡಲು ಹೆಚ್ಚಾಗಿ  ಆದ್ಯತೆ ನೀಡುತ್ತೀನಿ.  ರಿಯಾಲಿಟಿ ಶೋಸ್ ಅದರಲ್ಲೂ ಸ್ವಲ್ಪ ಮಜಾ ಕೊಡ ಬೇಕು, ನನಗೆ ಇಷ್ಟ  ಆಗುವ ಕಲಾವಿದರು ಅಥವಾ ಆಂಕರ್ ಗಳು ಇರ ಬೇಕು ಹೀಗೆ ಹತ್ತು ಹಲವಾರು ಸಂಗತಿ. 
 ಮೂಡ್ ಇರಲಿ ಬಿಡಲಿ ಇದ್ರೂ ಕಲರ್ ವಾಹಿನಿಯಲ್ಲಿ  ಬಿಗ್ ಬಾಸ್ ಅದರಲ್ಲೂ  ಸಲ್ಮಾನ್ ಖಾನ್ ನೋಡೋದಕ್ಕೆ  ತಪ್ಪದೆ ಶನಿವಾರ ಭಾನುವಾರ ಕಾಯ್ತೀನಿ. ಅದೇರೀತಿ ಕಪಿಲ್ ಕಾರ್ಯಕ್ರಮ ಸಹಿತ.ಗುತ್ತಿ,ಪಲಕ್ ಮತ್ತು ದಾದಿ, ಸಿದ್ದುಜಿ ಅಂದರೆ ಜಾಸ್ತಿ ಲೈಕ್! 
ಎಲ್ಲಾ ಹೆಣ್ಣುಮಕ್ಕಳಿಗೂ ಸಲ್ Man Boy  ..  ಬಗ್ಗೆ ನನಗೂ ಇಷ್ಟ.. ಹಾಗೂ ಒಂದು ಸ್ವಲ್ಪ  ಜಾಸ್ತಿನೆ ಹೊಟ್ಟೆಕಿಚ್ಚು.. ನಮಗೆ ವಯಸ್ಸಾಗ್ತಾ ಇದೆ ಆದ್ರೆ ಸಲ್ಮಾನ್ ಗೆ ಯಾಕಿನ್ನು ಆಗಿಲ್ಲ ವಯಸ್ಸು ಅನ್ನೋ ಕುತೂಹಲ :-) ಒಟ್ಟಾರೆ ಸಲ್ಮಾನ್   ಬಗ್ಗೆ ಹೇಳೋದು ಬರೆಯೋದು ಜಾಸ್ತಿ ಇದೆ..

ಸಾಮಾನ್ಯವಾಗಿ ನಾನು  ಆನ್ಲೈ ಪತ್ರಿಕೆಯಲ್ಲಿ ಸಲ್ಮಾನ್ ಬಗ್ಗೆ ಅಲ್ಲದೆ ಯಾರ ಬಗ್ಗೆ ಆಗಿರಲಿ ಬರೆಯುವಾಗ ಜಾಸ್ತಿ ಓದಿರ್ತೀನಿ. ಆದರೆ ಒಂದಷ್ಟು ಸಂಗತಿಗಳನ್ನು ಮಾತ್ರ ಬರೆದರೂ ಅಗತ್ಯ ಇರುವಾಗ ಬೇರೆ ಬೇರೆ ಸಂಗತಿಗಳನ್ನು ಬಳಸಿಕೊಳ್ತಿನಿ..ಒಬ್ಬರ ಬಗ್ಗೆ ಬರೆಯುವಾಗ ಹತ್ತು ಲೇಖನಕ್ಕೆ ಆಗುವಷ್ಟು ಮಾಹಿತಿ ಇಟ್ಟುಕೊಂಡಿರ್ತಿನಿ.. ಅದೇ ನನ್ನ ಪದ್ಧತಿ...ಸಲ್ಮಾನ್ ಖಾನ್ ಬಗ್ಗೆ ಅಯ್ಯೋ ಪಾಪ ಅಂತ ಅನ್ನಿಸುತ್ತೆ ನನಗೆ. ಯಾವುದೇ ಹೊಸ ಹೀರೋಯಿನ್ ಗಳು ಇರಲಿ ಸಲ್ಮಾನ್ ಭುಜಕ್ಕೆ ರಪ್ಪ ರಪ್ಪ ಅಂತ ಹೊಡೆದೆ ತೀರುತ್ತಾರೆ. ಬೇಕಾದ್ರೆ ನೋಡಿ ಯಾವುದೇ ಚಿತ್ರದ ಪ್ರಮೋಶನ್ ಆಗಿರಲಿ ಆ ಚಿತ್ರದ ಹೀರೋಯಿನ್ ಒಂದೆರಡು ಏಟು ಹಾಕಿರ್ತಾಳೆ.ಇತ್ತೀಚೆಗೆ ಬಿಡುಗಡೆ ಆದ ಕಿಕ್ ಪ್ರಮೋಶನ್ ಸಮಯದಲ್ಲೂ ಸಹ.. ಜಾಕ್ವಲಿನ್  ಸಹ  ರಪ್ಪ ರಪ್ಪ ಅಂತ  ಒಂದೆರಡು ಏಟು ಹಾಕಿ  ನೋಡಿ ನಾನು ಸಲ್ಮಾನ್ ಖಾನ್  ಅವರನ್ನು ಹೇಗೆ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿದ್ದೇನೆ ಅಂತ ತೋರಿಸಿದಳು.. 

ನನಗೆ ತುಂಬಾ ಫ್ರೆಂಡ್ಸ್ ಇದಾರೆ ಸಲ್ಮಾನ್.. ಆಪ್ತರು ಇದ್ದಾರೆ, ಸಾಮಾನ್ಯವಾಗಿ ಅವರ ಬಳಿ ಹೀಗೆಲ್ಲಾ ಆಡಿದ್ರೆ ನಾನು ಅಯ್ಯೋ ಸುಮ್ಮನೆ ಇರು  , ಅಯ್ಯೋ ಗೊತ್ತು ಬಿಡಪ್ಪ ಅಂತ ಹೇಳ್ತಾ ಇರ್ತೀನಿ.. ಸಲ್ಮಾನ್ ನೀವೇನಾದರೂ ನನ್ನ ಫ್ರೆಂಡ್ ಆಗಿದ್ದಿದ್ದರೆ  ಸಲ್ಮಾನ್  ನೀನು ನಿನ್ನ  ಕಥೆ !! ಇದಕ್ಕೇನು ಕಡಿಮೆ ಇಲ್ಲ  ಬಿಡು ಅಂತ ಬೈದೆ ಇರ್ತಾ ಇದ್ದೆ..  so you missed it ! ನಾನು ಒಳ್ಳೆ ಫ್ರೆಂಡ್ ಗೊತ್ತ.ನನ್ನ ಸ್ನೇಹ ಯಾರು ಯಾವ ರೀತಿ  ಸ್ವೀಕರಿಸುತ್ತಾರೋ ಆ ರೀತಿ ನಾ ಇರ್ತೀನಿ.. ಜಾಸ್ತಿ ಉಬ್ಬಿಸಲ್ಲ  ಸೆಲಬಿಗಳನ್ನೂ ಅಂದ್ರೆ ಫ್ರೆಂಡ್ ಆಗಿರೋರ ಜೊತೆ ಸಹ ಸರಳ ಹಾಗೂ ಸಾಧಾರಣವಾಗಿರ್ತೀನಿ. ಆ ಕಾರಣದಿಂದ ನಾನು ತುಂಬಾ ಕಂಫರ್ಟಬಲ್ . 
 ಈಬಾರಿ ಬಿಗ್ ಬಾಸ್ನಲ್ಲಿ ಅಬ್ಬ ಎಂತಹ ಪ್ರಾಡಕ್ಟ್ ಗಳು...! ಅವರು ಮಾತನಾಡುವ ರೀತಿ ಉಫ್  ಉದಾಹರಣೆಗೆ ಸೋನಾಲಿ ಅನ್ನೊ ಹೆಣ್ಣುಮಗಳ ಹೆಸರು ಕರೆಯೋದು ಭಿನ್ನವೇ ಸ್ಸುನ್ನಾಲ್ಲಿ !  ಅವರ ವೇಷಭೂಷಣ.. ಉಫ್ ...!ಅವರ ಮುಂದೆ ಸಲ್ಮಾನ್ ಸಕತ್ ಖಾಲಿ.. ;-)  ಅದಲ್ಲದೆ ಅವರಂತೆ ಹೆಸರನ್ನು ವಿಶೇಷವಾಗಿ ಕರೆಯಲ್ಲ. ನೀಟಾಗಿ ನಮ್ಮಂತೆ ಕರೀತಾರೆ.. ಅಂದಂಗೆ  ನಿನ್ನೆ ಬ್ಲಾಕ್  ಟೀ ಶರ್ಟ್ ನಲ್ಲಿ ಇರುವ ಸಲ್ಮಾನ್ very pretty cool..! ಟೀ ಶರ್ಟ್ ಅಥವಾ ಶರ್ಟ್ ಅಂತೂ ಏನಾದರೊಂದು ಹಾಕಿಕೊಂಡು ಬನ್ನಿ. ನೀವು ಆಮೀರ್ ಪಿಕೆ ಸಿನಿಮಾದಲ್ಲಿ ರೈಲ್ವೆ ಟ್ರಾಕ್ ಮೇಲೆ ನಿಂತಿರುವಾಗ ಹಾಕಿದ್ದಂತಹ  ಡ್ರಸ್ ಹಾಕಿ ಬಿಡಬೇಡಿ ;-)

@@ ಅತ್ಯಂತ ಸುಂದರ ಕಾರ್ಯಕ್ರಮ ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗುವ ಸತ್ಯಮೇವ ಜಯತೆ. ಆದರೆ ಆಮೀರ್ ನ್ನು ನೋಡಿದಾಗ ಪೀಕೆ ಸಿನಿಮಾದ ಮೋಶನ್ ಪೋಸ್ಟರ್ ನೆನಪಿಗೆ ಬಂದು ಬಿಡುತ್ತೆ.. ;-) ಆಮೀರ್ ಏನ್ ಮಾಡಿದ್ರು ಭಿನ್ನ ನಿಜ ಆದರೆ ಇಷ್ಟೆಲ್ಲಾ ಭಿನ್ನಾ ನಾ ಆ...? ಯಪ್ಪಾ ! ಯಪ್ಪಾ