ಒಳ್ಳೆ ಯದು..




ನನಗೆ ತುಂಬಾ ವಿಸ್ಮಯ ಅನ್ನಿಸೋದು ಅಡುಗೆ ವಿಷಯದ  ರಿಯಾಲಿಟಿ ಷೋ ಅಡುಗೆ  ಮಾಡುವ, ಕಾರ್ಯಕ್ರಮ ನೋಡುವ ವಿಷಯ ಅಂದ್ರೆ ಮೂಗು ಮುರಿಯುವ ಮಂದಿ ಅನೇಕ. ಅಂತಹುದರಲ್ಲಿ ಅದಕ್ಕಾಗಿ ಅಷ್ಟೆಲ್ಲ  ಖರ್ಚು ಮಾಡೋದು ಅಂದ್ರೆ . ಸ್ಟಾರ್ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಮಾಸ್ಟರ್  ಶೆಫ್ . ಅನೇಕಾನೇಕ ಎಲೆಮರೆ ಕಾಯಿ, ಬಡತನದಿಂದ ಮೇಲೆ ಬರಲಾಗದೆ ನರಳುವ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ . ದೇಶದ ಯಾವುದೋ ಮೂಲೆಯಲ್ಲಿ ಒಂದು ಪುಟ್ಟ ಹೋಟೆಲ್ ನಲ್ಲಿ ಅಡುಗೆ ಮಾಡುತ್ತಿರುವ ಪ್ರತಿಭೆ ಇಲ್ಲಿ ಅವಕಾಶ.ಜೋ ಜೀತ ವಹಿ ಸಿಕಂದರ್ . 






ಸಂಜೀವ್ ಕಪೂರ್ , ವಿಕಾಸ್ ಖನ್ನ, ಕುನಾಲ್ ಕಪೂರ್ ಇವರು ತೀರ್ಪುಗಾರರು. ಅಡುಗೆ ಮನೆ ಬದುಕಲ್ಲಿ ಅಷ್ಟೈಶ್ವರ್ಯ  ಮತ್ತು ಕೀರ್ತಿ ತಂದು ಕೊಡ ಬಲ್ಲದು. ಇವರುಗಳು ಆಸಕ್ತಿ ಇದ್ರೆ ವಿಶ್ವದಲ್ಲಿ ನೀವು ನಂಬರ್ ಒನ್ ಆಗ ಬಹುದು ಎಂದು ತೋರಿಸಿ ಕೊಟ್ಟವರು . ಚೆಫ್ ಸಂಜೀವ್ ಕಪೂರ್ ಒಂದು ರೀತಿ ನಮಗೆಲ್ಲ ಗುರು . ಅಂದ್ರೆ ಅವರ ಬಳಿ ನಾವೆಲ್ಲಾ ಏಕಲವ್ಯನಂತೆ ಅಡುಗೆ ಪಾಠ ಕಲಿತಿರೋದು. ಜೀ ವಾಹಿನಿಯಲ್ಲಿ ಖಾನ ಕಜಾನ ಪ್ರಸಾರ ಆಗುತ್ತಿದ್ದ ಸಮಯ ದಿಂದ ಹಿಡಿದು ಈ ವರೆಗೂ ಅವರು ಅಂದ್ರೆ ಅಡುಗೆ ಕಲಿಕೆ ಆಸಕ್ತಿ ಇರುವವರಿಗೆ ಗೌರವ, ಪ್ರೇಮ ಆದರ, ಆಪ್ಯಾಯ.   
ಯಾರು ಗೆಲ್ಲುತ್ತಾರೆ ಅನ್ನುವುದಕ್ಕಿಂತ ಅದರಲ್ಲಿ ನಾವು ತಿಳಿಯುವ ಅನೇಕ ಸಂಗತಿಗಳಿವೆ.. ಸೊ ಇದೊ೦ದು ಒಳ್ಳೆಯ ಪಾಠ ಶಾಲೆ ನಮಗೆ. 
ನಮ್ಮ ದೇಶದಲ್ಲಿ ತುತ್ತು ಅನ್ನಕ್ಕಾಗಿ ಒದ್ದಾಡುತ್ತಿರುವವರು ಹೇರಳ ಸಂಖ್ಯೆಯಲ್ಲಿದ್ದಾರೆ. ಮಾಸ್ಟರ್  ಶೆಫ್ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಆಹಾರ ಕಲಿಕೆ ಸಮಯದಲ್ಲಿ ಪೋಲಾಗುತ್ತೆ . ಬಡ-ನಿರ್ಗತಿಕರಿಗೆ ಆಹಾರ ನೀಡುವ ಕೆಲಸ ಮಾಡಿದರೆ ಅಡುಗೆ ಅನ್ನುವ ಮಹತ್ತರವಾದ ಕೆಲಸಕ್ಕೆ ಸಾರ್ಥಕತೆ ಸಿಗುತ್ತೆ. ಕೆಟ್ಟದಾಗಿ ಅಡುಗೆ ಮಾಡಿರುವವರಿಗೆ ಅದೇ ಆಹಾರವನ್ನು ಸರಿಪಡಿಸುವ ಶಿಕ್ಷೆ ನೀಡಿ.ಯಾಕೇಂದ್ರೆ  ಅಡುಗೆಲ್ಲಿ ತಪ್ಪಾದ್ರೆ ಅದನ್ನು ಸರಿಮಾಡುವ ಕಲೆ ಗೊತ್ತೇ ಇರುತ್ತೆ .  ಅದನ್ನು ಹಸಿದವರಿಗೆ ಕೊಡುವ ಕೆಲಸ ಮಾಡಿದರೆ ಎಷ್ಟು ಒಳ್ಳೆ ಯದು.. ನಿಮ್ಮಿಂದ ಅದು ಸಾಧ್ಯವೇ  ಸಂಜೀವ್ ಗುರುಜಿ? 

ಆ ಅಹಂಕಾರ!



ಜನಶ್ರೀ ವಾಹಿನಿಯಲ್ಲಿ ಕಥೆಗಾರ ಅನ್ನುವ ಧಾರವಾಹಿ ಪ್ರಸಾರ  ಆಗ್ತಾ ಇದೆ ಬಹಳ ದಿನಗಳಿಂದ . ಕನ್ನಡ ವಾಹಿನಿಗಳಲ್ಲಿ ಕಾಣ ಸಿಗುವ ಸದಭಿರುಚಿಯ ಸುಂದರ ಕಾರ್ಯಕ್ರಮಗಳನ್ನು ನೀಡುವ ವಿಷಯದಲ್ಲಿ ಜನಶ್ರಿ ಒಂದು ಕೈ ಮುಂದೆ . ಮನೆಯವರೆಲ್ಲಒಟ್ಟಿಗೆ ನೋಡುವಂತಹ ಕಾರ್ಯಕ್ರಮಗಳನ್ನು ಇದು ಪ್ರಸಾರ ಮಾದೊದು. ಸ್ವಲ್ಪ ಜಾಸ್ತಿನೆ ಇಷ್ಟ ಪಟ್ಟು ನೋಡ್ತೀನಿ ಈ ವಾಹಿನಿ. ಕಥೆಗಾರ ಸಣ್ಣ ಕಥೆಗಳನ್ನು ದೃಶ್ಯೀಕರಿಸಿ  ವೀಕ್ಷಕರ ಮನಸ್ಸು ತಣಿಸುವಂತೆ ಮಾಡಿರುವ ಸುಂದರ ಪ್ರಯತ್ನ. 
 ನಿನ್ನೆ ಬೀಚಿ ಅವರ ತಿ೦ಮ್ಮ  ಪ್ರಸಾರ ಆಯ್ತು. ಬೀಚಿ ಬರಹದಷ್ಟು ಖುಷಿ ಕೊಡಲಿಲ್ಲ ಅದು, ಆದರೂ ಬೋರ್ ಹೊಡಿಸಲಿಲ್ಲ. 




ದೊಡ್ಡ ದೊಡ್ಡ ಕಲಾವಿದರೂ, ಅದೂ ಸಿಕ್ಕಾಪಟ್ಟೆ ಕೊಡಗೈ ದಾನಿಗಳು ಅನ್ನಿಸಿಕೊಂಡವರು ಸರ್ಕಾರ ನೀಡುವ ಜಾಮೀನಿಗಾಗಿ ಬಡಿದಾಡುತ್ತಾರೆ. ಆದರೆ ನಿಜಕ್ಕೂ ಸಿಗ ಬೇಕಾದವರಿಗೆ ಮಾತ್ರ ಸಿಗೋದೆ ಇಲ್ಲ .. ಹಳ್ಳದ ಕಡೆಗೆ ನೀರು ಹರಿಯೋದು ಅನ್ನುವಂತೆ . ಉದಯ ನ್ಯೂಸ್ ನಲ್ಲಿ ಹಿರಿಯ ಕಲಾವಿದರು ರಸ್ತೆ ಬದಿಯಲ್ಲಿ ಬದುಕ್ತಾ ಇರೋ ನ್ಯೂಸ್ ಪ್ರಸಾರ ಅಯ್ತು. ಬಿ.ಸರೊಜಾ ದೇವಿ ಇವರ ಸಿನಿಮಾದಲ್ಲಿ ಮೊದಲು ನಟಿಸಿದ್ದಂತೆ , ಹೀಗೆ ಅನೇಕ ಸಂಗತಿಗಳು ದಿನಪತ್ರಿಕೆಯಲ್ಲಿ ಪ್ರಕಟ ಆಗಿತ್ತು . ಆ ಸುದ್ದಿ ಓದಿದಾಗ ಕಸಿವಿಸಿ ಆಗಿತ್ತು, ಆದರೆ ದೃಶ್ಯ ಮೂಲಕ ಕಂಡಾಗ ಮತ್ತಷ್ಟು ಬೇಸರ ಆಯ್ತು. ಹಿರಿಯ ಕಲಾವಿದರೂ ಸಣ್ಣ-ಪುಟ್ಟ ಸೌಲಭ್ಯವಿಲ್ಲದೆ  ಬದುಕಿನ ಕೊನೆದಿನಗಳನ್ನು ಕಳೆಯುವ ಸಂಗತಿ ವೀಕ್ಷಿಸುವಾಗ ಮನಸ್ಸು ಕಹಿಕಹಿ ಆಗುತ್ತೆ..! 





ಒಮ್ಮೆ ಹೀಗೆ  ಹಿಂದಿ ವಾಹಿನಿಯಲ್ಲಿ ಪ್ರಸಾರ  ಆಗುವ ಬಿಗ್ ಬಾಸ್ ಬಗ್ಗೆ ಬರೆದಿದ್ದೆ. ಆಗ ನನ್ನ ಬ್ಲಾಗ್ ತಪ್ಪದೆ ಓದುವವರೊಬ್ಬರು ಛೆ ನಮ್ಮ ಕನ್ನಡದಲ್ಲಿ ಇಂತಹ ಕಾರ್ಯಕ್ರಮ ಪ್ರಸಾರ ಆಗ್ಬಾರದಿತ್ತೆ ಅಂತ ಹೇಳಿದ್ರು. ಅವರ ಆಸೆ ಈಗ ನೆರವೆರಿದೆ. ಇದರಲ್ಲಿ ಏನು ಇಲ್ಲ ಆದರೆ ಎಲ್ಲರನ್ನು ಆಕರ್ಷಿಸುವ ಕಾರ್ಯಕ್ರಮ ಈ ಬಿಗ್ ಬಾಸ್ . ಸುದೀಪ್ ನಿರೂಪಣೆ ಖುಷಿ ಕೊಡ್ತು . 
ಅನೇಕಾನೇಕರು ಸುದೀಪ್ ಅವರ ನಟನೆ , ಒಟ್ಟಾರೆ ಸುದೀಪ್ ಅವರನ್ನು ಕಂಡ್ರೆ ಸಕತ್ ಲೈಕ್ . ನಾನು ಆ ಲಿಸ್ಟ್ ನಲ್ಲಿ ಇದ್ದೀನಿ . ಆದರೆ ಸಾಧಕರು ಅನ್ನುವ ಲಿಸ್ಟ್ ನಲ್ಲಿ ಇರುವವರು ಎಲ್ರು ಸಾಧಕರ? ಅಯ್ಯೋ ಅನ್ನುವಂತಾಯಿತು ಅವರೆಲ್ಲರನ್ನು ಕಂಡು :-)
ಆದರೆ ಹೆಚ್ಚು ಬೇಸರ ಅನ್ನಿಸಿದ್ದು ಅನುಶ್ರಿ ಮತ್ತು ಕಿಸ್ಸಿಂಗ್ ಲೇಡಿ ಮಾತುಕತೆ. ಹಿರಿಯ ಕಲಾವಿದೆ , ಕರ್ನಾಟಕದ  ರತ್ನ, ಮಿನುಗುತಾರೆ ಕಲ್ಪನಾ ಬಗ್ಗೆ ಲೇವಡಿ ಮಾಡಿದ್ದು ಮಾತ್ರ ಅಕ್ಷಮ್ಯ. ಆಕೆ ಮುಂದೆ ಏನೇನೇನು ಅಲ್ಲದ ಈ  ಇಬ್ಬರ ಮಾತು.. ಆ ಅಹಂಕಾರದ ನಡುವಳಿಕೆ .. !!
ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಬ್ರಹ್ಮಾಂಡ ಸ್ವಾಮಿಽವರ ಮಾತುಗಳು ಮಜಾ ಕೊಡ್ತಾ ಇದೆ. 
ಈ ರಿಯಾಲಿಟಿ ಷೋ ಈ ಟೀವಿ ಕನ್ನಡದ ಮೇಲೆ  ಯಾವ ರೀತಿ ಪ್ರಭಾವ ಬೀರುತ್ತೆ ಅನ್ನುವ ಸಂಗತಿ ಕಾದು ನೋಡಬೇಕು .   

comments :



Dear Umesh Desai : ಕಿಸ್ಸಿಂಗ್  ಲೇಡಿ ನರ್ಸ್  ಜಯಲಕ್ಷ್ಮಿ ಯಂಗ್ ಗರ್ಲ್ ಅಲ್ಲ ಆಕೆ ಈ ರೀತಿ ಹೇಳಿದ್ದು ತಪ್ಪು ಕಲ್ಪನಾ ಬಗ್ಗೆ.  ಇನ್ನು ಅನುಶ್ರೀ ಯಾವ ರೀತಿಯಿಂದಲೂ ಇನ್ನು ಬೆಳೆದಿಲ್ಲ. ಆಕೆ ಸಣ್ಣ ಆಂಕರ್ ಆದರೆ ಆಕೆ ನಿರೂಪಣೆ ಅದೆಷ್ಟು ಕೆಟ್ಟದಾಗಿರುತ್ತೆ ಅಂದ್ರೆ .. ಮುಖ್ಯವಾಗಿ ಅತಿಯಾಗಿ ಕಿರಿಚುತ್ತಾ ಮಾತಾಡೋ ರೀತಿ ಕಿರಿಕಿರಿ ಆಗುತ್ತೆ ವಿನಃ ಖುಷಿ ಕೊಟ್ಟಿಲ್ಲ ಎಂದಿಗೂ . ಮಿನುಗುತಾರೆ ಕಲ್ಪನಾ ಡ್ರಸ್  ಸೆನ್ಸ್ ಆಕೆ ಬಳಸುತ್ತಿದ್ದ- ಧರಿಸುತ್ತಿದ್ದ ಒಡವೆ, ಸೀರೆ, ಆ ವಿನ್ಯಾಸ ಇಂದಿಗೂ ಜನಪ್ರಿಯತೆ ಕಳೆದು ಕೊಂಡಿಲ್ಲ . ಮೇಲೋ ಡ್ರಾಮದ ಹಿಂದೆ ಆಕೆಯ ಬದುಕಿನ ದುರಂತ ಅಡಗಿತ್ತು ಅಂತ ನಾನು ನಿಮಗೆ ಹೇಳುವ ಅಗತ್ಯವಿಲ್ಲ ಯಾಕೆಂದ್ರೆ ನಿಮಗೆ ಅದು ಗೊತ್ತೇ ಇದೆ. 

ಡ್ರಾಮೆಬಾಜ್


ಜೀ ಟೀವಿಯಲ್ಲಿ ಡ್ರಾಮೆಬಾಜ್  ರಿಯಾಲಿಟಿ ಷೋ ಕಳೆದ ಕೆಲವು ವಾರಗಳಿಂದ ಪ್ರಸಾರ ಆಗುತ್ತಿದೆ. ಮುಖ್ಯವಾಗಿ ನಾನು ಆ ಕಾರ್ಯಕ್ರಮದ ಆಡಿಶನ್ನಿಂದ ಕಾಡು ವೀಕ್ಷಿಸಿದೆ. ಬೊಂಬಾಟ್ .. ! ಪ್ರಸಿದ್ಧ ನಿರ್ದೇಶಕ ಅನುರಾಗ್ ಬಸು ಅವರ ಕಸೌಟಿ  ಜಿಂದಗಿ ಕಿ ಭಯಂಕರ ಇಷ್ಟ ಆದ ಧಾರಾವಾಹಿ ನನಗೆ ಮಾತ್ರವಲ್ಲ ಭಾರತ ಹೆಣ್ಣುಮಕ್ಕಳ ಹೃದಯ ಗೆದ್ದ ಧಾರವಾಹಿ . ಬಿಡಿ ಹಳೆ ಕಥೆ ಈಗ್ಯಾಕೆ ;-).ಈಗ  ಬರ್ಫಿ ಹಂಚಿ ಜನಮನ  ಗೆದ್ದಿದ್ದಾರೆ. 
ಮುಖ್ಯವಾಗಿ ಈ ಬರ್ಫಿ ನಿರ್ದೇಶಕ ಡ್ರಾಮೆ ಬಾಜ್ನಲ್ಲಿ ಮತ್ತೊಮ್ಮೆ ಮಗುವಾಗಿದ್ದಾರೆ.  ಯಾಕೆಂದ್ರೆ ಅಷ್ಟೊಂದು ಅದ್ಭುತ ಪ್ರತಿಭೆಗಳು ಅಲ್ಲಿವೆ. ಪುಟ್ಟ ಪುಟ್ಟ ಕೂಸುಗಳ   ಜೊತೆ ಮಗುವಾಗುವ ಅನುರಾಗ್ ಕೆಲವು ವಿಷಯಗಳು ಬಂದಾಗ ಎಮೋಷನಲ್  ಆಗ್ತಾ ಇರ್ತಾರೆ. ಆದರೆ ನಿನ್ನೆ ಪ್ರಸಾರವಾದ ಷೋನಲ್ಲಿ ಅನುರಾಗ್ ತುಂಬಾ ಭಾವೋದ್ವೇಗಕ್ಕೆ ಒಳಗಾದರು . ಅದು ಸಹಜ ಬಿಡಿ .  ಕ್ಯಾನ್ಸರ್ ಪೀಡಿತರ ವಿಷಯ. ತುಂಬಾ ಹೃದಯ ಸ್ಪರ್ಶಿ ವಿಷಯ.ಈ ಕಾಯಿಲೆಯಿಂದ ಬಳಲುತ್ತಿರುವವರು, ಅವರ ಮನೆಯವರು ಎಲ್ಲರಿಗೂ ಒಂದು ದೊಡ್ಡ ಸವಾಲಿದು. 
ನಮ್ಮ ಮೇಡಂ ಅವರು ಈ ಕಾಯಿಲೆಯಿಂದ ಬಳಲುವಾಗ , ಅವರಿಗೆ ಅಪರೇಷನ್ ಆದಾಗ ನಂತರ ಅವರು ಮತ್ತೆ ಕೆಲ್ಸಕ್ಕೆ ಬಂದ  ಬಳಿಕ ಅವ್ರು  ಅನುಭವಿಸಿದ ಕಿರಿಕಿರಿ ,ಆತಂಕ ಎಂದಿಗೂ ಮರೆಯಲಾಗದ್ದು . 
 ಈ ರಿಯಾಲಿಟಿ ಷೋ ಸ್ಟ್ರಿಕ್ಟ್ ಜಡ್ಜ್ ಸೊನಾಲಿ  ಬೇಂದ್ರೆ ಮತ್ತು ನಮ್ಮೂರ ಅಳಿಯ ( ಕರ್ನಾಟಕದ) ವಿವೇಕ್ ಒಬೆರಾಯ್ ಅದೆಷ್ಟು ಕೈಂಡ್  ಹಾರ್ಟೆಡ್  ಅಂದ್ರೆ ಮಕ್ಕಳಿಗೆ ಕಡಿಮೆ ಅಂಕ ಕೊಡೋಕೆ ಹೊಗಲ್ಲ. ಕನ್ನಡ ಮಣ್ಣಿನ ಗುಣ ಅಂದ್ರೆ ಅದೇ ಕಣ್ರೀ . 
ಇದರಲ್ಲಿ ನಿರೂಪಕಿ ರಾಗಿಣಿ ಖನ್ನ ನಗು ನನಗೆ ಸಕತ್ ಲೈಕ್ . 



ಸ್ಟಾರ್ ವಾಹಿನಿಯಲ್ಲಿ ಇಷ್ಟು ದಿನ ಪ್ರಸಾರ ಆದ ,  ಈಗ ಅಂತಿಮ ಘ ಟ್ಟ ತಲುಪಿರುವ ರಿಯಾಲಿಟಿ ಷೋ ನಚ್ ಬಲಿಯೆ. ಶಿಲ್ಪ  ಶೆಟ್ಟಿ, ಸಾಜಿದ್ ಮತ್ತು ಟೆರ್ರೆನ್ಸ್ ಅವರ ಜಡ್ಜ್ಮೆಂಟಿನ ರಿಯಾಲಿಟಿ ಷೋ ಸಹ ಹೆಚ್ಚು ಖುಷಿ ಕೊಟ್ಟಿತ್ತು . ಕಳೆದ ಕೆಲವು ತಿಂಗಳಿಂದ ಸಕತ್ ಬ್ಯುಸಿ. ನೋಡುವ ,ಖುಷಿ ಪಡುವುದಷ್ಟೇ  ಮಾಡಿದ್ದು. ಬರೆಯೋಕೆ ಸಮಯ 

sudeep.. bigg bosssss

ಪ್ರತಿದಿನ ಮುಂಜಾನೆ  ಪ್ರತಿಯೊಂದು ವಾಹಿನಿಗಳು ವೀಕ್ಷಕರ ದಿನ ಚೆನ್ನಾಗಿ ಆರಂಭ ಆಗಲಿ ಎಂದು ಒಳ್ಳೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ . ಕೆಲವು ಮನಕ್ಕೆ ಆಪ್ತ ಅನ್ನಿಸಿದರೆ, ಒಂದಷ್ಟು ಸಾಕಪ್ಪ ಅನ್ನಿಸುವಂತೆ ಇರುತ್ತದೆ. ಜನಶ್ರೀ ವಾಹಿನಿಯಲ್ಲಿ ಬೆಳಗಿನ ಕಾರ್ಯಕ್ರಮದಲ್ಲಿ ತುಂಬಾ ಖುಷಿ ಕೊಟ್ಟಿದ್ದು ಸುಧಾಕರ ಶರ್ಮ ಅವರ ಜೀವನ ದರ್ಶನ . ಅಂದ್ರೆ ನಾವು ಕಲಿತ ವಿದ್ಯೆಯು ನಮ್ಮ ಬದುಕನ್ನು ಹೇಗೆ ಸಾಕಾರ ಮಾಡುತ್ತಿಲ್ಲ ಅನ್ನುವ ಸಂಗತಿಯನ್ನು ಮೆಕಾಲೆಯ ವಿದ್ಯಾ  ನೀತಿ ಎಲ್ಲದರ ಬಗ್ಗೆ ಅದ್ಭುತವಾಗಿ ಮಾಹಿತಿ ನೀಡಿ ದರು.ಅತ್ಯಂತ ಉಪಯುಕ್ತ ಮಾಹಿತಿ ನೀಡುವ, ಇತಿಹಾಸದ ಬಗ್ಗೆ ನಮಗಿರುವ ದೃಷ್ಟಿಕೋನವನ್ನು ಬದಲಾಯಿಸಿ, ವಿಷಯವನ್ನು ಭಿನ್ನ ರೀತಿಯಲ್ಲಿ ಯೋಚಿಸುವಂತೆ ಮಾಡುವಲ್ಲಿ ಸುಧಾಕರ ಶರ್ಮ ಅವರು ವಾವ್  ಅನ್ನಿಸುವಷ್ಟು ಅದ್ಭುತ . ಚಂದನ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ (ಈಗ ಪ್ರಸಾರ ಆಗ್ತಾ ಇದ್ಯಾ?)ಪ್ರತಿ ಭಾನುವಾರ ಇವರ ಕಾರ್ಯಕ್ರಮ  ಮನಸ್ಸಿಗೆ ಖುಷಿ  ಕೊಡ್ತಾ ಇತ್ತು. ಒಂದೇ ವಿಷಯವನ್ನು ಹೇಳಿ ಹೇಳಿ ತಲೆ ಕೆಡಿಸೋ ಮಂದಿ ಇರುವ ಈ ಕಾಲದಲ್ಲಿ ಸುಧಾರ ಶರ್ಮರಂತಹ ಭಿನ್ನ ಇತಿಹಾಸ ತಜ್ಞರು  ಇದ್ದಾರಲ್ಲ ಅದೇ ಹೆಮ್ಮೆ 
ಈಗ ಮತ್ತೆ ರಿಯಾಲಿಟಿ ಶೋಗಳ ಕಾಲ ನಮ್ಮ ಕನ್ನಡ ವಾಹಿನಿಗಳಲ್ಲಿ ಆರಂಭ ಆಯ್ತು. ಸುವರ್ಣ  ವಾಹಿನಿಯಲ್ಲಿ ಕನ್ನಡದ ಕೋಟ್ಯಧಿಪತಿ  ಕಾರ್ಯಕ್ರಮ ಮತ್ತೆ ಪ್ರಸಾರ ಆಗಿದೆ. ಧಾರಾವಾಹಿಗಳನ್ನು ಕಂಡು-ವೀಕ್ಷಿಸಿ ಸುಸ್ತಾದ ವೀಕ್ಷಕರಿಗೆ ಸ್ವಲ್ಪ ಬದಲಾವಣೆ ನೀಡುವ ಕಾರ್ಯಕ್ರಮ ಇದು.ಪುನೀತ್ ರಾಜ್ ಕುಮಾರ್ ಅವರಿಗೆ ಜನರೊಂದಿಗೆ ಬೆರೆಯುವ ಸದವಕಾಶ. ಉತ್ತಮ ಪ್ರೆಸೆ೦ಟರ್  ಆಗಿರುವ ಪುನೀತ್ಗೆ ಈ ಕಾರ್ಯಕ್ರಮ ಎಷ್ಟು ಇಷ್ಟಾನೋ ಅಷ್ಟೇ ಪ್ರೀತಿ ವೀಕ್ಷಕರಿಗೆ . ಆದರೆ  ಬೇರೆಯವರು ದುಡ್ಡು ತಗೊಂಡು ಹೋಗೋದನ್ನು ನಾವು ನೋಡ್ತಾ ಕೂರಬೇಕು ಅದೇ ದುಃಖದ ಸಂಗತಿ   



ಕನ್ನಡದಲ್ಲಿ ಬಿಗ್  ಬಾಸ್  ಆರಂಭ ಆಗ್ತಾ ಇದೆ. ಈ ಟೀವಿಯಲ್ಲಿ ಇದು ಪ್ರತಿದಿನ ಪ್ರಸಾರ ಆಗುತ್ತೆ. ಹಿಂದಿಯಲ್ಲಿ  ಈಗಾಗಲೇ ಆರು ಸೀಸನ್ ಕಂಡಿರುವ ಈ ರಿಯಾಲಿಟಿ ಷೋ ಕನ್ನಡಕ್ಕೆ ಬಂದಿದೆ . ಅಲ್ಲಿ ಸಾಧಕರದ್ದೆ ಕಾರುಬಾರು. ಅವರ ಜಗಳ ಗಲಾಟೆ ಅಳು, ಪ್ರೇಮ ಆಕ್ರೋಶ ನೋಡುವ ಸೌಭಾಗ್ಯ ಕನ್ನಡ ವೀಕ್ಷಕರಿಗೆ. ಮುಖ್ಯವಾಗಿ ಇದಕ್ಕೆ ಸುದೀಪ್  ಪ್ರೆಸೆ೦ಟರ್  ಅದೇ ಮುಖ್ಯ ಆಕರ್ಷಣೆ . ಕನ್ನಡ ಚಿತ್ರ ದರ್ಶಕರಲ್ಲಿ ಪುನೀತ್ , ಸುದೀಪ್,ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರ್ಯಕ್ರಮ ಅಭಿಮಾನಿಗಳಿಂದ ಗೆಲ್ಲುತ್ತೆ ಅನ್ನುವುದಕ್ಕಿಂತ  ಸುದೀಪು ಯಾವ್ ರೀತಿ ತಮ್ಮ ಶೈಲಿಯಿಂದ ಗೆಲ್ಲಿಸುತ್ತಾರೆ ಅನ್ನುವುದು ಮುಖ್ಯ. ಯಾಕೆಂದ್ರೆ ಒಬ್ಬ ನಿರೂಪಕ ಕೆಲವು ಮಂದಿಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳ ಬಾರದು. ಕಿಚ್ಚ  ನಾವೆಲ್ಲಾ ವೀಕ್ಷಿಸ್ತೀವಿ ಜ್ಞಾಪಕ ಇರ್ಲಿ 

ಕಿಲಕಿಲ

ನೀವು ಕೇಳಿದ್ದು ನಾವು ಹೇಳಿದ್ದು ಒಂದೊಳ್ಳೆಯ ವಿಡಂಬನೆಯ ಕಾರ್ಯಕ್ರಮ. ಪ್ರಸಾರ ಆಗೋದು ಟೀವಿ ನೈನ್  ವಾಹಿನಿಯಲ್ಲಿ ಮಾತ್ರ. ಬೇರೆ ವಾಹಿನಿಗಳು ಬೇರೆ ಹೆಸರು ಕೊಟ್ಟು ಇಂತಹುದ್ದೆ  ಕಾರ್ಯಕ್ರಮ ಪ್ರಸಾರ ಮಾಡಿದರೂ , ಇದರ ಶೈಲಿ ಹೆಚ್ಚು ಖುಷಿ ಕೊಡುತ್ತದೆ. 
ಮಾತಿನ ನಡುವೆ ಅವ್  ನೋ  ಅನ್ನುವ ಧ್ವನಿ ಉಲ್ಲಾಸ ನೀಡುತ್ತ ದೆ. ಸದಾ ರಾಜಕೀಯ ಜನರ ಬಗ್ಗೆ ಆಡಿಕೊಂಡು-ಪಾಡಿಕೊಂಡು ಇರುವ ವಾಹಿನಿಗಳು ಸಿನಿಮಾದವರ ಬಗ್ಗೆ ಹೆಚ್ಚು ಇಂತಹ ವಿಡಂಬನೆ ಮಾಡೋಕೆ ಹೋಗಲ್ಲ .ಸಿನಿಮಾದವರು ರಾಜಕೀಯದತ್ತ ಹೊರಟರೆ ಅವ್ .. ಬಿಡೋದೇ ಇಲ್ಲ. ಪೂಜಾ ಗಾಂಧೀ ಅನ್ನುವ ಸಂಜನಾ ಗಾಂಧೀ  ಅಕ್ಕೋರು ನದಿ ದಡ  ನದಿ ದಡ  ನದಿ ದಡ ಅಮ್ತ ಒಂದು ಪಾರ್ಟಿ ಬಿಟ್ಟು ಮತ್ತೊಂದಕ್ಕೆ, ಮತ್ತೊಂದು ಬಿಟ್ಟು ಮಗದೊಂದಕ್ಕೆ ಜಂಪಿಂಗ್ ಜಂಪಿಂಗ್ ಮಾಡಿದ ಕಥನ ನೀವು ಕೇಳಿದ್ದು ಕಾರ್ಯಕ್ರಮದಲ್ಲಿ ಪ್ರಸಾರ ಆಯ್ತು .. ಸಧ್ಯಕ್ಕೆ ಅವರ ಬಿಟ್ ಇವರ ಬಿಟ್ಟು, ಇನ್ನೊಬ್ಬರ ಬಿಟ್ಟು ... ಯಾರು ಯಾರು ಅಂತ ನಾವೆಲ್ಲಾ ಅಂದ್ರೆ ಕಾಮನ್ ಜನರು ವೈಟಿಂಗ್  ವೈಟಿಂಗ್ ... ನೋಡುಮ ಪೂಜಾ ಅಂಬೋ ಸಂಜನಾ ಗಾಂಧೀ ನೆಕ್ಟ್ ಪಾರ್ಟಿ ಪ್ಲಾನಿಂಗ್..
ಈ ಕಾರ್ಯಕ್ರಮದ ಸ್ಕ್ರಿಪ್ಟ್ , ಹಿನ್ನೆಲೆ ಧ್ವನಿ ಎಲ್ಲವೂ ಅವ್.. ಅವ್  :-)

ಸುವರ್ಣ ನ್ಯೂಸ್ ನಲ್ಲಿ  ಪ್ರಸಾರ  ಆಗುವ ಬೆಳಗಿನ ಕಾರ್ಯಕ್ರಮ .. ಅಂದ್ರೆ ಪ್ಯಾಕೇಜ್ ಚೆನ್ನಾಗಿದೆ. ಇಲ್ಲಿ ಏನೇನು ಇಲ್ಲ..! ಎಲ್ಲವೂ ಇದೆ..! ಅಡುಗೆ ,ನ್ಯಾಯ-ಕಾನೂನು ,ಹಣ-ಪಾಲಿಸಿ ..  ಆರೋಗ್ಯ, ... ನಿಜ ಹೇಳ ಬೇಕೂಂದ್ರೆ ಕೇವಲ ಒಂದು ನಿಮಿಷದಲ್ಲಿ ಲಾಯರ್ ಸಾಹೇಬರು ಕಾನೂನನ್ನು ಬಿಚ್ಚಿಟ್ಟರೆ, ಪತ್ರಕರ್ತ ರು ಹಣ ಮಾಡೋದು, ಪಾಲಿಸಿ ಪ್ರಯೋಜನ ಅದಕ್ಕೆ ಪೂರಕ ಸಂಗತಿ ತಿಳಿಸಿ ಬಿಡ್ತಾ ರೆ. ವೆರಿ ಇಂಟರೆಸ್ಟಿಂಗ್ . 
ಲಾಯರ್ -ಜರ್ನಲಿಸ್ಟ್ ಇಬ್ರು ಒಂದು ಗಳಿಗೆಯಲ್ಲಿ ಪ್ರಪಂಚ ಕಟ್ಟಬಲ್ಲರು,ಅರ್ಧ ಗಳಿಗೆಯಲ್ಲಿ  ...... :-)! 
ಒಟ್ಟಾರೆ ಎಲ್ಲ ಸಂಗತಿಗಳು ಬೆಳಗಿನ ಪ್ಯಾಕೇಜ್ನಲ್ಲಿ ಖುಷಿ ಕೊಡು ವಂತಹದ್ದು . ಸುಂದರ ನಿರೂಪಕಿಯರ ಕಿಲಕಿಲ ನಗು ಸಹ ವೀಕ್ಷಕರಿಗೆ  ಮುಫಾತ್ತಾಗಿ ಸಿಗುತ್ತೆ ;-) 
ನೇರವಾಗಿ ಹೇಳುವುದಾದರೆ ಒಂದೊಳ್ಳೆಯ ಪ್ಯಾಕೆಜ್ ಹೆಣ್ಣುಮಕ್ಕಳಿಗೆ ..!