ಸುಬ್ರೀತ್ ಕೌರ್

Image result for yellow flowers
ಸುಬ್ರೀತ್ ಕೌರ್  ಅತ್ಯಂತ ಪ್ರತಿಭಾವಂತ ಸಾಹಸಿ ಹೆಣ್ಣು ಮಗಳು  ಆಕೆಯು  ಅದೆಷ್ಟರ ಮಟ್ಟಿಗೆ ಅಸಮಾನ್ಯ ಪ್ರತಿಭೆ ಎನ್ನುವುದನ್ನು ನೀವು ನೋಡ ಬೇಕಾದರೆ ಕಲರ್ ವಾಹಿನಿಯಲ್ಲಿ ಪ್ರಸಾರ ಆಗುವ ಝಲಕ್  ದಿಕ್ಲಾಜ  ಎನ್ನುವ ಡ್ಯಾನ್ಸ್ ಕಾರ್ಯಕ್ರಮ ನೋಡಲೇ ಬೇಕು. ಯಾವ ಕಾರಣಕ್ಕೆ ಈಕೆಯ ಬಗ್ಗೆ ಇಷ್ಟೊಂದು ಹೇಳ್ತಾ ಇದ್ದೀನಿ ಅಂದರೆ ಆಕೆಯು ಒಂದು ಕಾಲು ಕಳೆದು ಕೊಂಡಿದ್ದರು ನಿಲ್ಲ ಅದಮ್ಯ ಆಸಕ್ತಿ, ಹಾಗೂ ಪ್ರಯತ್ನದಿಂದ ಈ ಪ್ರತಿಷ್ಟಿತ ಕಾರ್ಯಕ್ರಮದ  ಭಾಗವಾಗಿದ್ದಾರೆ  . 
ಇದೆ ವಾಹಿನಿಯ ವಿಶಿಷ್ಟ ಕಾರ್ಯಕ್ರಮ ಇಂಡಿಯ ಗಾಟ್  ಟ್ಯಾಲೆಂಟ್  ನಲ್ಲಿ  ಇತ್ತೀಚಿನಕ್ಕಿಂತ ಮೊದಲು ಪ್ರಸಾರ ಆದ  ಇಂಡಿಯ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ಭಾಗವಾಗಿದ್ದರು ಈಕೆ. ಈಗ ಝಲಕ್ ನಲ್ಲಿ ನರ್ತಿಸುತ್ತಿದ್ದಾರೆ. ಶನಿವಾರ- ಭಾನುವಾರ ರಾತ್ರಿ ಪ್ರಸಾರ ಆಗುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಸುಬ್ರೀತ್ ಬಗ್ಗೆ ಹೆಚ್ಚು ಆಕರ್ಷಣೆ ಈ ಕಾರ್ಯಕ್ರಮದ ಮತ್ತೊಂದಷ್ಟು ಆಕರ್ಷಣೆ  ಕರಣ್ ಜೋಹರ್  ಎನ್ನುವ ಚಕ್ರವರ್ತಿ, ಶಾಹಿದ್ ಕಪೂರ್ ಎನ್ನುವ ಯುವರಾಜ ಮತ್ತು ಮನೀಶ್ ಪಾಲ್ ಹಾಸ್ಯ. ಮಾಧುರಿ ಮತ್ತು ರೆಮೋ ರಹಿತ ಝಲಕ್ ಬಗ್ಗೆ  ಹೇಳುವುದಾದದರೆ ಈ ಸಂಗತಿಗಳು ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ . 
Image result for yellow flowers

ಈ ಟೀವಿ ತೆಲುಗು ವಾಹಿನಿ ಪ್ರತಿದಿನ ತಪ್ಪದೆ ರಾತ್ರಿ ಒಂಬತ್ತೂವರೆ ಸಮಯದಲ್ಲಿ ಬೇರೆ ಬೇರೆ ರಿಯಾಲಿಟಿ ಶೋ ಪ್ರಸಾರಿಸುತ್ತದೆ. ಅದರಲ್ಲಿ ಜಬರ್ದಸ್ತ್ ಎನ್ನುವ ಹಾಸ್ಯ ಕಾರ್ಯಕ್ರಮವು ಒಂದು . ಇಂತಹದ್ದೇ ಕಾನ್ಸೆಪ್ಟ್ ಮೊದಲು ನಾನು ಕಸ್ತೂರಿ ಕನ್ನಡ ವಾಹಿನಿಯಲ್ಲಿ ವೀಕ್ಷಿಸಿದ್ದೆ ಬಹಳ ಹಿಂದೆ . ಅದಕ್ಕೆ ಸಿಹಿಕಹಿ ಚಂದ್ರು- ದಯಾನಂದ್ ಮುಖ್ಯ ಅತಿಥಿ ಆಗಿದ್ದರು. ಅದರಲ್ಲಿ ಪರಿಚಿತ ಕಲಾವಿದರೇ ಇದ್ದರು. ಆದರೆ ಜಬರ್ದಸ್ತ್ ನಲ್ಲಿ ಎಲ್ಲ ಹೊಸಬರು ನನ್ನ ಪ್ರಕಾರ. ಈ ಹಾಸ್ಯ ಕಾರ್ಯಕ್ರಮದಲ್ಲಿ  ನಾಗೇಂದ್ರ ಬಾಬು ಮತ್ತು ರೋಜ ಮುಖ್ಯ ತೀರ್ಪುಗಾರರು. ಕನ್ನಡ ಚಿತ್ರಗಳಲ್ಲಿ ವಿಲನ್ ಆಗಿದ್ದ  ನಾಗೇಂದ್ರ ಬಾಬು ಚಿರು ಅಣ್ಣ ಅಂತ ನಿಮಗೆ ಗೊತ್ತೇ ಇದೆ. ಅದೇರೀತಿ ಕನ್ನಡ ಚಿತ್ರಗಳಲ್ಲಿ  ಹೀರೋಯಿನ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಅಮ್ಮನಾಗಿ ನಟಿಸಿದ್ದ ಪ್ರತಿಭೆ. ನಿಮಗೆ ತೆಲುಗು ಗೊತ್ತಿದ್ದರೆ ಖಂಡಿತ ಆ ಕಾರ್ಯಕ್ರಮದ ಸವಿ ಸವಿಯ ಬಹುದು. 

No comments: