ಪ್ರೊಫೈಲ್ ಪಿಕ್

Image result for friendship day

ಸಮಸ್ತರಿಗೂ ವಿಶ್ವ ಸ್ನೇಹಿತರ ದಿನದ ಶುಭಕಾಮನೆಗಳು. ಎಲ್ಲರೂ ಹೇಳುವಂತೆ ಈ ದಿನ ಕೇವಲ ಒಂದು ದಿನಕ್ಕೆ ಸೀಮಿತವಲ್ಲ ಅನ್ನೋದು ಸತ್ಯವಾದ ಸಂಗತಿ. ಪ್ರತಿದಿನ ದೇವರನ್ನು ನೆನಪಿಸಿಕೊಂಡರೂ ಇಷ್ಟ ದೇವರ ಹೆಸರಲ್ಲಿ ಹಬ್ಬ ಮಾಡಲ್ವ . ಅದೇರೀತಿ ಇದೂ ಸಹ. ನನ್ನ ಬ್ಲಾಗ್ ಓದುಗರೆ.. ನೀವು ಯಾರೊ.. ನಾನು ಯಾರೋ .. ಬಲ್ಲವರು ಯಾರು. ಒಂದೇಒಂದು ದಿನವೂ ನಿಮ್ಮನ್ನು ಭೇಟಿ ಮಾಡಿಲ್ಲ, ಆದರೂ ನೀವು ನನ್ನ ಬ್ಲಾಗ್ ಓದುತ್ತೀರಿ, ಆ ಮೂಲಕ ಅಗೋಚರ ಸ್ನೇಹದಿಂದ ಬಂಧಿಸಿದ್ದೀರಿ . ಈ ಬ್ಲಾಗ್ ಓದುವವರಲ್ಲಿ ಅನೇಕಾನೇಕ ಸಾಧಕರು ಇದ್ದಾರೆ. ಅವರಿಗೆ ಅವರನ್ನು ಬರೆದ ಲೇಖನಗಳು, ಸಂಗತಿಗಳು, ಮಾಹಿತಿಗಳು ಗೊತ್ತಾಗ್ತಾ ಇಲ್ಲ ಹೇಗೆ ಹೇಳ ಬೇಕು ಅಂತ.  ಒಟ್ಟಾರೆ ಪ್ರತಿಯೊಬ್ಬರೂ ಇಷ್ಟಪಟ್ಟು ಓದುವುದು ಸತ್ಯ. ನಿಮ್ಮ ಸಾಧನೆಯ ಹಾದಿಯಲ್ಲಿ ಗೆಲುವು ಸದಾ ಬೆಂಗಾವಲಾಗಿರಲಿ ಅನ್ನುವ ಶುಭ ಹಾರೈಕೆ ನನ್ನದು.  ನನಗೆ  ಸೋಷಿಯಲ್  ಮೀಡಿಯಾಗಳು ಅನೇಕಾನೇಕ ಉತ್ತಮ ಸ್ನೇಹಿತರನ್ನು  ನೀಡಿದೆ.ಅವರಿಗೂ ಸ್ನೇಹಿತರ ದಿನಕ್ಕೆ ಶುಭ ಹಾರೈಸುತ್ತೇನೆ. ಆಗಸ್ಟ್ ಮೂರನೇ ಭಾನುವಾರ ಹೆಣ್ಣುಮಕ್ಕಳು ಮಾತ್ರ ಆಚರಿಸಿಕೊಳ್ಳುವ ಸ್ನೇಹದ ದಿನಾಚರಣೆ  :-) ನಮ್ಮಲ್ಲಿ ಇದು ಅಷ್ಟೊಂದು ಚಾಲ್ತಿಯಲ್ಲಿ ಇಲ್ಲ ಬಿಡಿ :-)
ನಿನ್ನೆ ಹಾಕಬೇಕಾದ ಪೋಸ್ಟ್ ಇದು .. ಇಡೀ ದಿನ ಮೂರು ಪುಸ್ತಕಗಳ ಬಿಡುಗಡೆಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಬಹಳ ತಿಂಗಳುಗಳ ಬಳಿಕ ಇಷ್ಟೊಂದು ಕಾರ್ಯಕ್ರಮಗಳಿಗೆ ಒಟ್ಟೊಟ್ಟಿಗೆ. ವಿದೇಶವಾಸಿ ಶಾಂತಲ ಬಂಡಿ, ದೀಪ ಗಿರೀಶ್ , ರಾಕೇಶ್ ಶೆಟ್ಟಿ ಅವರ ನಿಲುಮೆ ತಂಡದಿಂದ ಹೊರಬಂದ ಪುಸ್ತಕಗಳು.ಶಾಂತಲ ಹಾಗೂ ದೀಪ ಫೇಸ್ಬುಕ್ ಮೂಲಕ ಗೆಳತಿಯರಾದರೆ, ರಾಕಿ ನನ್ನ ಬ್ಲಾಗ್ ಫ್ರೆಂಡ್ . ಒಟ್ಟಾರೆ ಸ್ನೇಹಿತರ ದಿನದಂದು ಹೀಗೆ ಎಲ್ಲಾ ಸ್ನೇಹಿತ -ಸ್ನೇಹಿತೆಯರನ್ನು ಭೇಟಿ ಮಾಡಿದ್ದಾಯ್ತು :-)

Image result for red flowers
ಈಗಂತೂ ಯಾವ ಚಾನೆಲ್ ನೋಡಿದರೂ ಸಹಿತ ರಿಯಾಲಿಟಿ ಶೋಗಳ ಸುರಿಮಳೆ. ಕನ್ನಡ ಜೀ ಯಲ್ಲಿ ಹಾಡುಗಳ ರಿಯಾಲಿಟಿ ಷೋ ಅರ್ಜುನ್ ಜನ್ಯ, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಅವರ ಬಹು ಪ್ರತಿಷ್ಠಿತ  ಕಾರ್ಯಕ್ರಮ. ಕನ್ನಡದ ಎ ಆರ್ ರಹಮಾನ್  ಅರ್ಜುನ್  ಜನ್ಯಾ ಅವರು ಮೊಟ್ಟ ಮೊದಲಬಾರಿಗೆ ಕಿರುತೆರೆಗೆ ಬಂದಿದ್ದಾರೆ .  ಅರ್ಜುನ್ ಅಶ್ವಥ್ ಕುಮಾರ್  ಹೆಸರಲ್ಲಿ  ಫೇಸ್ಬುಕ್  ಗೆಳೆಯರಾಗಿದ್ದಾರೆ ಅರ್ಜುನ್. ಆರಂಭದಲ್ಲಿ ಇದ್ದ ಪ್ರೊಫೈಲ್  ಪಿಕ್  ಹಾಗೂ ಈಗಿನದಕ್ಕೂ ಸಾಕಷ್ಟು ಬದಲಾವಣೆಗಳಿವೆ :-) ಅಂತಹ ಭಿನ್ನ ಭಿನ್ನ ಬದಲಾವಣೆಗಳು ಅರ್ಜುನ್ ಬದುಕಲ್ಲಿ ಕಾಣಲಿ. ವಿಜಯ್  ಕಂಠಸಿರಿ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ. ಸಾಕಷ್ಟು ಖುಷಿ ಕೊಟ್ಟಿದೆ ಜೈ ಹೊ ವಿಜಯ್ ಅವರದ್ದು. ರಾಜೇಶ್ ಕೃಷ್ಣನ್ ಹೆಚ್ಚು ಇಷ್ಟ ಆಗೋದು ಅವರ ಕಂಠದಲ್ಲಿ ಇರುವ ವಿಶೇಷತೆ. ನೂರು ಜನ್ಮಕೂ ನೂರಾರು ಜನ್ಮಕೂ ಅವರ ಕಂಠ ಮರೆಯಲಾಗದ್ದು. 


Image result for red flowers
ಕಳೆದ ಶುಕ್ರವಾರ ಚಂದನ ವಾಹಿನಿಯ ಡಾ. ನಾ. ಸೋಮೇಶ್ವರ್ ಅವರ ನಿರೂಪಣೆಯ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಗಮಕ ವಿದ್ವಾಂಸರು ಬಂದಿದ್ದರು. ಆ ಕಾರ್ಯಕ್ರಮದ ಅವಧಿ ಕೇವಲ ಅರ್ಧ ಗಂಟೆ ಮಾತ್ರ  ಇತ್ತು  ಎನ್ನುವ ಅಂಶದಿಂದ ಬೇಸರ ಕಾಡಿದ್ದು ಸತ್ಯ. ಸತ್ಯನಾರಾಯಣ ಅವರ ಕಂಠ ಸವಿಯ ಜೊತೆ ವಿವರಣೆ ನೀಡಿದ ವಿದ್ವಾಂಸರು. ನನಗೆ ಖುಷಿ ಕೊಡ್ತು ಆದರೆ ಇದು ಎಲ್ಲರಿಗೂ ಇಷ್ಟ ಆಗ ಬೇಕು ಅಂತೇನೂ ಇಲ್ಲ. ಅವರವರ ಭಾವಕ್ಕೆ. ನನಗೆ ಹಾಡಿನ ಎಲ್ಲಾ ಪ್ರಕಾರಗಳು ಇಷ್ಟ. ತುಂಬಾ  ಎಂಜಾಯ್ ಮಾಡ್ತೀನಿ . ಥಟ್ ಅಂತ ಹೇಳಿಯಲ್ಲಿ ಕೆಲವು ಭಿನ್ನ ಬಗೆಯ ಸಾಧಕರು ಬರುತ್ತಿರುತ್ತಾರೆ. ಶುಕ್ರವಾರ ವಿಶೇಷವಾಗಿ ಪ್ರಸಾರ ಆಗುವ ಈ ಒಂದು ವಿಶೇಷ ಎಪಿಸೋಡ್ ನಲ್ಲಿ ಅಂದು ಬರುವ ಎಲ್ಲರೂ ಸಾಧಕರು ಮನ ಸೆಳೆದಿಲ್ಲ . ಆ ವಿಷಯ ಪಕ್ಕಕ್ಕೆ ಇಡೋಣ. ಆದರೆ ಕೆಲವೊಂದು ಬಹಳ ಕಾಡುತ್ತದೆ.  



No comments: