ಹೈದಾಸ್ ಕಥೆ ?


Image result for orange flowers

ಢೀ ಜೂನಿಯರ್ .. 'ಈ' ಟೀವಿ ತೆಲುಗು ಕಾರ್ಯಕ್ರಮದಲ್ಲಿ ನಮ್ಮ ಡ್ಯಾನ್ಸ್ ಸ್ಕೂಲಿನ ಇಬ್ಬರು ಮಕ್ಕಳು ಭಾಗವಹಿಸಿದ್ದಾರೆ .. ಶಿವಮಣಿ ಮತ್ತು ಲೇಖನ .. !! ಹಾಗೆಯೇ ಪುಟಾಣಿ ಪಂಟ್ರು ಸುವರ್ಣ ಚಾನಲ್ ಕನ್ನಡ .. ಅದರಲ್ಲಿ ಕೃತಿಕ್ ನಮ್ಮ ಡ್ಯಾನ್ಸ್ ಸ್ಕೂಲ್ ಸ್ಟೂಡೆಂಟ್ .. !! 
ಜೊತೆಯಲ್ಲಿ ನೀವು ಇಲ್ಲಿ ಹೇಳಿದ ಕಾರ್ಯಕ್ರಮಗಳ ವೀಕ್ಷಿಸಲು ನಮ್ಮ ಮನೆಯಲ್ಲಿ ಅಮ್ಮ ಎಂದಿಗೂ ತಪ್ಪಿಸೋಲ್ಲ .. !! ತುಂಬಾ ತುಂಬಾ ಚೆಂದ ಇರುತ್ತೆ ಚಂದನದ ನಿರೂಪಣೆ .. :) 
@ ಪ್ರಶಾಂತ್  ಖಟಾವರ್  
ಇಂತಹ ಕಮೆಂಟ್  ಓದುವಾಗ ಖುಷಿ ಅನ್ನಿಸುತ್ತದೆ. ನನ್ನ ಬ್ಲಾಗ್ ಓದುಗ ಮಿತ್ರರೊಬ್ಬರು ಈ ಸಂಗತಿ ಹೇಳಿದ್ದಾರೆ. ಅವರ ಶಾಲೆಯ ಮಕ್ಕಳು ತೆಲುಗು ಭಾಷೆಯ ರಿಯಾಲಿಟಿ ಷೋ ನಲ್ಲಿ ಭಾಗವಹಿಸುವುದರ ಮೂಲಕ ಪ್ರತಿಭೆಗೆ ಭಾಷೆಯ ಗಡಿ ಇಲ್ಲ ಎನ್ನುವುದನ್ನು ತಿಳಿಸುತ್ತದೆ.ನಾನು ಇತ್ತೀಚಿಗೆ ಢೀ 2 ಕಾರ್ಯಕ್ರಮದ ಬಗ್ಗೆ ಬರೆದಿದ್ದೆ. 
ಡ್ಯಾನ್ಸ್ ಕಾರ್ಯಕ್ರಮಗಳ ಹಂಗಾಮ ಈಗ ಕಲರ್ ಕನ್ನಡ, ಜೀ ಹಿಂದಿ, ಸುವರ್ಣ ಕನ್ನಡ, ಈ ಟೀವಿ ತೆಲುಗು, ಕಲರ್ ಹೀಗೆ ಬಹಳಷ್ಟು ಕಡೆ ಚಿಕ್ಕವರು -ದೊಡ್ಡವರು ಮಕ್ಕಳು ಮರಿ ಎನ್ನುವಂತೆ ಎಲ್ಲರೂ ತಮ್ಮ ಪ್ರತಿಭಾ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಕೆಲವು ಮಾತ್ರ ಹೆಚ್ಚು ಆಕರ್ಷಣೆ ಉಂಟು ಮಾಡುತ್ತಿದೆ. ಅದರಲ್ಲಿ  ಈ ಟೀವಿ ತೆಲುಗು ವಾಹಿನಿ  ಢೀ ಸಹ ಒಂದು. 
Image result for orange flowers

ಸುವರ್ಣ ವಾಹಿನಿಯಲ್ಲಿ ಹಳ್ಳಿಹೈದಾ ಪ್ಯಾಟೆಗ್ ಬಂದ 2 ಕಾರ್ಯಕ್ರಮ ಒಂದೆರಡು ಎಪಿಸೋಡ್ ವೀಕ್ಷಿಸಿದೆ. ಬಿಗ್ ಬಾಸ್ ಮೂಲಕ ಹೆಚ್ಚು ಜನಕ್ಕೆ ಗೊತ್ತಾದ ನೂರು ಜನ್ಮಕೂ  ಹೀರೋ ಸಂತೋಷ್ ಅದರ ನಿರೂಪಕ. ಅಕುಲ್ ಬಾಲಾಜಿ ಅವರ ತಮ್ಮನಂತೆ ಮಾತಾಡ್ತಾರೆ, ಅದರ ಬಗ್ಗೆ ನೋ ಡೌಟ್ .ಆದರೆ ಮತ್ತೆ ಹಳ್ಳಿ ಹಾಗೆನ್ನುವುದಕ್ಕಿಂತ ಕಾಡಿನ ಅರಣ್ಯ ತಾಯಿ ಮಡಿಲ ಮಕ್ಕಳು ನಗರದ ಕೆಟ್ಟ ಬೆಳಕಿಗೆ ಸಿಕ್ಕಿ ಹಾಕಿ ಕೊಂಡಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸುವಾಗ  ದುರಂತವಾಗಿದ್ದ ರಾಜೇಶ್, ಆತನ ಮನಸ್ಥಿತಿ ಮತ್ತೆ ಮತ್ತೆ ನೆನಪಾಯಿತು. ಆತನ ಸಾವು ಅತಿ ಬೇಸರದ ಸಂಗತಿ. 
ನಾನು ನೋಡಿದಾಗ ಹುಡುಗರ ಆಯ್ಕೆ ಆಗ್ತಾ ಇತ್ತು, ನನಗೆ ಅವನು ಬೇಕು, ಇವನು ಬೇಕು ಅಂತ ಸುಂದರವಾದ ಬಣ್ಣದ ಹುಡುಗಿಯರು ಕೇಳುತ್ತಾ ತುಂಟಾಟ ಆಡುತ್ತಿದ್ದರು. ನಗರಿಗರೇ ಬೆಚ್ಚಗಾಗುವ ಸುಂದರಿಯರು ಹೀಗೆ ಕೇಳಿದರೆ ಪಾಪದ ಹಳ್ಳಿ  ಹೈದಾಸ್  ಕಥೆ ? 
 ರಿಯಾಲಿಟಿ ಮತ್ತು ರಿಯಲ್ ಕಥೆ ಬೇರೆ ಅನ್ನುವ ಸತ್ಯ ಗೊತ್ತಾಗುವಷ್ಟರಲ್ಲಿ ಅವರ ಬದುಕಲ್ಲಿ ಸಾಕಷ್ಟು  ಬದಲಾವಣೆ ಆಗಿರುತ್ತದೆ. ಇತ್ತೀಚಿಗೆ ನಾನು ಬದಲಾವಣೆ ಅನ್ನುವ  ವಿಷಯದ ಬಗ್ಗೆ ಒಂದಷ್ಟು ಮಾಹಿತಿ ಓದಿ ಕೊಳ್ತಾ ಇದ್ದೆ. ಅದರಲ್ಲಿ ಬದುಕಲ್ಲಿ ಮಾರ್ಪಾಟು ಬಹಳ ಮುಖ್ಯ ಎಂದು ಹಲವಾರು ಉದಾಹರಣೆಗಳ ಸಹಿತ ವಿವರಿಸಿತ್ತು.ಆದರೆ ಅದರಲ್ಲಿ ಹೇಳಿದ ಬದಲಾವಣೆಗೊಂಡ ವ್ಯಕ್ತಿಗಳು ಸುತ್ತಮುತ್ತಲಿನ ಪರಿಸರವನ್ನು ಅನುಭವಿಸದೆ ಇದ್ದರೂ ಸಹ ಅದನ್ನು ಅವರು  ಕಂಡಿದ್ದರು. ಆದರೆ ಈ ಹುಡುಗರು ಮೆಟ್ರೋ  ಪಾಲಿಟನ್ ವಾತಾವರಣದಲ್ಲಿ ಯಾಕೋ ಗೊತ್ತಿಲ್ಲ ಈ ಕಾರ್ಯಕ್ರಮ ಆರಂಭವಾದ ದಿನದಿಂದಲೂ  ಆ ಹುಡುಗರ ಬದುಕು ಯಾವುದೇ ತೊಂದರೆ ಎದುರಿಸದಿರಲಿ ಎಂದು ಬೇಡುತ್ತಿದೆ. ನೋಡುವ ಟೈಮ್ ಎಲ್ಲಾ ಹೇಳುತ್ತೆ!



ಉದಯ ವಾಹಿನಿಯಲ್ಲಿ ಶಾಲಿನಿ ಅವರು ನಡೆಸಿಕೊಡುವ  ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ. ಪುಟ್ಟ ಮಕ್ಕಳು, ಅವರ ಭಾಷೆ, ವಿಚಾರಧಾರೆ, ಅವರ ಕಲ್ಪನೆ,ಅವರ ವಾಸ್ತವ, ಅವರ ಸಂತೋಷ್, ಬೆರುಗು, ಅವರ ಯೋಚನಾಶೈಲಿ ಎಲ್ಲವೂ ಇಷ್ಟ ಆಗುತ್ತದೆ. ಮುಖ್ಯವಾಗಿ ಶಾಲಿನಿ ಸಹ ಇಷ್ಟ ಆದರೂ  ಕೆಲವು ಪ್ರಶ್ನೆಗಳನ್ನು ಕೇಳುವಾಗ ಎಚ್ಚರ ವಹಿಸೋದು ಒಳ್ಳೆಯದು.  ಏಕೆಂದರೆ ಕೆಲವು ಪ್ರಶ್ನೆಗಳು ಹೇಗಿರುತ್ತದೆ ಎಂದರೆ ಮಕ್ಕಳ  ಕೈಲಿ  ಪ್ರಣಯಾಧಾರಿತ ಹಾಡಿನ ಡ್ಯಾನ್ಸ್ ಮಾಡಿಸಿದಂತೆ, ಅಂತಹ ಹಾಡುಗಳನ್ನು ಹೇಳಿಸಿದಂತೆ ಇರುತ್ತೆ.ಅದನ್ನು ಬಿಟ್ರೆ ಎಲ್ಲಾ  ವಿಷಯದಲ್ಲೂ ಈ ಕಾರ್ಯಕ್ರಮ ಬೆಸ್ಟು !




No comments: