ಮಾತು

Image result for red flower images
ನಾನು ಹೆಚ್ಚು ಗೌರವಿಸುವ ಸ್ವಾಮೀಜಿಗಳಲ್ಲಿ ಪೇಜಾವರ ಶ್ರೀಗಳು ಸಹ ಒಬ್ಬರು. ಅವರ ಜೀವನಶೈಲಿ, ವಿಚಾರಧಾರೆ, ಆ ಜೀವನ್ಮುಖತೆ, ಸಮಾಜಮುಖಿ ಗುಣ ಎಲ್ಲವೂ ಅನನ್ಯ.ತಮಾಷೆ ಅಂದ್ರೆ ಅನೇಕರಿಗೆ ಅವರೇನು ಮಾಡಿದರೂ ಹಳದಿಯಾಗಿಯೇ ಕಾಣುತ್ತೇ!
ಶ್ರೀಗಳು ಇಫ್ತಾರ್ ಕೂಟ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕೊಟ್ಟರು ಅನ್ನುವ ಸಂಗತಿ ಕೆಲವರಿಗೆ ನಾಟಕೀಯವೆಂದು ಅನ್ನಿಸಿದರೆ ಕೆಲವರಿಗೆ ಖುಷಿ ಅನ್ನಿಸಿದೆ...ಇಂದು ಬೆಳಿಗ್ಗೆ ಫೇಸ್ಬುಕ್ ನೋಡುವಾಗ ತಮ್ಮನಂತಹ  ಮಿತ್ರ ವಿಕ್ರಮ ಜೋಶಿ ತನ್ನ ಗೋಡೆಯಮೇಲೆ ಬರೆದುಕೊಂಡಿದ್ದನ್ನು ಇಲ್ಲಿ ಶೇರ್ ಮಾಡಿದ್ದೇನೆ
Vikram Joshi
5 hrs ·

‘ನಾನು, ನನ್ನ ಇಬ್ಬರು ಅಣ್ಣಂದಿರು 20 ವರ್ಷಗಳಿಂದ ಪೇಜಾವರ ಶ್ರೀಗಳ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಪೇಜಾವರ ಶ್ರೀಗಳು ನಮ್ಮನ್ನು ಯಾವತ್ತೂ ಮುಸ್ಲಿಮರೆಂದು ನೋಡಿಯೇ ಇಲ್ಲ. ಅವರಿಗೇನೂ ಹಿಂದೂಗಳು ಚಾಲಕರಾಗಿ ಸಿಗುವುದಿಲ್ಲ ಎಂದಲ್ಲ, ಅಥವಾ ಮುಸ್ಲಿಮರೇ ಬೇಕು ಎಂದೂ ಅಲ್ಲ. ಅವರಿಗೆ ಎಲ್ಲರೂ ಒಂದೇ. ಶುಕ್ರವಾರ ಕಾರಿನಲ್ಲಿ ಪ್ರಯಾಣಿಸುವಾಗ ನಮಗೆ ನಮಾಜ್‌ ಮಾಡುವ ಸಮಯವಾದರೆ, ದಾರಿ ಮಧ್ಯೆ ಮಸೀದಿ ಬಂದಾಗ ಕಾರು ನಿಲ್ಲಿಸುವಂತೆ ಹೇಳಿ, ನಮಾಜ್‌ ಮಾಡಿ ಬನ್ನಿ ಎಂದು ಸ್ವಾಮೀಜಿ ಕಳುಹಿಸುತ್ತಿದ್ದರು.'''

- ಪೇಜಾವರ ಶ್ರೀಗಳ ವಾಹನ ಚಾಲಕ ಅರೀಫ ಮಹ್ಮದ

ಗುರುಗಳ ಮೇಲೆ ಮತ್ತಷ್ಟು ಗೌರವ ಹೆಚ್ಚಿತು 
****
ನಿನ್ನೆ ವಾಹಿನಿಗಳಲ್ಲಿ ಈ ವಿಷಯವಲ್ಲದೆ, ಬೀಫ್  ಈಟರ್ ಗಳ ಬಗ್ಗೆ ಮಾಧ್ಯಮಿಗಳು ಮಾತಾಡಿದ್ದೇ ಮಾತಾಡಿದ್ದು..
ಪಬ್ಲಿಕ್ ಟೀವಿಯ ರಂಗಣ್ಣ ಜೊತೆಗೆ ಅರವಿಂದ್ ಜೊತೆಯ ವಾರ್ತಾ ಚರ್ಚೆ ನನ್ನ ಗಮನ ಸೆಳೆಯಿತು. ಪೇಜಾವರ ಶ್ರೀಗಳು ನೀಡಿದ ಇಫ್ತಾರ್  ಕೂಟ, ಬೀಫ್  ಈಟರ್ ಗಳು, ತಿಂದವರನ್ನು ಸಮರ್ಥಿಸಿಕೊಳ್ಳುವುದಕ್ಕೆ ತಾವು ಮೀನು ತಿಂದ ಸತ್ಯವನ್ನು  ಜನರ ಮುಂದೆ  ರಮೇಶ್ ಕುಮಾರ್ ಅವರ ಬಗ್ಗೆ... ಒಟ್ಟಾರೆ  ಈ ಮೂರು ಸಂಗತಿಗಳನ್ನು ಸರಳ ಹಾಗೂ ಸಮರ್ಥವಾಗಿ ವೀಕ್ಷಕರಿಗೆ ತಲಪುವಂತೆ ಮಾಡಿದ್ರು ರಂಗಣ್ಣ.. 
ನಿಮ್ಮನ್ನು ಜಾಸ್ತಿ ಮಾತುಗಾರ ಅಂತಾರೆ ಮಂದಿ.. ಆದ್ರೂ ಅನೇಕ ಬಾರಿ ನಿಮ್ಮ ಮಾತೇ  ಇಷ್ಟವಾಗುತ್ತೇ...

No comments: