ದ್ವಾಸೆ

Image result for pink flowerDavid Rocco's Dolce India ಇದನ್ನು ನೀವು ಹೇಗೆ ಬೇಕಾದರು ಉಚ್ಚಾರ ಮಾಡಿ. ಆದರೇ ಸೆಲೆಬ್ರಿಟಿ ಶೆಫ್ ಡೇವಿಡ್ ಅವರು ನಮ್ಮ ಭಾರತ ಅದರಲ್ಲೂ ದಕ್ಷಿಣ ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಅಡುಗೆ ಸವಿದು ಜೊತೆಗೆ ಇಟಾಲಿಯನ್ ವೆಜ್  ಫುಡ್ ಮಾಡಿ ತೋರಿಸಿದ ಕಾರ್ಯಕ್ರಮ ಫಾಕ್ಸ್ ಲೈಫ್ ಚಾನೆಲ್ ನಲ್ಲಿ ಪ್ರಸಾರವಾಯ್ತು. ದಕ್ಷಿಣ ಭಾರತ ಅದರಲ್ಲೂ ಚೆನ್ನೈ ನಗರಕ್ಕೆ ಹೋಗಿ ಅಲ್ಲಿ ಪೇಪರ್ ದ್ವಾಸೆ, ಖಾರವಾದ ಚಟ್ನಿ, ಪಲ್ಯ, ಸಾಂಬರ್  ಜಮಾಯಿಸಿದ ಡೇವಿಡ್ಡೂ ಆ ಬಳಿಕ ' ದೋಸೆ ತಂಬಿ' ಕೈಲಿದ್ದ ಪೊರಕೆ ತೆಗೆದುಕೊಂಡು ಕಾದ ಹೆಂಚಿಗೆ ಎಣ್ಣೆ ಸವರಿ ದೋಸೆ ಹುಯ್ದು ಭೇಷ್ ಎಂದು ಅನ್ನಿಸಿ ಕೊಂಡರು.
ಮತ್ತೊಂದು ಅಡುಗೆ ಅಂಗಡಿಗೆ ಹೋಗಿ ಹಸಿ ಈರುಳ್ಳಿ ಕತ್ತರಿಸಿದ ಡೇವಿಡ್ಡೂ ಹೇಳಿದ್ದು ಯಪ್ಪಾ ಈ ಇಂಡಿಯ ಈರುಳ್ಳಿ ಶಾನೆ ಸ್ಟ್ರಾಂಗ್ ಉ ಉ 
ಡೇವಿಡ್ಡೂ ಚೆನ್ನೈ ದೋಸೆ ಮಾತ್ರವಲ್ಲ  ದಕ್ಷಿಣ ಭಾರತದ ಯಾವುದೇ ದ್ವಾಸೆ ಅಂಗಡಿಗೆ ಹೋದರೂ ಸಹ ಅಲ್ಲಿ ರುಚಿಕರ ,ವಿಭಿನ್ನ, ವಿಶೇಷ ದೋಸೆಗಳು ಸಿಗ್ತಾವೆ ಬಂಜು ರುಚಿ ನೋಡಿ ಮಾರ್ರೆ ಅಂತ ತೆಳ್ಳೇವು ಪ್ರಿಯ ಭಟ್ಟರು, ಹೆಗಡೆ ಹೇಳುತ್ತಿದ್ದಾರೆ..!!

No comments: