ಯಸ್ ಐ ನೋ 😀

ಯಾವುದೇ ಕ್ಷೇತ್ರ ಆಗಿ ರಲಿ ಅಲ್ಲಿಸ್ಪರ್ಧೆ ಸಾಮಾನ್ಯ. ಮಾಧ್ಯಮ  ಕ್ಷೇತ್ರದ ಸ್ಪರ್ಧೆ ಸ್ವಲ್ಪ ವಿಚಿತ್ರ ಇರುತ್ತೆ ಆ ವಿಷ್ಯ ಬೇರೆ .. ಅದರಲ್ಲೂ ದೃಶ್ಯ ಮಾಧ್ಯಮದ  ವಿಷಯಕ್ಕೆ ಬರುವುದಾದರೆ ಒಂದೇ ಸಂಗತಿಯನ್ನು ನಮ್ಮಲ್ಲೇ ಮೊದಲು  ಎಂದು ಪ್ರಸರಿಸುತ್ತ.. ವಿವಿಧತೆಯಲ್ಲಿ ಏಕತೆ ಮತ್ತು ಏಕತೆಯ ಮೂಲಕ ವಿವಿಧತೆ ತೋರಿಸುತ್ತಾ ಏಕತಾನತೆಯನ್ನು ಕಾಪಾಡುವುದು  ಸಾಮಾನ್ಯ. 
ನಮ್ಮ ಮನೆಯಲ್ಲಿ   ನನ್ನ ಅಣ್ಣಂದಿರು ಹೆಚ್ಚು ನೋಡುವುದು  ರಿಪಬ್ಲಿಕ್  ಚಾನಲ್ ..  ನಮ್ಮ ಭಾವ ಒಬ್ರು ಸ್ವಿಜರ್  ಲ್ಯಾ೦ಡ್  ನಂತಹ ದೇಶಗಳಿಗೆ ಆಗಾಗ  ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ  ಪಾಠ  ಮಾಡಿಕೊಂಡು ಬರುವ ಮೇಸ್ಟ್ರು  .. ಹೀಗೆ ನೋಡುವವರ ಲಿಸ್ಟ್ ದೊಡ್ಡದಿದೆ.  ಕನ್ನಡದಲ್ಲಿ ಹೆಚ್ಚಾಗಿ ರಂಗಣ್ಣನ ಚಾನಲ್..( ನಾವ್ ಬಿಡಿ ಎಲ್ಲಾ ಚಾನಲ್ ನವರು ) !! 

ಯಾವಾಗ ಕನ್ನಡಲ್ಲೂ ರಿಪಬ್ಲಿಕ್  ಚಾನಲ್  ಬರುತ್ತೆ ಅಂತ ವಿಷಯ ಹರಡಿತೋ ಆಗ ಹೆಚ್ಚು ಚರ್ಚೆ ಆಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ. ಒಂದಷ್ಟು ರಂಗಣ್ಣನ  ದ್ವೇಷಿಗಳು, ಅಜಿತ್ ಕಂಡ್ರೆ ಆಗದವರು, ರಮಾಕಾಂತ್ ಇಷ್ಟ ಪಡದೆ ಇರುವವರು ,ಚಂದನ್  ಮಾತಿಗೆ ಸಿಡಿಮಿಡಿ ಆಗುವವರು  ಇನ್ನೈತೆ  ಕಥೆ ಅಂತ ಬರೆದಿದ್ದೆ ಬರೆದಿದ್ದು.  ಅರ್ನಾಬ್   ನೇರವಾಗಿ ಕನ್ನಡದಲ್ಲಿ ಚರ್ಚೆ ಮಾಡ್ತಾರೆ ಅನ್ನುವ ರೇಂಜಲ್ಲಿ ಇತ್ತು. ನನಗೆ ಅರ್ನಾಬ್   ಹಿಂದೀ  ಶೈಲಿಯೇ ಆಂಗ್ಲ ಶೈಲಿಯಂತೆ ಧ್ವನಿಸುತ್ತದೆ.. ಇನ್ನು ಅವರಿಗೇನಾದ್ರು ಕನ್ನಡ ಬಂದಿದ್ರೆ  ಅವರ  ಕನ್ನಡ  ಊಒ ಮೈ ಗಾಡ್ .. ಆದ್ರೂ ಯಾರಾದ್ರೂ ಸರ್ ನಿಮಗೆ ಕನ್ನಡ ಬರುತ್ತಾ ಅಂತ ಕೇಳಿ . ಅವರು ಆತ್ಮವಿಶ್ವಾಸದಿಂದ ಹೇಳುತ್ತಾರೆ ಯಸ್ ಐ ನೋ ಕನ್ನಡ  ಸ್ವಲ್ಪಸ್ವಲ್ಪ ..!   😀😀😀😀😀😀😀😀

No comments: