ಜಾಕ್ ಪಾಟ್

 


ಸ್ಟಾರ್ ಸುವರ್ಣ ಮನೋರಂಜನಾ ವಾಹಿನಿಯನ್ನು ಬಹಳ ದಿನಗಳ ಬಳಿಕ ನಾನು ಮುಖ್ಯವಾಗಿ ಬಿ ಆರ್ ಛಾಯ ಮೇಡಂ ಮತ್ತು ಪದ್ಮಪಾಣಿ ಸರ್ ಕಾರಣದಿಂದ ವೀಕ್ಷಿಸಿದೆ. ಅದರಲ್ಲಿ ಪ್ರಸಾರ ಆಗುವ ಜಾಕ್ ಪಾಟ್ ಎನ್ನುವ ಕಾರ್ಯಕ್ರಮದಲ್ಲಿ ಈ ದಂಪತಿಗಳಿಗೆ  ಹಾಗೆನ್ನುವುದಕ್ಕಿಂತ ಛಾಯ ಮೇಡಂ ಗೆ ಸನ್ಮಾನ ಆಗುವ ಕಾರ್ಯಕ್ರಮ ಇತ್ತು ಪ್ರೇಮದಿನದ ಸಲುವಾಗಿ... ! 

ಅಲ್ಲಿ ಬಹಳ ದಿನಗಳ ನಂತರ ನಿರೂಪಕಿ ಅನುಪಮಾ ಗೌಡ ರನ್ನು ನೋಡಿ ಖುಷಿ ಆಯ್ತು. ಕನ್ನಡದ ಕೆಲವು ಉತ್ತಮ ನಿರೂಪಕ/ಕಿ ಯಾರ ಸಾಲಿಗೆ ಸೇರಿರುವ ಅನುಪಮಾ ಭಾಷೆ ಹಾಗು ಅವರ ಸುವರ್ತನೆ ಇಷ್ಟ ಆಗುತ್ತದೆ. ಬಿಗ್ ಬಾಸ್ ಗೆ ಎರಡನೇ ಬಾರಿ ಬಂದ ಅನುಪಮಾ ಅನೇಕರೀತಿಯಲ್ಲಿ ತಮ್ಮನ್ನು ಪಾಲಿಶ್ ಮಾಡಿಕೊಂಡಿದ್ದರು. ಅದು ಒಳ್ಳೆಯ ಬೆಳವಣಿಗೆ. ಪದ್ಮಪಾಣಿ ಸರ್ ನನಗೆ ಫೇಸ್ ಬುಕ್ ಮಿತ್ರರು. ನನ್ನ ಪೋಸ್ಟ್ ಗಳಿಗೆ ಲೈಕ್ ಒತ್ತುವ ಮತ್ತು ಕಾಮೆಂಟ್ ಹಾಕುವ ಹೃದಯ ವಿಶಾಲಿಗಳು.. ತಿಳಿಹಾಸ್ಯದ ಮನಸ್ಸು ಇರುವ ಪದ್ಮಪಾಣಿ ಸರ್ ಮತ್ತು ನನ್ನ ಮೆಚ್ಚಿನ ಗಾಯಕಿ ಛಾಯಾ ಮೇಡಂ ಅವರನ್ನು ಜಾಕ್ ಪಾಟ್ ವೇದಿಕೆಯ ಮೂಲಕ ನೋಡಿ ಖುಷಿ ಆಯಿತು. ಈ ಕಾರ್ಯಕ್ರಮದಲ್ಲಿ ತುಂಬಾ ಇಂಪ್ರೆಸ್ ಮಾಡಿದ ಮತ್ತೊಂದು ಸಂಗತಿ ಅಂದರೆ  ವಿವಿಧ ಪ್ರಕಾರಗಳ ಸಂಗೀತ.ಅದು ಗಾಯನ, ವಾದನ.. ಹೀಗೆ ಹತ್ತು ಹಲವಾರು ಇರಬಹುದು. ತುಂಬಾ ಚೆನ್ನಾಗಿತ್ತು.ತಾರಾ ದಂಪತಿಗಳಾದ ಸಿಹಿಕಹಿ ಚಂದ್ರು ಮತ್ತು ಗೀತಾ ಮೇಡಂ ಅವರಿಗೆ ನಡೆದ ಸನ್ಮಾನ ಮತ್ತು ಮಾತುಕತೆ ಚಹಾದ ಅಲ್ಲಲ್ಲ  ಕಾಫಿ ಜೊತೆಯ ಚೂಡಾ ಇದ್ದಂಗೆ ಇತ್ತು.. 

No comments: