ಬಿಗ್ ಬಾಸ್ ಸಲ್ಮಾನ್ !

 
ಕಳೆದ ಕೆಲವು ದಿನಗಳಿಂದ ಟೀವಿ ಬಗ್ಗೆ ಏನೂ ಬರೆಯೋಕೆ ಆಗ್ತಾ ಇಲ್ಲ. ಗೊತ್ತಲ್ಲ, ಸ್ವಲ್ಪ ಸೋಮಾರಿತನ, ಅನಾರೋಗ್ಯ  ಹೀಗೆ ಹಲವಾರು ಸಂಗತಿಗಳು. ಆದರೇ ಟೀವಿ ನೋಡೋದು ಬಿಟ್ಟಿಲ್ಲ ಬಿಡಿ.. ಅಲ್ಲಿ ಕಂಡ ಕಾರ್ಯಕ್ರಮಗಳನ್ನು  ಸುದ್ದಿಮನೆಯಲ್ಲಿ ಹೇಗೆ ಮಾತಾಡ್ತೀವಿ ಅಂದ್ರೆ  ಬಗ್ಗೆ ಬರೀತಿನಿ..
ಬಹು ನಿರೀಕ್ಷಿತ ಬಿಗ್ ಬಾಸ್- 7   ಕಲರ್ ವಾಹಿನಿಯಲ್ಲಿ  ಆರಂಭವಾಗಿದೆ. ಕನ್ನಡಿಗರು ಈಗಷ್ಟೇ ಕನ್ನಡ  ಬಿಗ್ ಬಾಸ್ ಮಜಾ ತೆಗೆದುಕೊಂಡಿದ್ದಾಗಿದೆ. ಈಗ ಎಲ್ಲ ವೀಕ್ಷಕರಿಗೂ ಬಿಗ್ ಬಾಸ್ ಕಡೆಗೆ ಸಕತ್ ಗಮನ.ಕನ್ನಡದಲ್ಲಿ ಹಂಗಿತ್ತು, ಸೋ ಹಿಂದಿಯಲ್ಲಿ ಹೆಂಗಿರ ಬಹುದು ಎನ್ನುವ ಕುತೂಹಲ ಇದ್ದೇ ಇದೆ. ಯಾಕೇಂದ್ರೆ  ಕನ್ನಡದ ಆ ಮನೆ ಆಟ ಎಲ್ಲರನ್ನೂ ಅಕರ್ಷಿಸಿತ್ತು.

 ನಾನು ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮ ತುಂಬಾ ಆಸ್ಥೆಯಿಂದ  ವೀಕ್ಷಿಸುತ್ತಾ  ಬಂದಿದ್ದೇನೆ ಮೊದಲಿನಿಂದಲೂ. ಕೆಲವು ಆಕರ್ಷಕವಾಗಿದ್ದರೇ, ಇನ್ನು ಕೆಲವು ಓಕೆ ಓಕೇ . ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅತಿಹೆಚ್ಚಿನ  ಆಕರ್ಷಣೆಯ ಕೇಂದ್ರ ಬಿಂದುಗಳು ಮನೆ, ಕನಫೆಷನ್ ರೂಂ, ಸಲ್ಮಾನ್ ಖಾನ್. ಪ್ರತಿ ಬಾರಿಯೂ ವಿವಿಧ ಮನಸ್ಥಿತಿಯ ಸ್ಪರ್ಧಿಗಳು ಸಹ ಆಕರ್ಷಣೆಯ ಕೇಂದ್ರ ಬಿಂದು ಆಗಿರುತ್ತಾರೆ. ತಮಾಷೆ ಅಂದ್ರೆ ಅವರಲ್ಲಿ  ಸಾಕಷ್ಟು ಜನ ವೀಕ್ಷಕರಿಗೆ ತಿಳಿದೇ ಇರುವುದಿಲ್ಲ . ಆದರೇ ಹಾಗೆಂದು ವೀಕ್ಷಕರು ಅದನ್ನು ವೀಕ್ಷಿಸದೇ ಬಿಡುವುದಿಲ್ಲ.

ಬಿಗ್ ಬಾಸ್ -7 ಬಗ್ಗೆ ವೀಕ್ಷಕರಿಗೆ ಅಪಾರವಾದ  ನಿರೀಕ್ಷೆ ಇತ್ತು. ಆದರೇ ಅದ್ಯಾಕೊ ಅದರ ಸೆಟ್ಟಿಂಗ್ ಯಾರನ್ನೂ ಹೆಚ್ಚು ಆಕರ್ಷಿಸುತ್ತಿಲ್ಲ ಎಂದೇ ಹೇಳ ಬಹುದು. ಆದರೂ ಇನ್ನೂ ಈಗಷ್ಟೇ ಆರಂಭ ಆಗಿರುವ ಬಿಗ್ ಬಾಸ್ ತಿರುವುಗಳ ಬಗ್ಗೆ ಏನೂ ಹೇಳೋಕೆ ಆಗಲ್ಲ. ಸದ್ಯದ ಆಕರ್ಷಣೆ ಸಲ್ಮಾನ್ boy…

ಕಿರೀಟ!



ಈಗ ಜನಪ್ರಿಯ ರಿಯಾಲಿಟಿ ಶೋ ಗ್ರಾಂಡ್ ಪಿನಾಲೆ ಘಟ್ಟ ತಲುಪಿದೆ. ಈಗ ಉಳಿದಿರುವ ಸ್ಪರ್ಧಿಗಳು ಕೇವಲ ನಾಲ್ಕು. ಅರುಣ್ ಸಾಗರ್, ವಿಜಯ್ ರಾಘವೇಂದ್ರ , ನರೇಂದ್ರ ಬಾಬು ಶರ್ಮ ಮತ್ತು ನಿಖಿತ. ಈ ನಾಲ್ವರಲ್ಲಿ ಗೆಲುವಿನ ಕಿರೀಟ ಯಾರಿಗೆ ದಕ್ಕುತ್ತದೆ ಎನ್ನುವ ಅಂಶದಡಿಯಲ್ಲಿ ನಮ್ಮ ಪತ್ರಿಕೆ ‘ ಜನಪ್ರಿಯ ನ್ಯೂಸ್’ ನಡೆಸಿದಂತಹ ಸಮೀಕ್ಷೆಯಿಂದ ಹೆಚ್ಚು ಓದುಗರು ಒಲವು ತೋರಿಸಿದ್ದು ಅರುಣ್ ಸಾಗರ್ ಮತ್ತು ವಿಜಯ್ ರಾಘವೇಂದ್ರ ಬಗ್ಗೆ .


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


http://janapriyanews.com/2013/06/%E0%B2%AC%E0%B2%BF%E0%B2%97%E0%B3%8D-%E0%B2%AC%E0%B2%BE%E0%B2%B8%E0%B3%8D-%E0%B2%85%E0%B2%B0%E0%B2%AE%E0%B2%A8%E0%B3%86%E0%B2%97%E0%B3%86-%E0%B2%B0%E0%B2%BE%E0%B2%9C%E0%B2%A8%E0%B2%BE%E0%B2%B0/

ಬಿಡಿಸಿ ಹೇಳ ಬೇಕಿಲ್ಲಾ.. ಅಲ್ವ... !



ಬಿಗ್ ಬಾಸ್ ಬಗ್ಗೆ ಜನಕ್ಕೆ ಇದ್ದ ಕೋಪ ತಣ್ಣಗಾಯಿತು.. ಅದನ್ನು ತಣ್ಣಗೆ ಮಾಡಲು ಅವರು ಇಷ್ಟು ದಿನ ತೆಗೆದುಕೊಂಡರು :-) .. ನಿಕಿತಾಳನ್ನು ಉಳಿಸಿಕೊಂಡು ಅಲ್ಲಿ ಕನ್ನಡ ಕಲಿಸ್ಕೊಡುವ ಬಾಲಿಶ ಪ್ರಯತ್ನವನ್ನು   ಸುದೀಪ್ ಸಮರ್ಥಿಸಿಕೊಂಡರು ಅದು ತಪ್ಪು ಎನ್ನುವ ಅಂಶ ಅವರಿಗೆ ಗೊತ್ತಿತ್ತು :-)
ಕನ್ನಡ ರಿಯಾಲಿಟಿ ಶೋಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ  ಬಿಗ್ ಬಾಸ್ ನ್ನು ಕಿಚ್ಚ ಸುದೀಪ್ ನಡೆಸಿ ಕೊಡುತ್ತಿರುವುದು ಜನಕ್ಕೆ ಇಷ್ಟ ಆಗಿದೆ.. ಕಿಚ್ಚ ವೈಯುಕ್ತಿಕವಾಗಿ ನನಗೆ ತುಂಬಾ ಇಷ್ಟ ಆಗುವ ಕಲಾವಿದ. ಆತನ ಕ್ರಿಯೇಟಿವಿಟಿ, ಪ್ರಯತ್ನ, ಹೊಸತನ ಎಲ್ಲವೂ ಯೂನಿಕ್. ಬಿಗ್ ಬಾಸ್ ಗೆ ಅವರು ನಿರೂಪಕರಾಗಿ ಬಂದಾಗ ಅಪಾರವಾಗಿ   ಖುಷಿ ಪಟ್ಟ ಫ್ಯಾನ್ ಗಳಲ್ಲಿ ನಾನು ಒಬ್ಬಳು.
ಕಿಚ್ಚ ಅವರ ಬಗ್ಗೆ ಹೇಳೋದಾದರೆ ಹೆಚ್ಚಿನ ಮಂದಿ ಎಲ್ಲ ಕ್ಷೇತ್ರದವರು  ತುಂಬಾ ಇಷ್ಟ ಪಡ್ತಾರೆ. ಅದಕ್ಕೆ ಇರ ಬೇಕು ನಿಕಿತ ವಿಷಯದಲ್ಲಿ ಅವರು ಅಷ್ಟೊಂದು ಕೋಪ ಮಾಡಿಕೊಂಡಿದ್ದು.
ಜನತೆಯನ್ನು   ಜನಾರ್ಧನ ಮೆಚ್ಚಿಸೋಕೆ ಆಗಲ್ಲ ಅನ್ನುವ ಮಾತು ಸತ್ಯ, ಆದರೆ ಆಗಲ್ಲ ಅಂತ ಕೂತರೆ ಪಾಕ ಮತ್ತಷ್ಟು ಹದಗೆಡುತ್ತೆ!

ಅತ್ಯಂತ ಸುಂದರವಾದ ಶೈಲಿ ಮತ್ತು ಆಂಗಿಕ ಭಾಷೆಯಿಂದ ಮನ ಸೆಳೆದ ಕಿಚ್ಚ ಅವರನ್ನು ಕಂಡರೆ ಈಗ ಅಪಾರ ಸಂಖ್ಯೆಯಲ್ಲಿ , ವಯಸ್ಸಿನ ಭೇದ ಇಲ್ಲದೆ ಇಷ್ಟ ಪಡುವಷ್ಟಮಟ್ಟಿಗೆ ಬೆಳೆದಿದ್ದಾರೆ. ಬೆಳೆದಿದ್ದಾರೆ ಅನ್ನುವ ಪದ ಈಗ ಯಾಕೆ ಬಳಸ್ತಾ ಇದ್ದೀನಿ ಅಂದ್ರೆ ಸಾಮಾನ್ಯವಾಗಿ ಬಹಳಷ್ಟು ಹಿರಿಯ ಹೆಣ್ಣುಮಕ್ಕಳು ಸುದೀಪ್ ಅವರನ್ನು ಹೀರೋನಂತೆ ಖಂಡಿಲ್ಲ ಮಗಂತೆ, ತಮ್ಮನಂತೆ, ಕಂಡಿದ್ದಾರೆ. ಅವರ ಭಾವನೆಗಳು ನನ್ನ ಮುಂದೆ ವ್ಯಕ್ತವಾದಾಗ  ಇರುವ ಸಂಗತಿ ನೇರವಾಗಿ  ಹೇಳ ಬೇಕಾಯ್ತು ಕಿಚ್ಚ.. ನಿಮ್ಮ ಮೇಲೆ ಅಸಹನೆಯಿಂದಲ್ಲ !

ನೀವು ಒಳ್ಳೆಯ ಶಾರೀರ ಹೊಂದಿದ್ದೀರಿ ಅಂತ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಹೆಣ್ಣುಮಕ್ಕಳು.. ನನ್ನ ಕಡೆಯಿಂದ ಹೇಳುವುದಾದರೆ ಬಾನದಾರಿಯಲ್ಲಿ ಹಾಡು ಹೇಳಿದ ನಿಮಗೆ   ನನ್ನ ಕಡೆಯಿಂದ ಜಾಸ್ತಿ ಲೈಕ್ಗಳು.  ನನ್ನ ಅತಿ ಮೆಚ್ಚಿನ ಹಾಡುಗಳಲ್ಲಿ ಒಂದು.. ಯಾರೋ ಯಾರೋ ಗೀಚಿ ಹೋದ ಹಾಡು ಸಹ :-)
ಮೊನ್ನೆ ನನ್ನ ಪೋಸ್ಟ್ ಕಟುವಾಗಿತ್ತು ಅಂದ್ರೆ ನಾನೆಷ್ಟು ಬೈಸಿಕೊಂಡಿದ್ದೆ ಅಂತ ನೀವು ತಿಳಿದುಕೊಳ್ಳಬೇಕು.. :-) ಯಾಕೆಂದ್ರೆ ಕಿಚ್ಚನ ಬಗ್ಗೆ ಹೆಚ್ಚು ಆಸ್ಥೆಯಿಂದ ಬರೆಯುವ, ಮಾತಾಡುವ ನಾನು ಕಿಚ್ಚನ ಕ್ಲೋಸ್  ಫ್ರೆಂಡ್  ಅಂತ ತಿಳಿದಿದ್ದಾರೆ ಬಹಳ ಹೆಣ್ಣುಮಕ್ಕಳು :-)
ನನ್ನ ಹತ್ರ ಅವರು ನೋಡು ಹೀಗಾಗಿದೆ ಎಂದು ರೇಗಿದ್ದರು.. ಈಗ ಅವರಿಗೆ ಸಮಾಧಾನ ಆಗಿದೆ.. ಆದಷ್ಟು ಕನ್ನಡ ಅಲ್ಲದೆ ಇರುವ ಅಂಶಕ್ಕೆ ಬೆಲೆ ಕೊಡ ಬೇಡಿ.. .. ಮತ್ತೊಂದು ಸಂಗತಿ ನಿನ್ನೆ  ಅನೇಕ ಹೆಣ್ಣುಮಕ್ಕಳು (ನನ್ನನ್ನು ಬೈದವರು ಸೇರಿದಂತೆ ) ಫೋನಿಸಿದರು ಮತ್ತು ನಿಮಗೂ ಹಾಗೂ ಬಿಗ್ ಬಾಸ್ ಗೂ ಧನ್ಯವಾದ ಅರ್ಪಿಸಿದ್ದಾರೆ  , ಯಾಕೇಂತ ಬಿಡಿಸಿ ಹೇಳ ಬೇಕಿಲ್ಲಾ.. ಅಲ್ವ... !

ಲೋಪದೋಷ ?



ತುಂಬಾ ದಿನದಿಂದ ನನ್ನ ಬ್ಲಾಗ್ ಕಡೆ ಗಮನ ನೀಡುವುದಕ್ಕೆ ಆಗೇ ಇಲ್ಲ ಅದಕ್ಕೆ ಕಾರಣ ಮುಖ್ಯವಾಗಿ ಈ ಸೆಟ್ ಅಪ್ ಬಾಕ್ಸ್  ಕಥೆ.. ಅ ಪೆಟ್ಟಿಗೆಯನ್ನು ದೂರ ಮಾಡಿ ಮಲ್ಟಿ ನ್ಯಾಷನಲ್  ಕೊಡೆಗಳ ಪಾದ ಹಿಡಿದಿದ್ದಕ್ಕೆ ಇಲ್ಲಿ ಕೆಲವು ಕನ್ನಡ ಚಾನೆಲ್ ಗಳು ಪ್ರಸಾರ ಆಗಲ್ಲ. ರಂಗಣ್ಣನ  ಪಬ್ಲಿಕ್ ಟೀವಿ ನೋಡೋ ಹಾಗೆ ಇಲ್ಲ.. ಭಯಂಕರ ವಿಷಯಗಳು ಬರ್ತಾ ಇದೆ ನೋಡು ಅಂತ ನಮ್ಮ ಮೇಡಂ ಫೋನ್ ಮಾಡ್ತಾ ಇದ್ರೂ ನೋಡಲಾಗದ ಸ್ಥಿತಿ . ಹೇಯ್ ರಂಗಣ್ಣ ಏನಿದು ಕಥೆ ಎಂದು ಹೇಳಲಾಗದೆ    ಸುಮ್ಮನಿರುವ ಪರಿಸ್ಥಿತಿ ! ಕನ್ನಡದವರು ಕನ್ನಡ ಚಾನೆಲ್ಲೇ ನೋಡುತ್ತಾರೆ, ಆದರೆ ಕನ್ನಡ ಚಾನೆಲ್ಗಳು ಪ್ರಸಾರ ಆಗೋದೇ ಕಡಿಮೆ.. ಒಂದು ಕೊಡೆಯಲ್ಲಿ ಬೇರೆ ಭಾಷೆಗಳ ಅಷ್ಟು ಚಾನೆಲ್ ಬಂದ್ರು ಕನ್ನಡದವರ ಸ್ವಲ್ಪ ಚಾನೆಲ್ ಗಳು ಕಾಣೋದೆ ಇಲ್ಲ, ಇಲ್ಲಿ ಯಾರದು ಲೋಪದೋಷ ?

ನಿನ್ನೆ ನನ್ನ ಫ್ರೆಂಡ್ ಒಬ್ಬರು ಫೋನಿಸಿದರು.. ಸಾಮಾನ್ಯವಾಗಿ ಲೋಕಾಭಿರಾಮವಾಗಿ ಮಾತಾಡುವ ಅವರು ತುಂಬಾ ಸೀರಿಯಸ್ ಆಗಿ ಕೇಳಿದ್ದು ಆ ನಿಕಿತಾನ್ನ ಯಾಕೆ ಅಲ್ಲಿ ಇನ್ನು ಇಟ್ಟಿರೋದು ? ಕನ್ನಡದವರು ಇವರಿಗೆ ಬೇಡ ಹಿಂದಿಯವಳು ಕಂಡ್ರೆ ಇಷ್ಟ. ಆ ಸುದೀಪ್ ಗೆ ದರ್ಶನ್ ಫ್ರೆಂಡ್ ಅಂತನಾ ಹೀಗೆ ಮಾಡ್ತಾ ಇರೋದು, ಅವಳು ಕನ್ನಡ ಕೆಟ್ಟದಾಗಿ ಮಾತಾಡ್ತಾ ಹಾಳು ಮಾಡ್ತಾ ಇದ್ರೆ ಇವರು  ಅವಳಿಗೆ ಯಾಕೆ ಅಷ್ಟೊಂದು ಪ್ರಾಮುಖ್ಯತೆ ನೀಡ್ತಾ ಇರೋದು.. ಹೀಗೆ ಮಾತಿನ ಪ್ರವಾಹ ಹರಿದಿತ್ತು. ಒಂದು ಕ್ಷಣ ನಂಗೆ ಅರ್ಥ ಆಗಲಿಲ್ಲ, ಆ ಮೇಲೆ ತಿಳಿಯಿತು ಅದು ಈ ಟೀವಿಯ  ಬಿಗ್ ಬಾಸ್  ವಿಷ್ಯ ಅಂತ.

ನೀನು ನಿನ್ನ ಬ್ಲಾಗ್ ನಲ್ಲಿ ಬರಿ ಅಂತ ತುಂಬಾ ಫೋರ್ಸ್  ಮಾಡಿದ್ರು ಸುದೀಪ್ ಅದಕ್ಕೆ ಹೇಳ್ತಾ ಇದ್ದೀನಿ.ಸಮಸ್ತ ಕನ್ನಡ ವೀಕ್ಷಕರು ಇಷ್ಟು ದಿನ ಕಂಡಂಗೆ ನಿಕಿತ ಅನ್ನೋ ಬಣ್ಣದ ಬೊಂಬೆಯನ್ನು  ಯಾಕೆ ನೀವು ಇನ್ನು ಕನ್ನಡದವರ  ಜೊತೆ ಅಷ್ಟೊಂದು ಪ್ರೀತಿಯಾಗಿ ಸಾಕ್ತಾ ಇರೋದು, ಇದು ಹಿಂದಿ ಚಾನೆಲ್ ಅವರ ಕೃಪೆಯಿಂದ ಆರಂಭವಾದ ಕಾರ್ಯಕ್ರಮ ಎಂದಾ ? ನಾವು ಕಂಡಂಗೆ  ನಿಕಿತಾ ಕೇವಲ ಒಂದೆರಡು ಎಪಿಸೋಡ್  ಗೆ ಮಾತ್ರ ಲಾಯಕ್ಕಗಿದ್ದಳು ವಿನಃ ಇಷ್ಟು ದಿನಗಳ ಕಾಲ ಅಲ್ಲ . ಆದ್ರೆ ಅದ್ಯಾಕೋ ಬಿಗ್ ಬಾಸ್ ಮಂದಿ ಆಕೆ ಉತ್ತರ  ಭಾರತದಾಕೆ ಅಂತ ಸಕತ್ ಪ್ರೀತಿಯಿಂದ  ಇಲ್ಲೇ ಉಳಿಸಿಕೊಂಡಿದ್ದಾರೆ.
ಆದರು ಈ ವಾರದ ಎಲಿಮಿನೇಶನ್  ನಲ್ಲಿ ಆಕೆ ಉಳಿದು ಕನ್ನಡಿಗ ವೀಕ್ಷಕರ ಮನಕ್ಕೆ ಬೇಸರ ಆಗಿದೆ.. ಮತ್ತೆ ಮತ್ತೆ ಅದೆಷ್ಟರ ಮಟ್ಟಿಗೆ ಅಂದ್ರೆ ಈ ಕಾರ್ಯಕ್ರಮವನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸುವ ಗ್ರಾಮೀಣ ಜನತೆಯು ಸಹ  ಯಾಕೆ ಹೀಗಾಗಿದೆ ಎಂದು  ಪ್ರಶ್ನಿಸುತ್ತಿದ್ದಾರೆ. ಬಿಗ್ ಬಾಸ್ ನ ಒಂದೆರಡು ಆವೃತ್ತಿ  ಬಿಟ್ರೆ  ನಾನು ಸಾಮಾನ್ಯವಾಗಿ ಎಲ್ಲವನ್ನು ನೋಡೇ ಇದ್ದೀನಿ ಹಿಂದಿಯಲ್ಲಿ. ಇದು ಸಹ ಬಿಗ್ ಬಾಸ್ ಗೇಂ ವಿಧಾನ ಅಂತ ಗೊತ್ತು ನನಗೆ, ಆದ್ರೆ ಈಗಷ್ಟೇ ವೀಕ್ಷಿಸೊಕೆ ಆರಂಭ ಮಾಡಿರುವ ಕನ್ನಡ ವೀಕ್ಷಕರು ಈ ಮಾತು ಒಪ್ಪಿಕೊಳ್ಳೋಕೆ ಸಿದ್ಧ ಇಲ್ಲ, ಅವರ ದೃಷ್ಟಿಕೋನದ ಬಗ್ಗೆ ನಾನು ತುಂಬಾ ಗೌರವ ನೀಡ್ತೀನಿ ಒಬ್ಬ ಕನ್ನಡಿಗಳಾಗಿ ಹೇಳಿ ಯಾಕೆ ಪದೇಪದೇ ಹೀಗೆ ಆಗಿದ್ದು?

ಮಾಡಿ ಮುದ್ದೆಯಾ

 ಬಾ ಮಳೆಯೇ ಬಾ.. ಏನ್ ಸೆಖೆ  ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... 

ಟೀವಿ ಕಾರ್ಯಕ್ರಮಗಳ ಬಗ್ಗೆ  ಬರೆಯೋಕೆ ಆರಂಭಿಸಿದಾಗ ಇದ್ದ  ನನ್ನ ಮನಸ್ಥಿತಿ ಗೂ  ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ . ಆದರೆ ನನಗೆ  ಯಾವ ಕ್ಷಣವೂ ನನ್ನ ಬ್ಲಾಗ್ ಮೇಲೆ ಪ್ರೀತಿ ಕುಂದಿಲ್ಲ . 

ನಿನ್ನೆ ಜನಶ್ರೀ ವಾಹಿನಿಯ ಪತ್ರಕರ್ತ ನಿರೂಪಕ ರಮಾಕಾಂತ್ ಗೆ ಫೋನಿಸ ಬೇಕಾಯ್ತು . ನಾನು  ಸ್ವಲ್ಪ ಜಾಸ್ತಿನೆ ಲೈಕ್ ಮಾಡುವ ಕೆಲವು ನಿರೂಪಕರಲ್ಲಿ ರಮಾಕಾಂತ್ ಸಹ ಒಬ್ರು. ಮಾತಾಡಿ ಫೋನಿಟ್ಟ ಬಳಿಕ ಮನಸ್ಸಿಗೆ ಒಂದು ಬಗೆಯ ಆಹ್ಲಾದ ಆಯ್ತು.ಕಾರಣ  ಇಷ್ಟೇ ಆತನ ಮಾತಿನ ಶೈಲಿ , ಸನ್ನಡತೆ .  ಮಾತಿನಲ್ಲಿ ಏನು ಗೊತ್ತಾಗುತ್ತೆ ಅನ್ನಿಸ ಬಹುದು, ಆದರೆ ಭೇಟಿ ಮಾಡಿದಾಗ , ನನ್ನ ಜೊತೆ ಹರಟುವಾಗ ಎಲ್ಲಿಯೂ ಬೇಸರ ಅನ್ನಿಸಿರಲಿಲ್ಲ. ಆತನ ಪತ್ನಿ  ಸೌಮ್ಯ ಸಹ ಅಷ್ಟೇ ಸರಳ . ಒಮ್ಮೆ ಅವರ ಮನೆಗೆ ಹೋಗ ಬೇಕಾಗಿ ಬಂದಿತ್ತು, ನಾನು ಇಷ್ಟ ಪಡುವ ರುಚಿಯಾದ ಕಾಫಿ ಕೊಟ್ಟಿದ್ದ ಹೆಣ್ಣುಮಗಳು  ಮೊಳಕೆ ಕಟ್ಟಿನ  ಕಾಳು  ಸಾರು ಮಾಡುವ ಸಂಭ್ರಮದಲ್ಲಿ ಇದ್ರು. ಊಟ  ಮಾಡಿ ಹೋಗಿ ಮ್ಯಾಡಂ ಅನ್ನುವ ಬಲವಂತಕ್ಕೆ ಒಪ್ಪಿಗೆ ಸೂಚಿಸಲಾಗಲಿಲ್ಲ, ಕಾರಣ ಕೆಲಸ :-) ಆ ಮೂಲಕ  ಬಚಾವ್ ಆದೆ.. ಸಾರಿ ಸೌ  ;-)

 ಟೀವಿ ನೈನ್  ವಾಹಿನಿಯಲ್ಲಿ ನೀವು ಹೇಳಿದ್ದು ನಾವು ಕೇಳಿದ್ದು ಅನ್ನುವ ಕಾರ್ಯಕ್ರಮ ಪ್ರಸಾರ ಆಗೋದು ನಿಮಗೆ ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಸ್ಕ್ರಿಪ್ ಬರೆಯೋರ ಹೆಸರು ಶರತ್ ಚಕ್ರವರ್ತಿ ಎಂದು ಓದುವಾಗ  ಇದು ನಮ್ಮ ಶರತ್ತ ಅನ್ನುವ ಅನುಮಾನ ಕಾಡ್ತಾ ಇದ್ರೂ ನನಗೆ ಅದನ್ನು ಕನ್ಫ಼ರ್ಮ್  ಮಾಡಿಕೊಳ್ಳಲು ಆಗಿರಲಿಲ್ಲ. ಆದರೆ ಅದು ನಮ್ಮ Shaರತ್ತು ಅನ್ನುವ ಸಂಗತಿ ಗೊತ್ತಾಗೋಕೆ ಜಾಸ್ತಿ ದಿನ ಬೇಕಾಗಲಿಲ್ಲ ಬಿಡಿ :-) .ಎನೊ ಪುಟ್ಟ ನೀನ ಅದು ಅಂದಾಗ ಹುಡುಗನಿಗೆ ಸಂತೋಷ, ಹೂ ಅಕ್ಕ  ಎಂದ . ಒಳ್ಳೆಯ ರಂಗಭೂಮಿ ಕಲಾವಿದ ನಮ್ ಶರತ್ತು. ದೊಡ್ಡ ಕನಸುಗಳನ್ನು ತಲೆಯೊಳಗೆ ಇಟ್ಟುಕೊಂಡಿರುವ ಜಾಣ . ಅಕ್ಕ ಇನ್ನು ಸ್ವಲ್ಪ ದಿನ ಕಳ ಲಿ .. ಈ ಕಾರ್ಯಕ್ರಮ  ಮತ್ತೂ ಚೆನ್ನಾಗಿ ಆಗುತ್ತೆ ಅಂತ ಹೇಳಿದ್ದಾನೆ .  ಖುಷಿ ಆಗುತ್ತೆ ಕಣ್ರೀ ಪ್ರತಿಭೆಗಳಿಗೆ ಅವಕಾಶ ಸಿಕ್ಕಿರೋದು ಕಂಡ್ರೆ . 

ಈಟೀವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಬಿಗ್ ಬಾಸ್  ದಿನೇ ದಿನೇ  ಹೊಸತನಕಾಣ್ತಾ  ಇದೆ. ನನಗೆ  ಮುಖ್ಯ ಆಕರ್ಷಣೆ ಆಗಿರುವವರು.. ಆಲ್  ಟೈಮ್  ಕಿಚ್ಚ ಸುದೀಪ್ , ಜೊತೆಗೆ ಬ್ರಹ್ಮಾಂಡ ಸ್ವಾಮಿ , ಈಗ ಕಾಳಿ - ಕೋಳಿ !ಏನ್ ನಾಟಕ ಮಾಡಿದ್ರು  ಕಾಳಿ ವಾವ್ . ಅದಿಕ್ಕೆ ಹೇಳೋದು ನಮ್ಮ ಕ್ಷೇತ್ರದಲ್ಲಿ ನಾವು ಬೆಳೆಯೋಕೆ ಪ್ರಯತ್ನ ಪಡಬೇಕು  ಅಂತ . ಹಾಗಂತ ಬೇರೆಯವರು ಇಲ್ಲ ಎಂದೇನು ಅಲ್ಲ. ಅರುಣ್ ಸಾಗರ್ ವಾವ್  ಸಕತ್ ಕಣ್ರೀ . 
ಆದರೆ ಕಳೆದ ವಾರ ಸಕತ್ ಇಷ್ಟಾ ಆಗಿದ್ದು ಕಿಚ್ಚ ಮಾಡಿದ ಚಪಾತಿ.. :-) ಆಹಾ ಕಿಚ್ಚ.. ಚಪಾತಿ ಮಾಡುವ ವಿಷಯದಲ್ಲಿ ಸೈ  ಅನ್ನಿಸಿಕೊಂಡ್ರಿ . ಈ ಬಾರಿ ಮುದ್ದೆ ತಿರುವಿ   ನೋಡುಮ .. ಹಲೋ ಸುದೀಪು  ಮುದ್ದೆ ಅಂದ್ರೆ ಸುಮ್ನೆ  
ಅಲ್ಲ ಗೊತ್ತಾ.. ಏಯ್  ಕಿಚ್ಚ ಕಮಾನ್  ಮಾಡಿ ಮುದ್ದೆಯಾ ! ;-) 

 ಬಿಗ್ ಬಾಸ್  ವೀಕ್ಷಿಸುವಾಗ ತನ್ನ ಮನದಲ್ಲಿ ಉಂಟಾಗುವ ಭಾವನೆಗಳ  ಬಗ್ಗೆ ಒಬ್ಬ ಹೆಣ್ಣುಮಗಳು ಬರೆದುಕೊಂಡಿದ್ದಾಳೆ . ಏಕೆ ನನ್ನ ಎಫ್ಬಿ ಗೆಳತಿ  ತುಂಬಾ ಜಾಣೆ .. ಇಲ್ಲಿದೆ ನೋಡಿ   



ಈ ಟಿವಿಯಲ್ಲಿ ಪ್ರಸಾರವಾಗುತ್ತಿರುವ "ಬಿಗ್ ಬಾಸ್" ಈಗ ಕನ್ನಡದ ಟಾಪ್ ಒನ್ ಕಾರ್ಯಕ್ರಮ. ಹೆಚ್ಹಾಗಿ ಟಿವಿ ಕಾರ್ಯಕ್ರಮಗಳನ್ನು ನೋಡದ ನನಗೆ, ಈ ಕಾರ್ಯಕ್ರಮ ಯಾಕೋ ಇಷ್ಟ ಆಯ್ತು... ಹಿಂದಿಯಲ್ಲಿ ಇದೇ ಕಾರ್ಯಕ್ರಮ ಪ್ರಸಾರವಾದಾಗ ನಾನು ಅದರ ಬಗ್ಗೆ ತುಂಬಾ ಆಳವಾಗಿ ಯೋಚಿಸಿರಲಿಲ್ಲ...ಸರಿಯಾಗಿ ನೋಡುತ್ತಲೂ ಇರಲಿಲ್ಲ!!

ಆ ಆಟದಲ್ಲಿ ಗೆಲ್ಲುವದಕ್ಕೋಸ್ಕರ ಒಬ್ಬರ ಮೆಲೆ ಇನ್ನೊಬ್ಬರು ಎತ್ತಿ ಕಟ್ಟುವದು, ಜನರ ಮನಸನ್ನು ಸೆಳೆಯಲು ಸುಮ್-ಸುಮ್ನೆ ಅಳೋದು, ಬೇಕಾದ-ಬೇಡದ ಅನೇಕ ವಯಕ್ತಿಕ ವಿಚಾರಗಳನ್ನು ಹೇಳಿ, ಜನರಿಂದ ವೋಟು ಗಿಟ್ಟಿಸುವ ಪ್ರಯತ್ನ, ಬೇರೆ ಬೇರೆ ಸಂಸ್ಕ್ರುತಿಯಿಂದ ಬಂದು ಒಬ್ಬರನ್ನೊಬ್ಬರು ಇಷ್ಟ ಪಡುವ ರೀತಿ, ಅವರ ವಿಚಿತ್ರ ಯೋಚನೆಗಳನ್ನು ನೋಡಿದಾಗ, ನೋಡುಗರಿಗೆ ಕೋಪ, ನಗು, ಬೇಸರ ಉಂಟಾಗುವದು ಸಹಜ.

ಪ್ರತಿದಿನ ಅವರವರ ಕೆಲಸಗಳಲ್ಲಿ ಬಿಜಿಯಾಗಿದ್ದ ಜನರನ್ನು ತಂದು ಒಂದು ಮನೆಯಲ್ಲಿ ಕೂರಿಸಿ, ಅವರಿಗೆ ಟಿ.ವಿ, ಇಂಟರ್ ನೆಟ್, ಗಡಿಯಾರ ಮುಂತಾದವುಗಳಿಂದ ದೂರ ಇಟ್ಟು ಬಾಹ್ಯ ಪ್ರಪಂಚದ ಅರಿವಿಲ್ಲದೇ ಬದುಕಲು ಬಿಟ್ಟು, ಅದರ ಮೇಲೊಂದಿಷ್ಟು ಜಗಳ ಹಚ್ಚಿ ಹಾಕುವಂತಹ ಟಾಸ್ಕ್ ಗಳನ್ನು ಕೊಡುವ ಬಿಗ್ ಬಾಸ್ ನ ಮನೆಯಲ್ಲಿ ಕಳೆಯುವದು ಎಷ್ಟು ಕಷ್ಟ ಅಲ್ವ? ಅಂತಹ ಮನೆಯಲ್ಲಿ ಬೇರೆ ಬೇರೆ ಜನರೊಂದಿಗೆ ಬೆರೆತು ಬದುಕಲು ನಿಜವಾಗಲೂ ತಾಕತ್ತಿರಬೇಕು ಅಲ್ವಾ?

ನಾನು ಈ ಕಾರ್ಯಕ್ರಮವನ್ನು ಬರೀ ಎಂಟರ್ ಟೇನ್ ಮೆಂಟ್ ಗೋಸ್ಕರ ನೋಡುತ್ತಿಲ್ಲ... ಅವರ ಜಾಗದಲ್ಲಿ ನಾನಿದ್ದರೆ?.... ಅಂತ ಯೋಚಿಸ್ತೀನಿ... ಮನಸು ಗಟ್ಟಿಯಾಗಲು, ಜನರೊಡನೆ ಕೂಡಿ ಬದುಕುವದನ್ನು ಕಲಿಯಲು ಈ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಅಂತ ನನ್ನ ಅನಿಸಿಕೆ.